ಕಾಶ್ಮೀರದ ಬಗ್ಗೆ ಇಂದು ಹಲವಾರು ಜನ ತಮ್ಮ ಅಜ್ಞಾನದಿಂದ ಹಲವಾರು ತರಹ ಮಾತಾಡುತ್ತಾರೆ.ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ದುರಂತವೆಂದರೆ ಅದನ್ನು ಕೇಳಲು ಕೂಡಾ ಬಹಳಷ್ಟು ಜನರಿದ್ದಾರೆ. ನಾವು ಅವರ ಬಳಿಗೆ ಹೋಗಿ ಬೀದಿ ಜಗಳವಾಡಬೇಕಿಲ್ಲ. ವಸ್ತುನಿಷ್ಠ ಚರ್ಚೆಯನ್ನು ಏರ್ಪಡಿಸಿ ನಿಜ ಸಂಗತಿಗಳನ್ನೂ ತಿಳಿಸಿದರೆ ಆಯಿತು.
ಕಾಶ್ಮೀರ ನಮ್ಮದು ಎಂದು ಭಾರತ ಹೇಳುತ್ತೆ, ಪಾಕಿಸ್ತಾನವೂ ಸಹ ಹೇಳುತ್ತೆ. ನಾವು ಇವೆರಡಕ್ಕೂ ಸೇರಿಲ್ಲ ಅಂತ ಮತ್ತೊಂದು ಗುಂಪು ಹೇಳುತ್ತೆ. ಇದೆ ಅದರ ನಿಜವಾದ ಸಮಸ್ಯೆ.
ಇಂಡಿಯನ್ ಇಂಡಿಪೆಂಡೆನ್ಸ್ act ಮೂಲಕ ಎರಡೂ ದೇಶಗಳ ವಿಭಜನೆಯಾಗುತ್ತೆ.ಮುಸ್ಲ್ಲಿಂ ಬಾಹುಳ್ಯ ಇರುವ ಪ್ರದೇಶಗಳು ಪಾಕಿಸ್ತಾನಕ್ಕೆ ಸೇರಿದರೆ ಉಳಿದವು ಭಾರತಕ್ಕೆ ಸೇರಿತು, ತಮ್ಮ ಪ್ರಾಂತ್ಯಗಳನ್ನು ಭಾರತಕ್ಕೋ, ಪಾಕಿಸ್ತಾನಕ್ಕೋ ಸೇರಿಸುವ ಅಥವಾ ಹಾಗೇ ಇರುವ ಸ್ವಾತಂತ್ರ್ಯವನ್ನು ಆಗಿನ ರಾಜರು/ನವಾಬರಿಗೆ ಬ್ರಿಟಿಷರು ಕೊಟ್ಟಿದ್ದರು. ಆದರೆ ಅದನ್ನು ಆಪ್ರದೇಶದ ಭೌಗೋಳಿಕ ಹಿನ್ನಲೆ ಹಾಗೂ ಆಚರಿಸುವ ಧರ್ಮದ ಹಿನ್ನಲೆಯ ಮೇಲೆ ನಿರ್ಧರಿಸುವಂತೆ ತಿಳಿಸಿದ್ದರು.

ಆದರೆ ಕಾಶ್ಮೀರದ ರಾಜ ಹರಿಸಿಂಗ್ ತಾನು ಸ್ವತಂತ್ರವಾಗಿರಲು ನಿರ್ಧರಿಸಿದ.  ಇಂಡಿಯಾ ಅನ್ನೋ ಹೆಸರು ನಮಗೆ ಬೇಕು ನೀವು ಬೇರೆ ಏನಾದರೂ ಇಟ್ಟುಕೊಳ್ಳಿ ಅಂತ ಪಟ್ಟು ಹಿಡಿದಿತ್ತು ಪಾಕಿಸ್ತಾನ, ಆದರೆ ಆ ಹೆಸರು ಬಂದಿದ್ದು ಇಂಡಸ್ ನದಿಯಿಂದ ಹಾಗಾಗಿ ನಮಗೆ ಆ ಹೆಸರು ಬೇಕು ಅಂದಿತು ಭಾರತ.ಆದರೆ ಪಾಕಿಸ್ತಾನ ಅನ್ನೋ ಹೆಸರು ಹೇಗೆ ಬಂತು ಅನ್ನೋದು ಕುತೂಹಲ ಮೂಡಿಸುವ ವಿಷಯ. ರಾಜ ಹರಿಸಿಂಗ್ ನಿರ್ಧಾರ ಪಾಕಿಸ್ತಾನಕ್ಕೆ ಸಮ್ಮತವಾಗಿರಲಿಲ್ಲ. ಯಾಕೆಂದರೆ Pakistan ದಲ್ಲಿ ಬರುವ K ರೆಪ್ರೆಸೆಂಟ್ ಮಾಡೋದು ಕಶ್ಮೀರವನ್ನು. ಅಸಲಿಗೆ ಪಾಕಿಸ್ತಾನ ಅನ್ನೋದು ಒಂದು ಹೆಸರೇ ಅಲ್ಲಾ. U.N.O, U.S.A ಇರುವ ಹಾಗೆ ಅದು P.A.K.I.S.T.A.N.
P : Punjab
A :Afghania
K :Kashmir
I : Iran
S :Sindh
T :Tokaristan
A :Afghanistan
N :Baluchistan

ಇದರಲ್ಲಿ ಬಲುಚಿಸ್ತಾನ್ ಕೊನೆಯ ಅಕ್ಷರ N ಅನ್ನು ತೆಗೆದು ಕೊಳ್ಳುತ್ತಾರೆ.Pak I Stan ಅನ್ನೋದು ಅದರ ಸಹಜ ರೂಪ. ಅದಕ್ಕೆ ಒಂದು ಪೂರ್ಣ ರೂಪ ಕೊಡುವುದಕ್ಕಾಗಿಯೇ N ಅನ್ನು ತೆಗೆದು ಕೊಳ್ಳುತ್ತಾರೆ. ಪಾಕ್ ಅಂದ್ರೆ ಅರೇಬಿಕ್ ನಲ್ಲಿ ಪವಿತ್ರ ಎಂದರ್ಥ. ಸ್ಥಾನ ಎಂದರೆ ಸಂಸ್ಕೃತದಲ್ಲಿ ಜಾಗ ಎಂದರ್ಥ. ಇದು ಸಂಸ್ಕೃತ ಹಾಗೂ ಅರೇಬಿಕ್ ನಿಂದ ಕೂಡಿದ ಪದ. ಎಲ್ಲಾದರೂ B ತೆಗೆದುಕೊಂಡಿದ್ದರೆ ಏನಾಗುತ್ತಿತ್ತು ಗಮನಿಸಿ..
Pak I Stab....  ಈಗ ಅದು ಮಾಡುತ್ತಿರುವುದು ಅದೇ stabbing..

ಕಶ್ಮೀರ ತಮಗೆ ಸೇರುತ್ತೆ ಅಂತ ಪಾಕಿಸ್ತಾನ ಅದೆಷ್ಟು ಬಲವಾಗಿ ನಂಬಿತ್ತು ಎಂದರೆ ಅದಾಗಲೇ ಜಿನ್ನಾ ಶ್ರೀನಗರದ ದಾಲ್ ಸರೋವರದಲ್ಲಿ ವಿಹರಿಸಲೆಂದೇ ಒಂದು ಹೌಸ್ಬೋಟ್ ಅನ್ನು ಖರೀದಿಸಿದ್ದರು. ಯಾವಾಗ ಹರಿಸಿಂಗ್ ನಿರಾಕರಿಸಿದನೋ ಆಗ ಪಾಕಿಸ್ತಾನ ಅದರ ಮೇಲೆ ಒತ್ತಡ ಹೇರಲು ಆರಂಭಿಸಿತು. 

Comments

Popular posts from this blog

ಮೇಲುಸುಂಕ.

ಮಾತಂಗ ಪರ್ವತ

ಕೇಪಿನ ಡಬ್ಬಿ.