ಒಂದು ದೇಶದ ಇತಿಹಾಸವನ್ನು ತಿರುಚಿ ಬರೆಯುವದಕ್ಕಿಂತ ದೊಡ್ಡ ಬ್ಲಂಡರ್ ಇನ್ನೊಂದಿಲ್ಲ ಅನ್ನ್ನಿಸೋದು ಟಿಪ್ಪುವಿನ ಬಗೆಗಿನ ಸತ್ಯಗಳು ಅರಿವಾದಾಗ. ಒಂದಿಡೀ ಜನಾಂಗವನ್ನು ದಿಕ್ಕು ತಪ್ಪಿಸುವ ಕಾರ್ಯವನ್ನು ಗೊತ್ತಿದ್ದೂ ಗೊತ್ತಿದ್ದೂ ಮಾಡುವ ಇತಿಹಾಸಕಾರರನ್ನು ನೋಡಿದಾಗ ಅವರಿಗೆ ಮನಃಸಾಕ್ಷಿ ಅನ್ನೋದು ಇರಲೇ ಇಲ್ಲವಾ ಅನ್ನೋ ಪ್ರಶ್ನೆಯೂ ಕಾಡುತ್ತೆ. ಎಷ್ಟರಮಟ್ಟಿಗೆ ಅವರು ನೈತಿಕವಾಗಿ ಅಧಃಪತನಕ್ಕೆ ಇಳಿದಿದ್ದರು ಅನ್ನೋದು ಗೊತ್ತಾದಾಗ ಅವರಿಗೆ ಯಾವತ್ತೂ ಆತ್ಮಸಾಕ್ಷಿ ಅನ್ನೋದು ಪ್ರಶ್ನಿಸಲೇ ಇಲ್ಲವಾ ಅನ್ನೋ ಗೊಂದಲ. ಬಹುಶಃ ಇದು ಕಾಡುವುದು ಮನುಷ್ಯರಿಗೆ ಮಾತ್ರ ಮನುಷ್ಯ ರೂಪಿ ಜೀವಕ್ಕಲ್ಲ.

ಅವನ ಕ್ರೌರ್ಯ, ಮತಾಂತರ ಮಾಡಲು ಅವನು ನಡೆಸಿದ ಮಾರಣ ಹೋಮ, ಜಿಹಾದ್ ಗಾಗಿ ಅವನು ಪಟ್ಟ ಶ್ರಮ, ನೋಡಿದಾಗ ಅವನು ದಕ್ಷಿಣದ ಔರಂಗಜೇಬ್ ಅಂತ ಹೇಳುವುದರಲ್ಲಿ ಸಂದೇಹವೇ ಇಲ್ಲ. ಟಿಪ್ಪು ಸ್ವತಃ ಬರೆದ ಅನೇಕ ಪತ್ರಗಳು ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ಕೊಡಗಿನಲ್ಲಿ ಅವನು ನಡೆಸಿದ ಮಾರಣ ಹೋಮ ಜಲಿಯನ್ ವಾಲ್ ಬಾಗ್ ನಡೆದ ಕ್ರೌರ್ಯವನ್ನೂ ಮೀರಿಸುತ್ತದೆ. ಶಾಂತಿ ಸಂಧಾನಕ್ಕಾಗಿ ಅವರನ್ನು ಆಹ್ವಾನಿಸಿ ನಂಬಿ ನಿಶಸ್ತ್ರರಾಗಿ ಬಂದ ಕೊಡವರನ್ನು ಅವಿತುಕೊಂಡು ಧಾಳಿ ಮಾಡಿ ಕೊಂದಿದ್ದು 35 ಸಾವಿರಕ್ಕೂ ಹೆಚ್ಚು ಜನರನ್ನ.


ಮತಾಂತರವಾಗಲು ತಿರಸ್ಕರಿಸಿದ ಮೇಲುಕೋಟೆಯ 700 ಕ್ಕೂ ಹೆಚ್ಚು ಅಯ್ಯಂಗಾರರನ್ನು ಹಿಡಿದು ಅವರನ್ನು ದೀಪಾವಳಿಯ ನರಕ ಚತುರ್ದಶಿಯ ದಿನ ಗಲ್ಲಿಗೆ ಹಾಕಿದ ದಿನ ನವೆಂಬರ್ 10. ಟಿಪ್ಪು ಹುಟ್ಟಿದ ದಿನ ಇನ್ನೂ ಗೊಂದಲದಲ್ಲಿ ಇರುವಾಗಲೇ ಸರ್ಕಾರ ಅವನ ಜಯಂತಿಯನ್ನು ಆಚರಿಸಲು ಹೊರಟಿರುವುದು ಇದೆ ನವೆಂಬರ್ 10. ಒಂದು ಜನಾಂಗವೇ ಭಯ, ಅಸಹ್ಯದಿಂದ ಕರಾಳದಿನವಾಗಿ ಆಚರಿಸುವ ದಿನವನ್ನ. ಪ್ರತಿ ದೇವಸ್ಥಾನವನ್ನೂ, ಚರ್ಚ್ ಅನ್ನೂ ನೆಲಸಮ ಮಾಡುತ್ತಾ ಕತ್ತಿ ಆಥವಾ ಕುರಾನ್ ಅನ್ನುವ ಒಪ್ಶನ್ ಕೊಟ್ಟು ಜಿಹಾದ್ ಕಟ್ಟಾಳು ಯಾವ ಕೋನದಿಂದ ಮಾನವತಾವಾದಿ...

ಕೆನರಾ ಪ್ರಾಂತ್ಯದ ಮೇಲೆ ಧಾಳಿ ಮಾಡಿ ಅಲ್ಲಿ 80 ಸಾವಿರಕ್ಕೂ ಹೆಚ್ಚು ಕ್ರೈಸ್ತರನ್ನು ಕೈದಿಗಳನ್ನಾಗಿಸಿ ಕೊಂಡು ಅವರನ್ನು ನಡೆಸಿಕೊಂಡೆ ಹೊರಟಿತ್ತು ಟಿಪ್ಪುವಿನ ಸೈನ್ಯ. ಅದರಲ್ಲಿ ಮಕ್ಕಳು, ವಯಸ್ಸಾದವರು, ಗರ್ಭಿಣಿಯರು ಎಲ್ಲರೂ ಇದ್ದರು. ಅವರನ್ನು ನಿರ್ದಯದಿಂದ ಕರೆದುಕೊಂಡು ಹೋಗುವಾಗ ಪ್ರತಿಭಟಿಸಿದ 5000 ಯುವಕರನ್ನು ಕೊಂದಾಗ ಹರಿದ ರಕ್ತದಿಂದ ಕೆಂಪಾದ ಕೆರೆಯನ್ನು ಆ ಜಾಗವನ್ನು ಈಗಲೂ ನೆತ್ತರ ಕೆರೆಯೆಂದೆ ಕರೆಯಲಾಗುತ್ತದೆ. ಗಡಾಯಿ ಕಲ್ಲು ಅನ್ನುವಲ್ಲೂ ಸಾವಿರಾರು ಜನರು ಹೀಗೆ ಸಾವನ್ನಪ್ಪಿದರು. ಇವೆಲ್ಲವೂ ಇತಿಹಾಸದಲ್ಲಿ ದಾಖಲಾಗಿದೆ.ಹೀಗೆ ಮೂರು ವಾರಗಳ ಕಾಲ ನಡೆದೇ ಶ್ರೀರಂಗಪಟ್ಟಣವನ್ನು ತಲಪುವಾಗ ದಾರಿಯ ಮಧ್ಯದಲ್ಲೇ ಪ್ರಸವಿಸಿ ಮರಣಿಸಿದ ತಾಯಂದಿರು, ಹಸುಗೂಸುಗಳು, ವೃದ್ಧರು ಅಸಂಖ್ಯ. 80 ಸಾವಿರವಿದ್ದ ಜನ ಶ್ರೀರಂಗಪಟ್ಟಣವನ್ನು ತಲುಪಿದಾಗ 40 ಸಾವಿರ. ಹಾಗೆ ಉಳಿದವರ ಕಿವಿ ಮೂಗುಗಳನ್ನ ಕತ್ತರಿಸಿ ಅವರನ್ನು ಕತ್ತೆಯ ಮೇಲೆ ಮೆರವಣಿಗೆ ಮಾಡಿ ತನ್ನ ಆಜ್ಞೆಯನ್ನು ಒಪ್ಪಿಕೊಳ್ಳದೆ ಮತಾಂತರ ವಾಗದೇ ಉಳಿದವರಿಗೆ ಯಾವ ಗತಿ ಬರಬಹುದು ಎಂದು ತೋರಿಸಿದ.

ಕನ್ನಡ ಹೆಸರಿದ್ದ ಎಲ್ಲಾ ಊರುಗಳ ಹೆಸರನ್ನು ಬದಲಾಯಿಸಿದ ಕೀರ್ತಿ ಟಿಪ್ಪುವಿನದು. ಮೈಸೂರಿನ ಹೆಸರನ್ನು ನಜರಾಬಾದ್, ಸಕಲೇಶಪುರದ ಹೆಸರನ್ನು ಮಂಜ್ರಾಬಾದ್, ಮಾಡಿ ಆಢಳಿತ ಭಾಷೆಯಾಗಿ ಪರ್ಷಿಯಾವನ್ನು ಜಾರಿಗೆ ತಂದಿದ್ದು ಟಿಪ್ಪುವೇ. ಟಿಪ್ಪು ದಾರುಲ್ ಇಸ್ಲಾಂ ಪ್ರತಿಪಾದಕ. ಇಸ್ಲಾಂ ಮತ್ತು ಡೆಮಾಕ್ರಸಿ ಎರಡೂ ಒಟ್ಟಿಗೆ ಹೋಗಲು ಸಾಧ್ಯವೇ ಇಲ್ಲ. ಚರ್ಚ್ ಗಳನ್ನ, ದೇವಸ್ಥಾನಗಳನ್ನ ನೆಲಸಮ ಮಾಡಿ ಅವುಗಳ ಕಲ್ಲಿಂದಲೇ ಮಸೀದಿಯನ್ನ್ನು ಕಟ್ಟಿಸಿದ. ಇಸ್ಲಾಂ ಸ್ವೀಕರಿಸಲು ಒಪ್ಪದವರನ್ನು ನಿರ್ಧಾಕ್ಷಿಣ್ಯವಾಗಿ ಕ್ರೂರವಾಗಿ ಹಿಂಸಿಸಿದ. ಜಿಹಾದ್ ಹರಡಲು ಶಕ್ತಿ ಮೀರಿ ಅದಕ್ಕಾಗಿ ತನ್ನೆಲ್ಲಾ ಅಧಿಕಾರವನ್ನು ಬಳಸಿದ.

ಯಾವ ನೆಲದಲ್ಲಿ ಗಾಂಧೀಜಿಯ ಅಹಿಂಸೆಯನ್ನು ಪ್ರತಿಪಾದನೆ ಮಾಡಿ ಪೂಜೆ ಮಾಡುತ್ತೋ ಅದೇ ನೆಲದಲ್ಲಿ ಹಿಂಸೆಯ ಪ್ರತಿರೂಪವಾಗಿದ್ದ ಟಿಪ್ಪು ಹೇಗೆ? ಇಷ್ಟು ವರ್ಷಗಳಲ್ಲಿ ಇರದಿದ್ದ ಆಚರಣೆ ಇದ್ದಕ್ಕಿದ್ದ ಹಾಗೆ ಬರಲು ಕಾರಣವೇನು? ಆತನ ವೈಭವೀಕರಣದ ಹಿನ್ನಲೆ ಏನು? ಅವನಲ್ಲಿ ಇಲ್ಲದ ಗುಣಗಳನ್ನು ಕೊಟ್ಟು ಹೊಗಳುವ ಅನಿವಾರ್ಯತೆ ಏನು ಅನ್ನೋದು ಪ್ರತಿಯೊಬ್ಬರೂ ಕೇಳಬೇಕಾದ ಪ್ರಶ್ನೆ. ಟಿಪ್ಪುವಿನ ಬಗ್ಗೆ ಮುಚ್ಚಿಟ್ಟ ವಿಷಯಗಳು ಅರ್ಥವಾದಾಗ, ಸತ್ಯ ಹೊರಬಂದಾಗ ನನಗನ್ನಿಸಿದ್ದು ...

ಟಿಪ್ಪು ಸುಲ್ತಾನ್ ಗಿಂತಲೂ ಕ್ರೌರ್ಯ ಅನ್ನಿಸೋದು
ಅಂತಹ ಮನಸ್ಥಿತಿಯನ್ನು ವೈಭವೀಕರಿಸುವ, ಸಮರ್ಥಿಸುವ ಮನಸ್ಸುಗಳು.




Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...