Posts

Showing posts from August, 2017
ಕಾಶ್ಮೀರದ ಬಗ್ಗೆ ಇಂದು ಹಲವಾರು ಜನ ತಮ್ಮ ಅಜ್ಞಾನದಿಂದ ಹಲವಾರು ತರಹ ಮಾತಾಡುತ್ತಾರೆ.ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ದುರಂತವೆಂದರೆ ಅದನ್ನು ಕೇಳಲು ಕೂಡಾ ಬಹಳಷ್ಟು ಜನರಿದ್ದಾರೆ. ನಾವು ಅವರ ಬಳಿಗೆ ಹೋಗಿ ಬೀದಿ ಜಗಳವಾಡಬೇಕಿಲ್ಲ. ವಸ್ತುನಿಷ್ಠ ಚರ್ಚೆಯನ್ನು ಏರ್ಪಡಿಸಿ ನಿಜ ಸಂಗತಿಗಳನ್ನೂ ತಿಳಿಸಿದರೆ ಆಯಿತು. ಕಾಶ್ಮೀರ ನಮ್ಮದು ಎಂದು ಭಾರತ ಹೇಳುತ್ತೆ, ಪಾಕಿಸ್ತಾನವೂ ಸಹ ಹೇಳುತ್ತೆ. ನಾವು ಇವೆರಡಕ್ಕೂ ಸೇರಿಲ್ಲ ಅಂತ ಮತ್ತೊಂದು ಗುಂಪು ಹೇಳುತ್ತೆ. ಇದೆ ಅದರ ನಿಜವಾದ ಸಮಸ್ಯೆ. ಇಂಡಿಯನ್ ಇಂಡಿಪೆಂಡೆನ್ಸ್ act ಮೂಲಕ ಎರಡೂ ದೇಶಗಳ ವಿಭಜನೆಯಾಗುತ್ತೆ.ಮುಸ್ಲ್ಲಿಂ ಬಾಹುಳ್ಯ ಇರುವ ಪ್ರದೇಶಗಳು ಪಾಕಿಸ್ತಾನಕ್ಕೆ ಸೇರಿದರೆ ಉಳಿದವು ಭಾರತಕ್ಕೆ ಸೇರಿತು, ತಮ್ಮ ಪ್ರಾಂತ್ಯಗಳನ್ನು ಭಾರತಕ್ಕೋ, ಪಾಕಿಸ್ತಾನಕ್ಕೋ ಸೇರಿಸುವ ಅಥವಾ ಹಾಗೇ ಇರುವ ಸ್ವಾತಂತ್ರ್ಯವನ್ನು ಆಗಿನ ರಾಜರು/ನವಾಬರಿಗೆ ಬ್ರಿಟಿಷರು ಕೊಟ್ಟಿದ್ದರು. ಆದರೆ ಅದನ್ನು ಆಪ್ರದೇಶದ ಭೌಗೋಳಿಕ ಹಿನ್ನಲೆ ಹಾಗೂ ಆಚರಿಸುವ ಧರ್ಮದ ಹಿನ್ನಲೆಯ ಮೇಲೆ ನಿರ್ಧರಿಸುವಂತೆ ತಿಳಿಸಿದ್ದರು. ಆದರೆ ಕಾಶ್ಮೀರದ ರಾಜ ಹರಿಸಿಂಗ್ ತಾನು ಸ್ವತಂತ್ರವಾಗಿರಲು ನಿರ್ಧರಿಸಿದ.  ಇಂಡಿಯಾ ಅನ್ನೋ ಹೆಸರು ನಮಗೆ ಬೇಕು ನೀವು ಬೇರೆ ಏನಾದರೂ ಇಟ್ಟುಕೊಳ್ಳಿ ಅಂತ ಪಟ್ಟು ಹಿಡಿದಿತ್ತು ಪಾಕಿಸ್ತಾನ, ಆದರೆ ಆ ಹೆಸರು ಬಂದಿದ್ದು ಇಂಡಸ್ ನದಿಯಿಂದ ಹಾಗಾಗಿ ನಮಗೆ ಆ ಹೆಸರು ಬೇಕು ಅಂದಿತು ಭಾರತ.ಆದರೆ ಪಾ...
ಕಾಶ್ಮೀರದ ಬಗ್ಗೆ ಇಂದು ಹಲವಾರು ಜನ ತಮ್ಮ ಅಲ್ಪಜ್ಞಾನದಿಂದ ಹಲವಾರು ತರಹ ಮಾತಾಡುತ್ತಾರೆ. ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ದುರಂತವೆಂದರೆ ಅದನ್ನು ಕೇಳಲು ಕೂಡ ಬಹಳಷ್ಟು ಜನರಿದ್ದಾರೆ. ನಾವು ಅವರ ಬಳಿ ಹೋಗಿ ಬೀದಿ ಜಗಳ ಮಾಡಬೇಕಿಲ್ಲ. ವಸ್ತುನಿಷ್ಠ ಚರ್ಚೆಯನ್ನು ಏರ್ಪಡಿಸಿ ನಿಜಸಂಗತಿಗಳನ್ನ ತಿಳಿಸಿದರೆ ಸಾಕು. ಕಾಶ್ಮೀರ ನಮ್ಮದೂ ಎಂದು ಭಾರತವೂ ಹೇಳುತ್ತೆ, ಪಾಕಿಸ್ತಾನವೂ ಹೇಳುತ್ತೆ. ನಾವು ಇವೆರೆಡಕ್ಕೂ ಸೇರಿಲ್ಲ ಎಂದು ಮತ್ತೊಂದು ಗುಂಪು ಕೂಡ ಹೇಳುತ್ತೆ. ಇದೇ ಕಾಶ್ಮೀರದ ನಿಜವಾದ ಸಮಸ್ಯೆ. ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ ಪ್ರಕಾರ ಎರಡೂ ದೇಶಗಳ ವಿಭಜನೆಯಾಗುತ್ತದೆ. ಮುಸ್ಲಿಂ ಬಾಹುಳ್ಯ ಇರುವ ಪ್ರದೇಶಗಳು ಪಾಕಿಸ್ತಾನಕ್ಕೆ ಸೇರಿದರೆ ಉಳಿದವು ಭಾರತಕ್ಕೆ ಸೇರಿತು. ತಮ್ಮ ಪ್ರದೇಶಗಳನ್ನು ಭಾರತಕ್ಕೂ, ಪಾಕಿಸ್ತಾನಕ್ಕೋ ಸೇರಿಸುವ ನಿರ್ಧಾರ ಆ ಪ್ರದೇಶದ ರಾಜ/ನವಾಬರಿಗಿದೆ, ಆದರೆ ಆ ಪ್ರದೇಶದ ಭೌಗೋಳಿಕ ಹಿನ್ನಲೆ ಮತ್ತು ಅಲ್ಲಿಯ ಜನರ ಧರ್ಮದ ಆಧಾರದ ಮೇಲೆ ಅದನ್ನು ನಿರ್ಧರಿಸಬೇಕು ಎನ್ನುವ ಸಲಹೆಯನ್ನು ಬ್ರಿಟಿಷರು ಕೊಡುತ್ತಾರೆ. ಆದರೆ ಕಾಶ್ಮೀರದ ರಾಜ ಹರಿಸಿಂಗ್ ತಾನು ಸ್ವಂತಂತ್ರವಾಗಿಯೇ ಉಳಿಯಲು ನಿರ್ಧರಿಸಿದ. ಅಲ್ಲಿ ಒಂದು ಭಾಗದಲ್ಲಿ ಮುಸ್ಲಿಂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ ಇನ್ನೊಂದು ಭಾಗದಲ್ಲಿ nonmuslim ಪ್ರಾಬಲ್ಯವಿತ್ತು. ಇಂಡಿಯಾ ಅನ್ನೋ ಹೆಸರು ನಮಗೆ ಬೇಕು ನೀವು ಬೇರೇನಾದರೂ ಇಟ್ಟುಕೊಳ್ಳಿ ಎಂದು ಪಾಕಿಸ್...
ನಮಗೆ ಸೈನಿಕರಿಗೆ ಗೊತ್ತಿರೋದು ಟಾರ್ಗೆಟ್ ಮಾತ್ರ, ನಮ್ಮ ಪೂರ್ಣ ಗಮನ ಇರೋದು ಅದನ್ನು ತಲುಪವಲ್ಲಿ. ಕಾರ್ಗಿಲ್ ಯುದ್ಧದ ನಂತರ ತುಂಬಾ ಜನ ನನ್ನನ್ನು ಕೇಳಿದ್ರು ನಿಮಗೆ ಭಯವಾಗಲಿಲ್ಲವಾ, ಹೇಗೆ ಸಾದ್ಯ ಆಯ್ತು ಅಂತ. ಅಲ್ಲಿನ ಸಂದರ್ಭ ಹೇಗಿತ್ತು ಅಂದ್ರೆ, ಕಾರ್ಗಿಲ್ ನಲ್ಲಿ ದ್ರೋಹದಿಂದ ಪಾಕಿಸ್ತಾನ ಸೈನಿಕರು ಆಕ್ರಮಿಸಿಕೊಂಡಾಗ ಶ್ರೀನಗರದಲ್ಲಿ ಯಾವುದೇ ಆರ್ಮಿ ವೆಹಿಕಲ್ ಕಂಡರೂ ಬಾಂಬಿಂಗ್ ಆಗ್ತಾ ಇತ್ತು. ಇಡೀ ವಿಶ್ವ ಸಮುದಾಯ ಭಾರತ ಯುದ್ದ ಆರಂಭಿಸುವ ಮೊದಲೇ ಸೋತಿದೆ ಅಂತ ಭಾವಿಸಿತ್ತು. ಆಗ ಮೊದಲ ಬ್ಯಾಚ್ ಹೊರಟಿದ್ದು ಕ್ಯಾಪ್ಟನ್ ಸೌರಬ್ ಖಾಲಿಯಾ ನೇತೃತ್ವದಲ್ಲಿ. ಒಂದು ನಾಲ್ಕೈದು ಜನರರಿರಬಹುದು ಎಂದು ಹೊರಟಿದ್ದ ಆ ತಂಡಕ್ಕೆ ಅಲ್ಲಿಗೆ ಹೋದಮೇಲೆ ಅರಿವಾಗಿದ್ದು ಅಧಿಕ ಸಂಖ್ಯೆಯಲ್ಲಿ ಇದ್ದಾರೆಂದು. ಅವರನ್ನು ವಶಪಡಿಸಿಕೊಂಡ ಪಾಕಿಗಳು ಅವರ ದೇಹದಲ್ಲಿ ಯಾವೊಂದು ಭಾಗವನ್ನೂ ಬಿಡದೆ ಚಿತ್ರಹಿಂಸೆಗೆ ಗುರಿಪಡಿಸಿ ನಂತರ ಕೊಂದು ಕಳುಹಿಸಿತು. ಆ ಪರಿಸ್ಥಿತಿಯನ್ನು ನೋಡಿದ ನಮಗೆ ಆದದ್ದು ಭಯ, ಹೆದರಿಕೆ ಅಲ್ಲಾ , ಕಣ್ಣೆದೆರು ಬಂದಿದ್ದು ನಮ್ಮ ಫ್ಯಾಮಿಲಿಯಲ್ಲ, ಅಷ್ಟು ಚಿತ್ರಹಿಂಸೆ ಕೊಟ್ಟು ಅವರನ್ನು ಕೊಂದು ಕಳುಸಿದ ಶತ್ರುಗಳ ವಿರುದ್ಧದ ಸೇಡು ಅಷ್ಟೇ. ರೇಡಿಯೋ ರೂಂ ನಲ್ಲಿ ಕುಳಿತಿದ್ದ ನಮಗೆ ಮೊದಲ ಸಿಗ್ನಲ್ ಬಂದಿದ್ದು ಕ್ಯಾಪ್ಟನ್ ಸಂಜೀವ್ ಸಿಂಗ್ ಅವರಿಂದ ಹೋ ಯಾಯಾ ಅಂತ. ನಂತರ ಬಂದಿದ್ದು ಕ್ಯಾಪ್ಶನ್ ವಿಕ್ರಂ ಬಾತ್ರ ಅವರ ಯೇ ದಿಲ್ ಮಾಂಗೆ ಮೋರ್. ...
ಅಮ್ಮಾ ಬುಕ್ ಓದ್ಬೇಡಾ, ಮೊಬೈಲ್ನೂ ನೋಡ್ಬೇಡ, ನನ್ನೇ ನೋಡು ಅಂತ ಕೈಯಲ್ಲಿದ್ದ ಬುಕ್ ಕಿತ್ತಿಟ್ಟು ರಾಜ್ಕುಮಾರಿ ಸ್ಕೇಟ್ ಮಾಡಲು ಹೊರಟಳು. ಸ್ಕೇಟ್ ಮಾಡುವ ಮುನ್ನ ಗ್ರೌಂಡ್ ಸುತ್ತಾ 10 ರೌಂಡ್ ಓಡಿ ಆಮೇಲೆ ಸ್ವಲ್ಪ exercise ಮಾಡಿಸ್ತಾರೆ ಅವಳ ಸರ್. ಸರ್ ಆ ಕಡೆ ತುದಿಯಲ್ಲಿದ್ದರೆ ಈ ಕಡೆಯ ತುದಿಯ ಕಟ್ಟೆಯಲ್ಲಿ ಎಲ್ಲಾ ಅಮ್ಮಂದಿರು. ರನ್ ಅಂದ ಕೂಡಲೇ ಅವುಗಳಿಗೆ ಯಾರು ಓಡ್ತಾರೆ ಅನ್ನೋ ಸೋಮಾರಿತನ. ನೋಡಿ ಎಷ್ಟು ನಾಟಕ ಮಾಡ್ತಾವೆ ಅಂತ ಅಮ್ಮಂದಿರಿಗೂ ಹೆಮ್ಮೆ ತುಂಬಿದ ನಗು.  ಹಾಗಾಗಿ ಅರ್ಧ ರೌಂಡ್ ಮುಗಿಸುವ ಒಳಗೆ ಕುಳಿತಿದ್ದ ಅಮ್ಮಂದಿರ ಹತ್ತಿರ ಬಂದು ಹೊಟ್ಟೆನೋವು ಅನ್ನೋರು, ಕಾಲು ನೋವು ಅಂತ ಅಳುವವರು, ಅರ್ಧ ಓಡಿ ಆಮೇಲೆ ನಡೆಯುವವರು, ಗೆರೆಯ ಒಳಗೆ ಹೋಗಿ ದೂರ ಕಡಿಮೆ ಮಾಡಿ ಕೊಳ್ಳುವವರು, ಸರ್ ನೋಡಿದಾಗ, ಹತ್ತಿರ ಬಂದಾಗ ಮಾತ್ರ ಓಡುತ್ತಿರುವವರ ಹಾಗೆ ನಟಿಸಿ ಆಮೇಲೆ ಮಾತಾಡುತ್ತಾ ನಡೆಯುವವರು ಅಬ್ಬಾ ಓಡುವುದರಲ್ಲೂ ಎಷ್ಟೊಂದು ವೈವಿಧ್ಯ ಅನ್ನುತ್ತಾ ಅಹಿಯನ್ನೇ ಗಮನಿಸುತ್ತಿದ್ದೆ. ಜಗತ್ತು ಏನೇ ಅಪ್ಡೇಟ್ ಆದರೂ, ಮಕ್ಕಳು ಎಷ್ಟೇ ನಮಗಿಂತ ಫಾಸ್ಟ್ ಅನ್ನಿಸಿದರೂ ಈ ಹೊಟ್ಟೆನೋವು ಅನ್ನೋ ಕಾಯಿಲೆಯಿಂದ ಮಾತ್ರ ಅಪ್ಡೇಟ್ ಆಗಿಲ್ಲ ಅಂತ ಪಕ್ಕನೆ ನಗುಬಂತು. ಮತ್ತೆ ಗಮನಿಸಲು ಶುರು ಮಾಡಿದೆ, ಸರ್  ನೋಡ್ತಾರೆ ಅನ್ನೋ ಅವಸರಕ್ಕೆ ಗೆರೆಯ ಒಳಗೆ ನುಗ್ಗಿ ಮುಂದೆ ಹೋಗುವವರಿಗೆ ಸರಿದು ಜಾಗ ಮಾಡಿ ಕೊಡುತ್ತಾ, ನಿಂತು ಮಾತಾಡುವವರ ಪಕ್ಕದಿಂದ ಆಗಾಗ ಅ...
ಗೌರಿವ್ರತ ಮುಗಿದು ಊಟ ಮಾಡಿ ಸ್ವಲ್ಪ ಸುಧಾರಿಸಿಕೊಂಡು ಕಾಫಿ ಕುಡಿಯುವ ಹೊತ್ತಿಗೆ ಜಯತ್ತೆಯ ಅವಸರ ಶುರುವಾಗುತ್ತಿತ್ತು. ಯಾವ ಗದ್ದೆಯ ಅಂಚಿನಲ್ಲಿ ಹೆಚ್ಚು ಗರಿಕೆ ಸಿಗಬಹುದು ಅನ್ನುವ ಲೆಕ್ಕಾಚಾರ. ಮರುದಿನ ಗಣಪತಿಗೆ ಯಾರು ಜಾಸ್ತಿ ದೂರ್ವೆ ಕೊಯ್ದು ತರ್ತಾರೆ ಅನ್ನೋ ಅಘೋಷಿತ ಸ್ಪರ್ಧೆಯಂತೂ ಇದ್ದೇ ಇರುತ್ತಿತ್ತು. ತುಂಬಿದ ಹೊಟ್ಟೆಯಲ್ಲಿ, ಸಣ್ಣನೆಯ ಮಳೆಯಲ್ಲಿ,  ಜಾರುವ ಗದ್ದೆಯ ಅಂಚಿನಲ್ಲಿ ಜಿಟಿ ಪಿಟಿ ಮಳೆಯಲ್ಲಿ ದೂರ್ವೆ ಹುಡುಕುವುದು ಸುಲಭವೇನಲ್ಲ. ಹಾಗಾಗಿ ಮೊದಲೇ ಗುರುತಿಸಿಟ್ಟು ಕೊಂಡು ಅವತ್ತು ಅಲ್ಲಿಗೆ ಧಾಳಿಮಾಡುವ ಆಲೋಚನೆ ಹದಿನೈದು ದಿನಗಳ ಮುಂಚೆಯೇ ತಯಾರಾಗಿರುತಿತ್ತು. ಆಗ ತಾನೇ ಬೇರು ಕೊಟ್ಟು ಹಸಿರು ಒಡೆದು ತಲೆತೂಗುವ ಭತ್ತದ ಪೈರು, ಪಾದ ಮುಳುಗುವ ನೀರಿನಲ್ಲಿ ಹರಿದಾಡುವ ಏಡಿಗಳು ಕೊಯ್ಯುವ ತನ್ಮಯತೆಯಲ್ಲಿರುವ  ನಮ್ಮ ಕೈ ಕಾಲಿನ ಮೇಲೆ ಹರಿದು ಅಲ್ಲೇ ಡಾನ್ಸ್ ಮಾಡುವ ಹಾಗೆ ಮಾಡಿ ಕೈಯಲ್ಲಿರುವ ಗರಿಕೆ ಚೆಲ್ಲಪಿಲ್ಲಿಯಾಗುವುದು ತೀರಾ ಸಹಜವಾಗಿತ್ತು. ದಿನಾ ಕೊಯ್ಯುವ ಗರಿಕೆಯದು ಒಂದು ಹದವಾದರೆ ಹಬ್ಬಕ್ಕೆ ಕೊಯ್ಯುವುದೇ ಬೇರೆ ಹದ. ಮೃದುವಾದ ಚಿಗುರು ಗರಿಕೆ ಅದೂ ಐದು ಎಸಳು ಇರಬೇಕು, ಮಾಲೆ ಕಟ್ಟಲು ಬರಬೇಕು. ಅರ್ಚನೆ ಮಾಡಿದರೆ ನೋಡಲು ಕಣ್ಮನ ತುಂಬುವಂತಿರಬೇಕು. ಹಾಗಾಗಿ ಗದ್ದೆಯ ಅಂಚಿನಲ್ಲಿ ನಡೆಯುತ್ತಾ, ಅರಸುತ್ತಾ ಕೆಲವೊಮ್ಮೆ ಎಷ್ಟು ದೂರ ಹೋಗಿದ್ದೇವೆ ಅನ್ನೋದು ಮುಗಿದ ಮೇಲೆಯೇ ಅರಿವಿಗೆ ಬರುತ್ತಿದ್ದದ್ದು. ಶ್ರೇಷ್ಠವ...

ಗೌರಿ ಹಬ್ಬ.

ಶ್ರಾವಣ ಮುಗಿದು ಭಾದ್ರಪದ ಬರುವ ಹೊತ್ತಿಗೆ ಬೇಸಾಯದ ಬಹುತೇಕ ಕೆಲಸಗಳು ಮುಗಿದಿರುತ್ತದೆ. ಒಂದೇ ಸಮನೆ ಶ್ರುತಿ ಹಿಡಿದು ಹಾಡುತ್ತಿದ್ದ ಮಳೆಗೂ ಬೇಸರ ಬಂದು ಆಗಾಗ ನಿಲ್ಲಿಸಿ ಸುಮ್ಮನಾಗುತ್ತಿರುತ್ತದೆ. ಸೂರ್ಯನೂ ಸಣ್ಣಗೆ ನಗೆ ಬೀರುವ ಹೊತ್ತಿನಲ್ಲಿ ಕಾಮನಬಿಲ್ಲಿನ ಬಣ್ಣಗಳನ್ನೂ ಮೀರಿಸಿದ ವರ್ಣಗಳ ಬಳೆಗಳನ್ನು ಹೊತ್ತು ಬಳೆಗಾರರು ಹೊರಡುವ ಸಮಯವದು. ಸಸಿ, ನೆಟ್ಟಿ, ಕಳೆ ಅಂತ ಗದ್ದೆ ಕೆಲಸದಲ್ಲಿ ವ್ಯಸ್ತರಾಗಿದ್ದ ಜನಗಳಿಗೆ, ಮಳೆಗೆ, ಗಾಳಿಗೆ ಎಲ್ಲರಿಗೂ  ಕೊಂಚ ವಿಶ್ರಾಂತಿ ಸಮಯ. ಸ್ವಲ್ಪ ನಿರಾಳವಾಗುತ್ತಿದ್ದಂತೆ ಹೆಣ್ಮಕ್ಕಳಿಗೆ ತವರಿನ ನೆನಪು ಬಿಟ್ಟು ಬಿಟ್ಟು ಸುರಿಯೋ ಮಳೆಯಂತೆ ಸಹಜ. ಶ್ರಾವಣದ ಹಬ್ಬ ಹರಿದಿನಗಳ ಸಂಭ್ರಮದಲ್ಲಿ ಅಮ್ಮಂದಿರಿಗೆ, ಅಜ್ಜಿಯರಿಗೆ ಗೆಜ್ಜೆವಸ್ತ್ರ ಮಾಡುವ ಕೆಲಸ. ಮನೆಯಂಗಳದಲ್ಲಿ ಬೆಳೆದ ಹತ್ತಿಯನ್ನು ಬಿಡಿಸಿ ಬೆಚ್ಚಗೆ ಡಬ್ಬಿಯಲ್ಲಿ ತುಂಬಿ ತಂಡಿಯಾಗದಂತೆ ಅಟ್ಟದಲ್ಲಿಟ್ಟದ್ದನ್ನು ಕೆಳಗಿಸಿ ಅದಕ್ಕೆ ಮುಕ್ತಿ ಕೊಡುವ ಭರಾಟೆ. ಮಧ್ಯಾನದ ಹೊತ್ತಿನಲ್ಲಿ ಅದನ್ನು ಮೆದುವಾಗಿ ಬಿಡಿಸಿ, ಹಿಂಜಿ ಅದನ್ನು ಶುಭ್ರಗೊಳಿಸಲು ತಾಳ್ಮೆ ಬೇಕು. ಅನಂತರ ಹೂ ಬತ್ತಿ, ಗೆಜ್ಜೆವಸ್ತ್ರ ಮಾಡುವುದು ಒಂದು ರೀತಿಯಾದರೆ ಗೌರಿ, ಗಣೇಶನಿಗೆ ಮಾಡೋ ಗೆಜ್ಜೆವಸ್ತ್ರದ ತಯಾರಿಯೇ ಬೇರೆ. ತವರಿನ ಮೋಹ ದೇವಾನುದೇವತೆಗಳನ್ನೇ ಬಿಟ್ಟಿಲ್ಲವಂತೆ. ಕೆಲಸದಿಂದ ಹಗುರವಾಗುವ ಹೊತ್ತಿನಲ್ಲಿ ಗೌರಿಗೂ ತವರಿನ ಬಯಕೆ. ತವರಲ್ಲಿ ಮಗಳನ್ನು ಸ್ವಾಗತಿಸುವ ಸಂಭ್ರಮ. ...
ಬಾದಾಮಿಯನ್ನು ವಾಣಿಜ್ಯನಗರಿಯನ್ನಾಗಿಸಿ ಕೊಂಡ ಚಾಲುಕ್ಯರ ಚಿತ್ತ ನಂತರ ಹರಿದಿದ್ದು ಪಟ್ಟದಕಲ್ಲು ಕಡೆ. ಅದಕ್ಕೆ ಕಿಸುವೊಳಲ್ ಅಥವಾ ರಕ್ತಪುರ ಅಂತ ಕರೆಯಲಾಗುತ್ತಿತ್ತು. ಅಲ್ಲಿನ ಕೆಂಪು ಮಣ್ಣು ಹಾಗೂ ಕಲ್ಲುಗಳ ಬಣ್ಣವೂ ಕೆಂಪಾಗಿದ್ದರಿಂದ ಈ ಹೆಸರಿನಿಂದಲೇ ಪ್ರಸಿದ್ದಿಯಾಗಿತ್ತು. ಇಲ್ಲಿ ಮಲಪ್ರಭಾ ಉತ್ತರವಾಹಿನಿ..ಹಾಗಾಗಿ ಇದನ್ನು ಪವಿತ್ರ ಸ್ಥಳ ಅಂತ ಭಾವಿಸಿದ ಚಾಲುಕ್ಯ ರಾಜರು ತಮ್ಮ ಪಟ್ಟಾಭಿಷೇಕವನ್ನು ಇಲ್ಲಿಯೇ ಮಾಡಿಕೊಳ್ಳುತ್ತಿದ್ದರಂತೆ. ಹಾಗಾಗಿ ಕ್ರಮೇಣ ಇದು ಪಟ್ಟದಕಲ್ಲು ಎಂದು ಪ್ರಸಿದ್ದಿಯಾಗಿದ್ದು. ಈ ವೇಳೆಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿ ಪ್ರಬಲರಾಗಿದ್ದ ಚಾಲುಕ್ಯರ ತಮ್ಮ ಗಮನವನ್ನು ವಾಸ್ತುಶಿಲ್ಪದ ಕಡೆ ಸಂಪೂರ್ಣವಾಗಿ ಹರಿಸಿದ್ದರಿಂದ ಮತ್ತು ಅದಕ್ಕೆ ಪಟ್ಟದಕಲ್ಲನ್ನೇ ಆರಿಸಿಕೊಂಡಿದ್ದರಿಂದ ಇದು ಸಾಂಸ್ಕೃತಿಕ ನಗರಿಯಾಗಿ ಬೆಳವಣಿಗೆ ಹೊಂದಿದೆ. ಈಗ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವುದರಿನ ರಕ್ಷಣೆಯೂ ದೊರಕಿದೆ. ಐಹೊಳೆ, ಬಾದಾಮಿಯನ್ನು ನೋಡಿ ಸಂಕಟಪಟ್ಟು ಇಲ್ಲಿ ಬಂದರೆ ಸಂತಸದ ತಂಗಾಳಿ ಸ್ಪರ್ಶಿಸಿ ಮುದಗೊಳಿಸುತ್ತದೆ. ಬೇರೊಂದು ಲೋಕಕ್ಕೆ ಬಂದ ಅನುಭವವಾಗುತ್ತದೆ. ಪಲ್ಲವರ ಅಧೀನದಲ್ಲಿದ್ದ ಸಾಮ್ರಾಜ್ಯವನ್ನು ಪುನಃ ಪ್ರತಿಷ್ಟಾಪಿಸಿದ ಕೀರ್ತಿಗೆ ಭಾಜನನಾದ ವಿಕ್ರಮಾದಿತ್ಯ ಶೈವ ಧರ್ಮವನ್ನು ಸ್ವೀಕರಿಸಿದ್ದರಿಂದ ಇಲ್ಲಿ ಎಲ್ಲವೂ ಶಿವನ ದೇವಾಲಯಗಳೇ ನಿರ್ಮಾಣವಾಗಿದೆ. ಪಲ್ಲವರ ಮೇಲೆ ಗೆದ್ದ ಕುರುಹಾಗಿ ಆತ ಇಲ್ಲಿ ವಿಜಯಸ್ತಂಭವನ...
ಎರಡು ಮತ್ತೆ ಮೂರನೇ ಗುಹೆ ವೈಷ್ಣವ ಗುಹೆ ಎಂದು ಪ್ರಚಲಿತ. ಇವೆರೆಡರಲ್ಲೂ ವಿಷ್ಣುವಿಗೆ ಸಂಬಂಧಪಟ್ಟ ಕೆತ್ತನೆಗಳು ಮಾತ್ರ ಕಾಣ ಸಿಗುತ್ತದೆ. ಇವೆರೆಡನ್ನ ಕೆತ್ತಲು 12 ವರ್ಷಗಳ ಕಾಲ ಹಿಡಿಯಿತಂತೆ. ಮೊದಲ ಹಾಗೂ ಕೊನೆಯ ಗುಹೆಗಳಿಗೆ ಹೋಲಿಸಿದರೆ ಇವೆರಡರಲ್ಲಿ ಕೆತ್ತನೆ ಜಾಸ್ತಿ ಜಾಗವೂ ವಿಶಾಲವಾಗಿದೆ.ಎರಡು ಮತ್ತು ಮೂರನೆಯ ಗುಹೆಯ ಮಧ್ಯದಲ್ಲಿ ಒಂದು ನೈಸರ್ಗಿಕ ಗುಹೆಯಿದೆ. ಒಳಗಡೆ ಬುದ್ಧನ ಶಿಲ್ಪವಿದೆ. ಇಲ್ಲಿ ಮಹಾವಿಷ್ಣು ಆದಿಶೇಷನ ಮೇಲೆ ಕುಳಿತಿರುವ ಚಿತ್ರವಿದೆ. ಆದಿಶೇಷನ ಮೇಲೆ ಮಲಗಿರುವ ಭಂಗಿಯಲ್ಲಿ ಬಹಳ ಚಿತ್ರಗಳು ಇರುವುದರಿಂದ ಕುಳಿತಿರುವ ಚಿತ್ರ ಅಪರೂಪದ್ದೇ. ಕಂಬಗಳ ಸಾಲಿನಲ್ಲಿ ಅದನ್ನು ನೋಡಿದಾಗ ಒಡ್ಡೋಲಗದ ರೀತಿ ಭಾಸವಾಗುತ್ತದೆ. ಚಾಲುಕ್ಯ ರಾಜರು ಸಿಂಹಾಸನದಲ್ಲಿ ಹೀಗೆ ಕುಳಿತು ರಾಜ್ಯಭಾರ ಮಾಡುತ್ತಿದ್ದರಂತೆ. ನಂತರದ ಚಿತ್ರ ವಿಜಯ ನರಸಿಂಹ. ಹಿರಣ್ಯಕಶಿಪು ಸಂಹಾರದ ಬಳಿಕದ ಚಿತ್ರ. ಪಕ್ಕದಲ್ಲಿ ಪುಟ್ಟ ಪ್ರಹ್ಲಾದ ಹಾಗೂ ಗರುಡ ನಿಂತಿರುವುದು ಕಾಣುತ್ತದೆ. ವಿಷ್ಣುವಿನ ಐದನೇ ಅವತಾರವಾದ ವಾಮನ ಅವತಾರದ ಚಿತ್ರಣವನ್ನೂ ಇಲ್ಲಿ ಕಾಣಬಹುದು. ಪುಟ್ಟ ವಾಮನ ದೈತ್ಯಾಕಾರವಾಗಿ ಬೆಳೆದು ಒಂದು ಕಾಲನ್ನು ಭೂಮಿಯಲ್ಲೂ ಇನ್ನೊಂದು ಕಾಲನ್ನು ಆಕಾಶದಲ್ಲೂ ಇಟ್ಟ ಭಂಗಿಯಲ್ಲಿ ಕೆತ್ತಿರುವ ಈ ವಿಗ್ರಹದ ಕೆಳಭಾಗದಲ್ಲಿ ಬಳಿ ಚಕ್ರವರ್ತಿಯ ಮಗ ವಾಮನನ ಕಾಲು ಹಿಡಿದಿರುವುದು ಕಾಣುತ್ತದೆ. ನಂತರದ ನರವರಾಹ. ಇದು ಚಾಲುಕ್ಯರ ಚಿನ್ಹೆಯೂ ಆಗಿತ್ತು. ನಂತರದ ಕಾಲದಲ್...
ಸಹಜವಾಗಿ ಎಲ್ಲಾ ರಾಜರಿಗೂ ಒಂದು ರಾಜಧಾನಿ ಇದ್ದರೆ ಚಾಲುಕ್ಯ ಸಾಮ್ರಾಜ್ಯಕ್ಕೆ ಮೂರು ರಾಜಧಾನಿಗಳು. ಮೊದಲು ಮೆಟ್ಟಿಲು ಐಹೊಳೆ ಆದರೆ ಸ್ವಲ್ಪ ಪ್ರವರ್ಧಮಾನಕ್ಕೆ ಬರುತ್ತಿದ್ದ ಹಾಗೆ ಅವರು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿ ಕೊಂಡಿದ್ದು ಬಾದಾಮಿಯನ್ನು. ನಂತರ ಐಹೊಳೆ ಶಿಕ್ಷಣ ಕ್ಷೇತ್ರವಾಗಿ ಪ್ರಸಿದ್ದಿ ಹೊಂದಿತು. ಬಾದಾಮಿಯ ಮೂಲ ಹೆಸರು ವಾತಾಪಿ ಪುರ. ವಾತಾಪಿ ಎಂಬ ರಾಕ್ಷಸನನ್ನು ಅಗಸ್ತ್ಯರು ಜೀರ್ಣಿಸಿಕೊಂಡ ಸ್ಥಳವಿದು ಅನ್ನೋದು ಪುರಾಣದಲ್ಲಿ ಉಲ್ಲೇಖ. ಹಾಗಾಗಿಯೇ ಇಂದಿಗೂ ಅಲ್ಲಿರುವ ಕೊಳ ಅಗಸ್ತ್ಯ ತೀರ್ಥವೆಂದೇ ಪ್ರಸಿದ್ಧಿ. ಪ್ರಕೃತಿ ನಿರ್ಮಿತ ಧೀಮಂತ ಬೆಟ್ಟಗಳು ಇಲ್ಲಿಯ ವಿಶೇಷ. ಇಲ್ಲಿಯ ಬೆಟ್ಟಗಳು ಬಾದಾಮಿಯ ಬಣ್ಣದಲ್ಲಿ ಇರುವುದರಿಂದ ಇದಕ್ಕೆ ಬಾದಾಮಿ ಅನ್ನೋ ಹೆಸರು ಬಂತಂತೆ. ಹಸಿರಿನ ನಡುವೆ ಕಂದು ಬಣ್ಣದ ಈ ಬೆಟ್ಟಗಳು ತಲೆಯೆತ್ತಿ ನಿಂತು ಊರಿಗೆ ಶೋಭೆತಂದುಕೊಟ್ಟಿವೆ. ಇದು ಚಾಲುಕ್ಯರ ಮಾಧ್ಯಮಿಕ ಹಂತ. ಇದು ವಾಣಿಜ್ಯನಗರವಾಗಿ ಪ್ರಮುಖಪಾತ್ರ ವಹಿಸಿತ್ತು. ಹಬ್ಬಿದ್ದ ನೈಸರ್ಗಿಕ ಬಂಡೆಗಳ ನಡುವೆ ಸಹಜವಾಗಿ ನಿರ್ಮಿತವಾದ ಗುಹೆಯನ್ನು ನೋಡಿದ ವಿನಯಾದಿತ್ಯ ಅಣ್ಣ ವಿಕ್ರಮಾದಿತ್ಯನ ಪಟ್ಟಾಭಿಷೇಕದ ನಂತರ ಅವನಿಗೆ ಬಹುಮಾನವಾಗಿ ಕೊಡಲು ಈ ಗುಹಾಂತರ ದೇವಾಲಯಗಳನ್ನು ನಿರ್ಮಿಸಿದನಂತೆ. 18 ವರ್ಷಗಲ್ಲಿ ನಿರ್ಮಾಣವಾದ ಈ ನಾಲ್ಕು ಗುಹಾಂತರ ದೇವಾಲಯಗಳಲ್ಲಿ ಮೊದಲನೆಯದು ಶೈವ ಗುಹೆ, ಎರಡು ಮತ್ತು ಮೂರೂ ವೈಷ್ಣವ ಗುಹೆ ಹಾಗು ನಾಲ್ಕನೆಯದು ಜೈನ ಗುಹೆ. ಎಲ್ಲ...
ಮಹಾಕೂಟ ಮುಗಿಸಿ ಐಹೊಳೆಗೆ ಹೋಗುವಾಗ ಯಾವುದೇ ಕಲ್ಪನೆಗಳನ್ನ ಇಟ್ಟುಕೊಳ್ಳಬಾರದು ಅಂತ ನಿರ್ಧರಿಸಿಯೇ ಕಾರು ಹತ್ತಿದ್ದೆ. ಅರ್ಧ ಮುಗಿದ ರಸ್ತೆಗಳು, ಹೊಂಡಗಳು ಕಚ್ಚಾ ದಾರಿಗಳ ನಡುವೆ ಪ್ರಯಾಣ ಸಾಗಿತ್ತು. ಆಗೊಮ್ಮೆ ಈಗೊಮ್ಮೆ ಎದುರಾಗುವ ವಾಹನ ಬಿಟ್ಟರೆ ಇಡಿ ರಸ್ತೆ ನಿರ್ಜನವಾಗಿತ್ತು. ರಸ್ತೆಯ ಬದಿಯಲ್ಲಿ ಜೋಳ ತಲೆದೂಗುತ್ತಿದ್ದರೆ ಸೂರ್ಯಕಾಂತಿ ನಗುತ್ತಿತ್ತು. ಅಮ್ಮಾ ಒಂದು ವೆಹಿಕಲ್ ಇಲ್ವಲ್ಲೇ ನನ್ನ ಸೈಕಲ್ ತಂದಿದ್ದಾರೆ ಆರಾಮಾಗಿ ಓಡಿಸಬಹುದಿತ್ತು ಅಂತ ಬಿಟ್ಟ ಕಣ್ಣುಗಳಿಂದ ರಸ್ತೆಯನ್ನು ಗಮನಿಸಿ ಅಹಿ ಥ್ರಿಲ್ ಆಗುತಿದ್ದಳು. ದೂರದಲ್ಲಿ ಬಂಡೆಯ ನಡುವಿನಲ್ಲಿ ಒಂದು ಪುಟ್ಟ ಮನೆ ಕಾಣಿಸಿ ಅದೆಷ್ಟು ಇಷ್ಟವಾಯಿತು ಅಂದ್ರೆ ಕಾರನ್ನು ಅಲ್ಲಿ ತಿರುಗಿಸಲು ಹೇಳಿ ಅದನ್ನೇ ನೋಡುತ್ತಿದ್ದೆವು.ಸದ್ದೇ ಇಲ್ಲದ, ಜನರೂ ಇಲ್ಲದ ಏಕಾಂತ ಜಾಗದಲ್ಲಿ ತಲೆಯೆತ್ತಿ ನಿಂತ ಅದು ಬಸದಿ ಅಂತ ಅರಿವಾಗಿದ್ದು ಒಳಗೆ ಕಾಲಿಟ್ಟಾಗಲೇ. ನಿಶಬ್ದದಲ್ಲೇ ಒಳಗಿನ ಸದ್ದು ಸ್ಪಷ್ಟವಾಗಿ ಕೇಳೋದು ಅಂತ ಇಂಥ ಜಾಗದಲ್ಲಿ ಬಸದಿ ಕಟ್ಟಿ ವಾಸಿಸುತ್ತಿದ್ದರಾ ಅನ್ನಿಸಿತು ಒಂದು ಕ್ಷಣ. ಮೋಡಕಟ್ಟಿದ ವಾತಾವರಣದಲ್ಲಿ ವಿವರಿಸಲಾಗದ ಒಂದು ಧಗೆ ಆವರಿಸಿರುತ್ತೆ. ಅಂತಹ ಬೇಗುದಿಯಿಂದ ತಪ್ಪಿಸಿಕೊಂಡು ಒಳಗೆ ಕಾಲಿಟ್ಟರೆ ಶಾಂತ ನಿಶಬ್ದ ಜಗತ್ತು ಎದುರಾಗಿ ಮೌನ ತಬ್ಬಿಕೊಳ್ಳುತ್ತೆ. ನಾವು ಅರ್ಥವಾಗೋದು ಮೌನದಲ್ಲೇ ಆದರೆ ಆ ಮೌನವನ್ನು ಜೀರ್ಣಿಸಿಕೊಳ್ಳುವ ಸಂಕಲ್ಪಶಕ್ತಿ ಇಲ್ಲದಿದ್ದರೆ ಆ ಮೌನ ಭಯವನ್ನೂ ಹುಟ...

ಮಹಾಕೂಟ

ಬೆಳಿಗ್ಗೆಯೆದ್ದು ರೆಡಿ ಆಗಿ ತಿಂಡಿ ತಿಂದು ಹೊರಬರುವ ವೇಳೆಗೆ ಸಾರಥಿ ತನ್ನ ರಥದೊಂದಿಗೆ ಕಾಯುತ್ತಿದ್ದ. ನಾವೂ ತಡಮಾಡದೆ ಆರೋಹಣ ಮಾಡಿದ ಕೂಡಲೇ ಅದಕ್ಕೆ ವಾಯುವೇಗ. ಚಿಕ್ಕ ವಯಸ್ಸಿನ ಹುಡುಗ ಆದರೆ ವೇಗ ಮಾತ್ರ ತುಸು ಜಾಸ್ತಿ ಅನ್ನಿಸುವಷ್ಟೇ ಇತ್ತು. ಮಹಾಕೂಟದವರೆಗಿನ ರಸ್ತೆಯೂ ಅಷ್ಟೇ ಚೆನ್ನಾಗಿದೆ. ದಕ್ಷಿಣದ ಮಹಾಕಾಶಿ ಅಂತ ಕರೆಸಿಕೊಳ್ಳುವ ಅದನ್ನು ನೋಡಲು ಕುತೂಹಲ ಸ್ವಲ್ಪ ಜಾಸ್ತಿಯೇ ಇತ್ತು. ಹೀಗಿರಬಹುದು ಹಾಗಿರಬಹ್ದು ಅನ್ನೋ ಕಲ್ಪನೆಗಳೂ ಸಹ. ಹೋಗಿ ಇಳಿಯುತ್ತಿದ್ದಂತೆ ಅಲ್ಲಿದ್ದ ಆಲದಮರದ ಬಿಳಲುಗಳನ್ನ ಹಿಡಿದು ಜೋಕಾಲಿಯಾಡುತ್ತಿದ್ದವರನ್ನು ನೋಡಿದ ಕೂಡಲೇ ಅಹಿಯ ಕಣ್ಣುಗಳಲ್ಲಿ ಆಸೆ ನರ್ತಿಸುತ್ತಿತ್ತು. ಮೊದ್ಲು ದೇವರಿಗೆ ನಮಸ್ಕಾರ ಮಾಡಿ ಬರೋಣ ಬಾ ಅಂತ ಅವಳನ್ನು ಆಲ್ಮೋಸ್ಟ್ ಎಳೆದುಕೊಂಡು ಒಳಗೆ ಕಾಲಿಟ್ಟರೆ ನನ್ನೆಲ್ಲಾ ಕಲ್ಪನೆಗಳು ಅಲ್ಲೇ ಬಿದ್ದು ವಿಲವಿಲಒದ್ದಾಡಿದವು. ಮನುಷ್ಯನ ಸ್ವಭಾವವೇ ಹೀಗೇನೋ. ಅರಿಯುವ ಮೊದಲೇ ಅದಕ್ಕೊಂದು ನಮ್ಮದೇ ಕಲ್ಪನೆಯಲ್ಲಿ ರೂಪುಕೊಟ್ಟುಬಿಡುವುದು. ಆಮೇಲೆ ಅಯ್ಯೋ ನಾವಂದುಕೊಂಡ ಹಾಗೇನು ಇಲ್ಲಾ ಅಂತ ಕೊರಗೋದು. ಪುರಾತನ ದೇವಸ್ಥಾನ, ಅದರಲ್ಲೂ ದಕ್ಷಿಣದ ಕಾಶಿ ಎಂದೇ ಪ್ರಸಿದ್ದಿಯಾಗಿರೋ ಶಕ್ತಿಪೀಠ ಕಾಶಿಗೆ ಯಾವುದರಲ್ಲೂ ಕಡಿಮೆಯಿಲ್ಲವೆಂದು ನಾರುತ್ತಿದ್ದ ವಾಸನೆಯೇ ಹೇಳುತ್ತಿತ್ತು. ಅಲ್ಲೇ ಇದ್ದ ಪುಷ್ಕರಣಿಯಲ್ಲಿ ಮಿಂದು ಬಂದವರ ಮೈಯಿಂದ ಇಳಿಯುತ್ತಿದ್ದ ನೀರು, ಹೊರಗಿನಿಂದ ಹೋದವರ ಕಾಲಿನಲ್ಲಿ...
ಬದಾಮಿಗೆ ಹೋಗುವ ಯೋಚನೆ ಮಾಡಿದಾಗ ಅಲ್ಲಿ ಎಲ್ಲೆಲ್ಲಿಗೆ ಹೋಗಬೇಕು ಅನ್ನುವ ಲಿಸ್ಟ್ ನಲ್ಲಿ ದೇವಸ್ಥಾನದ ಹೆಸರು ಇರಲಿಲ್ಲ. ಮೊದಲಿಂದಲೂ ವಿಪರಿತ ಜನಜಂಗುಳಿ, ನೂಕು ನುಗ್ಗಲು ಇರುವ ಜಾಗಗಳೆಂದರೆ ಸ್ವಲ್ಪ ಅಂತರವನ್ನು ಕಾಯ್ದುಕೊಳ್ಳುತ್ತೇನೆ. ಇರುವ ಪುಟ್ಟ ಬದುಕು ಆದಷ್ಟು ನಿರಾಳವಾಗಿರಬೇಕೆ ವಿನಃ ಉಸಿರುಗಟ್ಟಿಸುವಂತಿರಬಾರದು. ನಾಲ್ಕೈದು ದಿನಗಳ ಸಾಲು ರಜೆ ಬಹುತೇಕರಿಗೆ ಮರಳಿ ಊರಿಗೆ ಹೋಗುವ ತುಡಿತ. ಬೆಂಗಳೂರು ಬದುಕು ಕೊಟ್ಟರೂ, ಏನೇ ಐಷಾರಾಮಿ ಸವಲತ್ತು ಕೊಟ್ಟರೂ  ಒಂದೆರೆಡು ರಜೆ ಬಂದ ತಕ್ಷಣ ಊರು ಕೈಬೀಸಿ ಕರೆಯುತ್ತದೆ. ಊರಿನ ಮೋಹದಿಂದ ಕಳಚಿಕೊಳ್ಳುವುದು ಅಷ್ಟು ಸುಲಭವಲ್ಲ. ಹಾಗಾಗಿ ಟ್ರಾಫಿಕ್ ಮಹಾಸಾಗರ ದಾಟಲು ಬಹಳಷ್ಟು ಸಮಯ ಹಿಡಿದಿದ್ದರಿಂದ ಬದಾಮಿ ತಲುಪುವ ವೇಳೆಗೆ ಗಂಟೆ ಹತ್ತಾಗಿತ್ತು. ಸುಸ್ತು ಆವರಿಸಿತ್ತು. ರೂಂ ತಲುಪಿ ಅದಾಗಲೇ ಗೋಳಾಡುತ್ತಿದ್ದ ಹೊಟ್ಟೆಗೆ ಸಮಾಧಾನ ಮಾಡಿ ಫ್ರೆಶ್ ಆಗುವುದರೊಳಗೆ ಸೂರ್ಯ ನಡುನೆತ್ತಿಗೆ ಬಂದಾಗಿತ್ತು. ಅಲ್ಲೂ ಮೋಡಕವಿದ ವಾತಾವರಣವಿದ್ದರೂ ಧಗೆ ಸಣ್ಣಗೆ ಹೊಗೆಯಾಡುತ್ತಿತ್ತು. ಹಾಗಾಗಿ ವಿಶ್ರಾಂತಿ ತೆಗೆದುಕೊಂಡು ಇಳಿ ಸಂಜೆಯ ತಣ್ಣನೆಯ ವೇಳೆಯಲ್ಲಿ ಕಾಫಿ ಕುಡಿಯುತ್ತಿರುವಾಗ ಬಂದ ಮ್ಯಾನೇಜರ್ ಇಷ್ಟೊತ್ತಿಗೆ ರಶ್ ಇರೋಲ್ಲ, ಒಂದು ಆಟೋಗೆ ಹೇಳ್ತೀನಿ ದೇವಸ್ಥಾನಕ್ಕೆ ಹೋಗಿಬನ್ನಿ ಅಂದ್ರು. ಅಹಿಯ ಮುಖವನ್ನೇ ದಿಟ್ಟಿಸಿದೆ ರೆಡಿ ಅಮ್ಮಾ ಅಂದ್ಲು. ಸರಿ ಅಂತ ಹೊರಟಿದ್ದಾಯ್ತು. ನನಗೋ ಈ ಆಟೋದವರ ಮುಖ ನೋಡಿ ...

ಗರಿಕೆ....

ಇದ್ದ ಜಾಗವನ್ನು ವರಾಹಿಗೆ ಒಪ್ಪಿಸಿ ಹೊಸ ಜಾಗಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಬರುವಾಗ ಇದ್ದಿದ್ದು ನಮ್ಮನೆ ಮಾತ್ರವಲ್ಲ, ಆಚೆಮನೆ ಹಾಗೂ ಪುಟ್ಟ ಗಣಪತಿಯ ದೇವಸ್ಥಾನ. ಬೆರಗು ಕಣ್ಣಿಂದ ನೋಡುತ್ತಾ ಬಂದವಳಿಗೆ ಅವೆರಡೂ ಬದುಕಲ್ಲಿ ಪ್ರಮುಖ ಪಾತ್ರ ವಹಿಸುತ್ತೆ, ಉಸಿರಿನೊಂದಿಗೆ ಮಿಳಿತವಾಗುತ್ತೆ ಅನ್ನೋ ಕಲ್ಪನೆ ಕನಸಲ್ಲೂ  ಇರಲಿಲ್ಲ. ಹಾಗಂತ ಆಚೆಮನೆಯವರೇನೂ ಅಪರಿಚಿತರಾಗಿರಲಿಲ್ಲ. ಪರಿಚಿತರೆಲ್ಲಾ ಅತ್ಮಿಯರಾಗಬೇಕೂ ಅಂದೇನಿಲ್ಲವಲ್ಲ. ಯಾರೂ ಮಕ್ಕಳಿಲ್ಲದ ಆ ಮನೆಯ ಬಗ್ಗೆ ಅಂತಹ ಆಸಕ್ತಿ ಯಾಕಾದ್ರೂ ಇರುತ್ತೆ. ಅಲ್ಲಿ ಆಡೋಕೆ ಯಾರೂ ಇಲ್ವಾ ಅಂತ ಚಿಕ್ಕಿಯ ಬಳಿಗೆ ಹೇಳಿ ಮಂಕಾದವಳಿಗೆ ಜೀವನದಲ್ಲಿ ಬೆಳಕು ತುಂಬಿದ್ದು ನಂತರ ಅದೇ ಮನೆ. ಪ್ರತಿದಿನ ಗರಿಕೆಯನ್ನು ಕೂಯ್ದು ಮಾಲೆ ಕಟ್ಟಿ ಗಣಪತಿಗೆ ಹಾಕುವುದು ಜಯತ್ತೆಯ ದೈನಂದಿನ ಕಾಯಕಗಳಲ್ಲಿ ಒಂದು. ಸಮಯ ಬದಲಾದರೂ ಕೆಲಸ ಮಾತ್ರ ಬದಲಾಗುತ್ತಿರಲಿಲ್ಲ. ಅದನ್ನೊಂದು ವ್ರತದಂತೆ ಶ್ರದ್ಧೆಯಿಂದ ಪಾಲಿಸುತ್ತಿದ್ದರು. ಎಲ್ಲೆಲ್ಲೋ ಹುಡುಕಿ ಕೊನೆಗೆ ಒಂದು ಮುಷ್ಟಿಯಷ್ಟಾದರೂ  ಗರಿಕೆ ಕುಯಿದು ಸಂತೃಪ್ತಿಯಿಂದ ಮನೆಯ ಕಡೆ ನಡೆಯುತ್ತಿದ್ದರು. ಕೆಲವೊಮ್ಮೆ ಅವರ ಜೊತೆ ನಾವೂ ಹೋಗುತ್ತಿದ್ದೆವು..  ತೀರಾ ಬೇಸಿಗೆಯಲ್ಲಿ ನೀರಿಲ್ಲದೆ ಗರಿಕೆಯೂ ಒರಟಾಗುತ್ತಿತ್ತು. ಒಂದು ದಿನ ಹೀಗೆ ಗರಿಕೆಯನ್ನು ಕಟ್ಟುತ್ತಿರುವಾಗ ಪಾಪ ಎಷ್ಟೊಂದು ಬಿರುಸಾಗಿದೆ ಚುಚ್ಚುತ್ತೋ ಏನೋ ಗಣಪತಿಗೆ ಒಂದು ಮಳೆಯಾದರೂ ಬರಬಾರದ ಅನ್...