ರಕ್ತರಾತ್ರಿ.
ಕಂಬನಿ ತುಂಬಿ ಮಬ್ಬಾದ ಕಣ್ಣುಗಳಿಂದಲೇ ಎತ್ತಿಕೊಂಡಿದ್ದು ರಕ್ತರಾತ್ರಿ. ಹೆಸರೇ ಭೀಭತ್ಸ ಅನ್ನಿಸೋ ಹಾಗಿತ್ತು. ರಾತ್ರಿ ಇರೋದೇ ವಿಶ್ರಾಂತಿಗೆ ಅನ್ನಿಸಿದರು ಯಾವ್ಯಾವುದಕ್ಕೆಲ್ಲಾ ವಿಶ್ರಾಂತಿ ಸಿಗುತ್ತೆ ಅನ್ನೋದರ ಲೆಕ್ಕ ಹಾಕಿದರೆ ಕೆಲವೊಮ್ಮೆ ಮೈ ಜುಮ್ ಅನ್ನುತ್ತೆ. ತ.ರಾ.ಸು ವೈಶಿಷ್ಟ್ಯವೇ ಅವರು ಇಡುವ ಹೆಸರುಗಳು. ಇಡೀ ಪುಸ್ತಕದ ಆಶಯವನ್ನು, ಹೂರಣವನ್ನು ಒಂದು ಪದದಲ್ಲಿ ಹೇಳುವುದಿದೆಯಲ್ಲ ಅದು ಸುಲಭ ಸಾಧ್ಯವಲ್ಲ. ಅಲ್ಲಿ ಶುರುವಾದ ನೆತ್ತರಿನ ದಾಹ ಇಲ್ಲೂ ಮುಂದುವರಿಯುತ್ತದೆಯೇನೋ ಅನ್ನೋ ಭಾವದಲ್ಲೇ ಪುಸ್ತಕ ಬಿಡಿಸಿದೆ. ಏನೇ ಘಟಿಸಿದರೂ ಪ್ರಕೃತಿ ಎಷ್ಟು ಸಹಜವಾಗಿ ತೆಗೆದುಕೊಂಡು ತನ್ನ ಪಾಡಿಗೆ ತಾನು ತನ್ನ ಕೆಲಸ ನಿರ್ವಹಿಸುತ್ತದೆ. ಯೋಚಿಸುವ, ಬುದ್ಧಿ ಇರುವ ಮನುಷ್ಯ ಮಾತ್ರ ಆಗಿ ಹೋಗಿದ್ದಕ್ಕೆ ಕೊರಗುತ್ತಾನೆ, ಹಳಹಳಿಸುತ್ತಾನೆ, ಕೆಲವೊಮ್ಮೆ ತನ್ನ ಕರ್ತವ್ಯವನ್ನೂ ಮರೆತುಬಿಡುತ್ತಾನೆ. ಒಣ ವೇದಾಂತವನ್ನು ಧರಿಸಿ ಕುರುಡನಾಗುತ್ತಾನೆ. ಜಗತ್ತಿನಲ್ಲಿ ಕಣ್ಣಿಲ್ಲದ ಕುರುಡರಿಗಿಂತ ಕಣ್ಣಿರುವ ಕುರುಡರೇ ಜಾಸ್ತಿಯೇನೋ. ಅಂಥಹ ಕುರುಡುತನದಿಂದ, ದುಃಖಕ್ಕೆ ವೇದಾಂತದ ಹೊದಿಕೆ ಹೊಚ್ಚಿ ಕುಳಿತ ಲಿಂಗಣ್ಣ ನಾಯಕನೂ ಎಚ್ಚರವಾಗುವ ಅನಿವಾರ್ಯತೆ ಎದುರಾಗುತ್ತದೆ. ಮನಸ್ಸಿನಲ್ಲಿ ಅದುಮಿಟ್ಟ ಯಾವ ಬಯಕೆಗಳೂ ಸಾಯುವುದಿಲ್ಲ. ಅದು ಸಮಯಕ್ಕಾಗಿ ಕಾಯುತ್ತದೆ. ಅಲ್ಲಿಯವರೆಗೂ ಅದು ನಮ್ಮ ನಿರೀಕ್ಷೆಯನ್ನೂ ಮೀರಿ ಬೆಳೆದಿರುತ್ತದೆ. ಯಾವದೂ ಒಳಗೆ ಉಳಿಯುವುದಿಲ್ಲ ಒಂದ