ಉರಿ ಸರ್ಜಿಕಲ್ ಸ್ಟ್ರೈಕ್ (ಹೊಸದಿಗಂತ)
ಸುತ್ತ ದಟ್ಟ ಕಾಡು.. ಮಗುವೊಂದು ಹಾಳೆಯ ಮೇಲೆ ಗೀಚಿಬಿಟ್ಟಂತೆ ಹಾದುಹೋಗುವ ರಸ್ತೆ. ಭಯ ಹುಟ್ಟಿಸುವ ನಿಶಃಬ್ಧ... ಆ ನಿಶಃಬ್ಧವನ್ನು ಭೇಧಿಸುವಂತೆ, ಹುಟ್ಟಬಹುದಾದ ತಲ್ಲಣವನ್ನೂ ಅಳಿಸುವಂತೆ ಹೋಗುವ ಮಿಲಿಟರಿ ಟ್ರಕ್, ಅದರೊಳಗೆ ಹಾಡುವ, ನಗುವ ಸೈನಿಕರು. ತನ್ನ ಪಾಡಿಗೆ ತಾನು ತಣ್ಣಗೆ ಹೋಗುವಾಗ ಧಡ್ ಎನ್ನುವ ಶಬ್ದ.. ಪರದೆಯ ಎದುರು ಕುಳಿತಿದ್ದರೂ ಪರದೆಯ ಒಳಗೆ ಹೋಗಿ ನಡೆಯುತ್ತಿರುವ ಘಟನೆಯ ಒಂದು ಭಾಗವಾಗಿ ಉಸಿರು ಬಿಗಿಹಿಡಿದು ನೋಡುವವರ ಕೈ ಗೊತ್ತಿಲ್ಲದೇ ಕುರ್ಚಿಯ ಹಿಡಿಯನ್ನು ಬಿಗಿಯಾಗಿ ಹಿಡಿದು ಆತಂಕದಿಂದ ನೋಡುವಾಗ ಹೃದಯದ ಬಡಿತ ಕಿವಿಗೆ ಕೇಳುವಂತಾಗಿ ಅಲ್ಲೊಂದು ತಲ್ಲಣ. ಅಂತಹ ಪರಿಸ್ಥಿತಿಯಲ್ಲಿ ತಕ್ಷಣಕ್ಕೆ ಮಾಡುವುದು ಏನು? ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿ ಆಪತ್ತಿಗೆ ಬೆನ್ನಾಗಿ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಓಡುವುದು. ಅದು ಮನುಷ್ಯ ಮಾತ್ರವಲ್ಲ ಎಲ್ಲಾ ಬದುಕಿರುವ ಜೀವಿಯೂ ಮಾಡುವ ಮೊದಲ ಕೆಲಸ. ಜೀವರಕ್ಷಿಸಿಕೊಳ್ಳಲು ಪ್ರಯತ್ನಿಸುವುದು. ಅಲ್ಲೂ ಹಾಗೆಯೇ ಆಯಿತಾ ಎಂದರೆ ಉಹೂ ಅಂತ ದುರ್ಭರ ಕ್ಷಣದಲ್ಲೂ ಇಳಿದು ಬಾಗಿಲು ಹಾಕಿ ಸುತ್ತೆಲ್ಲಾ ಹದ್ದಿನ ಕಣ್ಣುಗಳಿಂದ ನೋಡಿ ಭೀಕರತೆಯನ್ನು ಸಾವು ಪಕ್ಕದಲ್ಲೇ ಹೊಂಚು ಹಾಕುವುದನ್ನೂ ಕಂಡೂ ಶಸ್ತ್ರವನ್ನು ಕೈಯಲ್ಲಿ ಹಿಡಿದು ಆ ಮೃತ್ಯುವಿಗೆ ಎದೆಯೊಡ್ಡಿ ಮುಂದಕ್ಕೆ ನಡೆಯುವುದು ಸೈನಿಕ. ಯಾವುದೇ ಕ್ಷಣದಲ್ಲೂ ಮೃತ್ಯು ಅಪ್ಪಬಹುದು ಎಂದು ಗೊತ್ತಿದ್ದರೂ ತನ್ನ ಕುಟುಂಬ, ವೈಯುಕ್ತಿಕ ಬದುಕು, ಕನಸು,ಯಾವು...