Posts

Showing posts from 2019

ಹೊಸದಿಗಂತ 25.12.19

ಅದು ಅಜ್ಞಾತವಾಸದ ಸಮಯ. ಹೇಗಾದರೂ ಪಾಂಡವರನ್ನು ಗುರುತು ಹಿಡಿದರೆ ನಿಯಮದ ಮತ್ತೆ ಅವರು ವನವಾಸಕ್ಕೆ ಹೋಗಬೇಕು, ಮತ್ತಷ್ಟು ವರ್ಷಗಳು ನಿರಾತಂಕ ಎನ್ನುವ ಯೋಚನೆಯಲ್ಲಿ ಅವರನ್ನು ಹುಡುಕುವ ಪ್ರಯತ್ನದಲ್ಲಿ ಇರುವಾಗಲೇ ಕಿಚಕನ ಹತ್ಯೆಯ ಸುದ್ದಿ ತಲುಪಿ ಅದು ಭೀಮನಿಂದಲ್ಲದೆ ಮತ್ಯಾರಿಂದಲೂ ಸಾಧ್ಯವಿಲ್ಲ ಎನ್ನುವುದರ ಅರಿವಾಗಿ ಕರ್ಣ ವಿರಾಟನ ಮೇಲೆ ಧಾಳಿ ಮಾಡಲು ಧುರ್ಯೋಧನನಿಗೆ ಸಲಹೆ ಕೊಡುತ್ತಾನೆ. ಅದರ ಪ್ರಕಾರ ಅಲ್ಲಿಯ ಗೋವುಗಳನ್ನು ಹಿಡಿದು ಕೆಣಕಿದ ಕೌರವರನ್ನು ಹಿಮ್ಮೆಟ್ಟಿಸಲು ಶಿಖಂಡಿ ವೇಷದ ಅರ್ಜುನ ಬಂದಾಗ ಮೊದಲು ಓಡಿ ಬಂದು ತಪ್ಪಿಸಿಕೊಳ್ಳುವುದು ಕರ್ಣ. ಬಲಿಯಾಗಿದ್ದು ಕೌರವರ ಸೈನ್ಯ. ಮಣ್ಣು ಮುಕ್ಕಿದ್ದು ಧುರ್ಯೋಧನ ಗಳಿಸಿದ್ದ ಗೌರವ. ಮುಕ್ಕಾಗಿದ್ದು ವ್ಯಕ್ತಿತ್ವ. ಈಗ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಜನರನ್ನು ನೋಡಿದಾಗ ಈ ಕತೆ ನೆನಪಾಯಿತು. ಹಾಗಂದರೇನು? ಅದರ ಸಾಧಕ ಬಾಧಕಗಳು ಏನು?  ಅದು ಯಾರ ಮೇಲೆ ಪರಿಣಾಮ ಬೀರುತ್ತದೆ? ಯಾರಿಗೆ ಸುರಕ್ಷತಾ ಭಾವ ಕೊಡುತ್ತದೆ ಎನ್ನುವ ಕಿಂಚಿತ್ತು ಅರಿವೂ ಇಲ್ಲದೆ ಯಾರನ್ನೋ ಹಣಿಯುವ, ಅಧಿಕಾರ ಪಡೆಯುವ ಆಸೆಯಿಂದ ಅನೇಕ ಕರ್ಣರು ಪ್ರಚೋದಿಸುತ್ತಿದ್ದಾರೆ. ಕೆಲವು ದುರ್ಯೋಧನರು ಅದನ್ನು ಕಣ್ಮುಚ್ಚಿ ನಂಬಿ ತಮ್ಮ ಬೆಂಬಲಿಗರನ್ನು ಹುರಿದುಂಬಿಸಿ ಕಳುಹಿಸುತ್ತಿದ್ದಾರೆ. ಇದೇನಾದರೂ ಜಾರಿಗೆ ಬಂದರೆ ಇಡೀ ರಾಜ್ಯವೆ, ದೇಶವೇ ಹೊತ್ತಿ ಉರಿಯುತ್ತದೆ ಎನ್ನುವ ಮು;ಮುನ್ಸ

ಉದಯವಾಣಿ.. 25.12.19

ಅಮ್ಮಾ ಎನ್ನುವ ಸ್ವರ ತೂರಿ ಬರುತ್ತಿದ್ದ ಹಾಗೆಯೇ ಬೆಚ್ಚಿಬಿದ್ದು ಮರುದಿನ ಬೆಳಿಗ್ಗೆ ಇಡ್ಲಿಗೆಂದು ನೆನಸಿಟ್ಟ ಉದ್ದನ್ನೇ ದಿಟ್ಟಿಸಿದೆ. ಮುಂದಿನ ಪ್ರಶ್ನೆ ಯಾವುದು ಎಂದು ಗೊತ್ತಿದ್ದರಿಂದ, ಉತ್ತರ ಸಿಕ್ಕ ಕೂಡಲೇ ಇನ್ನೊಂದು ಯುದ್ಧ ಶುರುವಾಗುವುದರಿಂದ ಅಪ್ರಯತ್ನವಾಗಿ ಮನಸ್ಸನ್ನು ಸಿದ್ಧಗೊಳಿಸುತ್ತಲೇ ಹೇಳು ಅಂದೇ.. ಬೇರೆ ಸಮಯದಲ್ಲಿ, ದಿನಗಳಲ್ಲಿ  ಮುದ್ದು ಉಕ್ಕುವ ಈ ಅಮ್ಮಾ ಎನ್ನುವ ಶಬ್ದ ಶಾಲೆಯಿದ್ದಾಗ ಮನೆಗೆ ಬಂದ ಕೂಡಲೇ ಕೇಳಿದರೆ ಇದೆ ಅವಸ್ಥೆ. ನಂತರದ ಪ್ರಶ್ನೆಯೇ ನಾಳೆ ಎಂತ ತಿಂಡಿ.. ಹೇಳಿದ ಕೂಡಲೇ ಯಾವಾಗಲೂ ಅದೇನಾ ಕದನಕ್ಕೆ ಕರೆ ಕೊಡುವ ಸ್ವರ... ನಂಗೆ ಬೇಡಾ ಕ್ಯಾಂಟೀನ್ ಅಲ್ಲಿ ತಿಂತೀನಿ ಧಮಕಿ.. ನನ್ನ ಪ್ರತ್ಯುತ್ತರ, ಕಾಳಗ, ಸಂಧಾನ ನಡೆಯುವ ಹೊತ್ತಿಗೆ ಮೈ ಮನವೆಲ್ಲಾ ಸುಸ್ತು.  ಆ ಭಯದಲ್ಲಿ ಅವಳತ್ತ ದಿಟ್ಟಿಸಿದರೆ ನಾಡಿದ್ದು ಕ್ರಿಸ್ಮಸ್ ಪಾರ್ಟಿ, ನಂಗೆ ಚಿಪ್ಸ್ ಹಾಗೂ ಕೇಕ್ ತಂದುಕೊಡು, ತಗೊಂಡು ಹೋಗ್ತೀನಿ ಎಂದಿನ ಕಿರಿಕಿರಿಯಿಲ್ಲದ, ಮುನಿಸಿಲ್ಲದ ಸಂಭ್ರಮದ ದನಿಯ ರಾಜಕುಮಾರಿ ಮುಖದಲ್ಲಿ ಮಂದಹಾಸ.. ನಡಿಗೆಯಲ್ಲಿ ಚಿಮ್ಮುವ ಉತ್ಸಾಹ. ಅಬ್ಬಾ ಬದುಕಿದೆಯಾ ಬಡ ಜೀವವೇ ಎಂದು ನಿಟ್ಟುಸಿರು ಬಿಡುತ್ತಾ ನಿರಾಳತೆಯಿಂದ ಉದ್ದಿನ ಬೇಳೆಯನ್ನು ಮಿಕ್ಷಿಗೆ ಹಾಕಿದೆ. ಇನ್ನೆರೆಡು ದಿನ ಕಳೆದರೆ ಮುಗಿಯಿತು ಆಮೇಲೆ ರಜಾ.. ಕವಿದಿದ್ದ ಕಾರ್ಮೋಡ ಕರಗಿ ಬಿಸಿಲಿನ ಕಿರಣವೊಂದು ಇಳಿದುಬಂದಂತೆ ಮನಸ್ಸು ಗರಿಗೆದರಿದ ನವಿಲು.. ಗಾಢ ನಿದ್ದೆಯಲ್ಲೂ ಬೆಳಗಾಯ
ಇಡೀ ಭೂ ಮಂಡಲ ಸುತ್ತಿ, ಎಲ್ಲಾ ಪುಣ್ಯಕ್ಷೇತ್ರಗಳಲ್ಲೂ ಸ್ನಾನ ಮಾಡಿ ಕೊಡಲಿ ತೊಳೆದರೂ ಎಳ್ಳಿನ ಮೊನೆಯಷ್ಟು ರಕ್ತದ ಕಲೆ ಹಾಗೆ ಉಳಿದಿತ್ತಂತೆ ಕೊಡಲಿಯಲ್ಲಿ. ಹಾಗೆ ಸುತ್ತುತ್ತಾ ಬಂದವನು ರಾಮಕೊಂಡದ ಹತ್ತಿರ ಬಂದಾಗ ಅಮಾವಾಸ್ಯೆಯಾಗಿತ್ತು. ಸ್ನಾನ ಮಾಡಿ ತರ್ಪಣ ಕೊಡಲು ಮುಳುಗಿದವನು ಎದ್ದಾಗ ಹೆಗಲ ಕೊಡಲಿಯಲ್ಲಿದ್ದ ಆ ರಕ್ತದ ಕಲೆ ಮಾಯವಾಗಿತ್ತಂತೆ. ಪರಶುರಾಮನಿಗೆ ಸಂತೋಷ ಆಗಿತ್ತಂತೆ. ಮಾತೃಹತ್ಯಾದೋಷ ಅಂದರೆ ಸುಮ್ಮನೇನಾ...    ಹಾಗಾಗಿ ನೋಡು ಎಳ್ಳಮವಾಸ್ಯೆ ದಿನ ರಾಮಕೊಂಡದಲ್ಲಿ ಸ್ನಾನ ಮಾಡಿದರೆ ದೋಷವೆಲ್ಲಾ ಪರಿಹಾರ ಆಗುತ್ತಂತೆ ಅಂತ ಅಜ್ಜಿ ಕತೆ ಹೇಳುತ್ತಿದ್ದರೆ ಈ ಎಳ್ಳು ಮೊನೆಯೆಂದರೆ ಹೇಗಿರುತ್ತೆ ಅಂತ ಪ್ರಶ್ನೆಮೂಡಿತ್ತು. ಉತ್ತರಕ್ಕೆ ಕಷ್ಟವೇನೂ ಪಡಬೇಕಾಗಿರಲಿಲ್ಲ. ಅಟ್ಟದ ಮೇಲಿನ ಡಬ್ಬದಲ್ಲಿ ಎಳ್ಳು ತುಂಬಿತ್ತು. ಅದು ಬೀರೋಕೆ ಅಂತ ಇಟ್ಟಿರೋದು ಚೆಲ್ಲಿ ಹಾಳುಮಾಡಬೇಡಾ ಎಂದು ಎದ್ದವಳನ್ನು ನೋಡಿ ಯಾಕೆ ಎಂದು ಉಹಿಸಿಯೇ ಅಜ್ಜಿ ಗದರಿದ್ದಳು. ತುಂಬಾ ನೀರು ಬೇಡದ, ಜಾಸ್ತಿ ಆರೈಕೆ ಬಯಸದ ಎಳ್ಳು ಬಹುಬೇಗ ಬೆಳೆಯಬಹುದಾದ ಬೆಳೆ. ತೀರಾ ಗಟ್ಟಿಯೂ ಅಲ್ಲದ ಮೃದುವೂ ಅಲ್ಲದ ಕಾಂಡ.  ದಟ್ಟ ಹಸಿರು ಬಣ್ಣದ ಎಲೆ, ಬಿಳಿ ಹೂ... ಪುಟ್ಟ ಕಾಯಿಯಾದರೂ ಒಳಗೆ ತುಂಬಿಕೊಂಡಿರುವ ಬೀಜಗಳು. ಕಂದು, ಕಪ್ಪು, ಬಿಳಿ ಹೀಗೆ ವರ್ಣವೈವಿಧ್ಯತೆ ಹೊಂದಿದ್ದರೂ ಕರಿ ಎಳ್ಳಿನಲ್ಲಿ ಕಬ್ಬಿಣಾಂಶ ಸಮೃದ್ಧವಾಗಿರುತ್ತದೆ. ರಕ್ತವನ್ನು ಹೆಚ್ಚಿಸುವ ಇದು ರಕ್ತದೊತ್ತಡ ಕಡಿಮೆ ಮಾಡುವ ಗ

ಹೊಸದಿಗಂತ 12.07.19

ಜೊಮೊಟೋ ದ ಹುಡುಗನೊಬ್ಬ ಡೆಲಿವರಿ ಕೊಡುವ ಮುನ್ನ ಪ್ಯಾಕ್ ಓಪನ್ ಮಾಡಿ ಸ್ವಲ್ಪ ತಿಂದ ವೀಡಿಯೊ ಒಂದು ವೈರಲ್ ಆಗಿತ್ತು. ಸಹಜವಾಗಿಯೇ ಅದರ ಬಗ್ಗೆ ಆಕ್ರೋಶಗಳು ಹೊಮ್ಮಿದಷ್ಟೇ ಟ್ರೋಲ್ ಗಳು ಹಬ್ಬಿದ್ದವು. ಜನ ಅದು ತಪ್ಪು ಎಂದು ಖಂಡಿಸಿ ಬರೆಯಲು ಶುರುಮಾಡಿದ್ದರು. ಮೊದಲ ದಿನ ಎಲ್ಲಾ ಪ್ರತಿಕ್ರಿಯೆಗಳು ಹೀಗೆ ಇದ್ದವು. ಮರುದಿನ ಇದ್ದಕ್ಕಿದ್ದ ಹಾಗೆ ಯಾರಿಗೋ ಅದು ಹಸಿವಿನ ಪರಾಕಾಷ್ಟೆ ಅನ್ನಿಸಿತು ನೋಡಿ ಅಲ್ಲಿಂದ ಅವನ ಬಗ್ಗೆ ಅನುಕಂಪದ ಮಾತುಗಳು, ಹಸಿದವನ ಬಗ್ಗೆ ಕರುಣೆ, ಬಡತನದ ಬಗ್ಗೆ ಭಾಷಣಗಳು ಶುರುವಾಗಿ ಹೋಯಿತು. ನಂತರ ಯಾರು ಅದರ ವಿರೋಧವಾಗಿದ್ದಾರೆ ಎನ್ನುವುದು ನೋಡುವುದರ ಮೂಲಕ ಪರವಾಗಿ ವಾದವೂ, ಯಾರು ಪರವಾಗಿದ್ದಾರೆ ಎಂದು ನೋಡಿ ವಿರೋಧವೂ ಶುರುವಾಗಿ ಅಲ್ಲಿಗೆ ಅದು ಎರಡು ಬಣಗಳ ಜಗಳಕ್ಕೆ ತಿರುಗಿ ನಿಜವಾದ ಘಟನೆ ಅರ್ಥಕಳೆದುಕೊಂಡಿತು. ತಿಂದಿದ್ದು ತಪ್ಪು ಎನ್ನುವುದು ಗೊತ್ತಿದ್ದರೂ ಅದನ್ನು ಬಲವಾಗಿ ಸಮರ್ಥಿಸುವ ಅದರ ಮೂಲಕ ನೈತಿಕತೆಯ ಅಧಃಪತನವನ್ನು ಎತ್ತಿ ಹಿಡಿಯುವ ಕೆಲಸ ಆರಂಭವಾಯಿತು. ಎಲ್ಲರೂ ಸೇರಿ ತಪ್ಪನ್ನು ತಪ್ಪು ಎಂದು ಖಂಡಿಸಿ ಅವನ ಹಸಿವೋ ಚಪಲವೋ ಅಥವಾ  ಮತ್ಯಾವ ಕಾರಣವೋ ಎಂದು ವಿಶ್ಲೇಷಿಸಿ ಅದಕ್ಕೆ ಪರಿಹಾರ ಹುಡುಕುವ ಕೆಲಸ ಮರೆಯಾಗಿ, ಘಟನೆ ಅಪ್ರಸ್ತುತ ಅನ್ನಿಸುವ ಹಾಗಾಯಿತು. ಇವನ್ನೆಲ್ಲಾ ನೋಡಿ ಹಾಗೆ ತಿಂದವನಿಗೆ ಅದು ತಪ್ಪು ಅನ್ನಿಸಿದ್ದೂ ಮರೆತು ಹೋಗಿ ತಾನು ಮಾಡಿದ್ದೆ ಸರಿಯೇನೋ ಅನ್ನಿಸಿತ್ತೇನೋ .. ಒಂದು ಸಮಾಜದ ಏಳ್ಗೆಗೆ ಯ

ಅಜ್ಞಾತನೊಬ್ಬನ ಆತ್ಮಚರಿತ್ರೆ

"ರಾಜಕಾರಣದಲ್ಲಿ ನಂಬಿಕೆ ಎನ್ನುವುದು ಹುಟ್ಟಿದ ಮರಿಯನ್ನು ಪ್ರೀತಿಯಿಂದಲೇ ನೆಕ್ಕಿ ಸಾಯಿಸುವ ಬೆಕ್ಕಿನಂತೆ." ಅಧಿಕಾರ ಎನ್ನುವುದು ಸರ್ಪದ ನೆರಳಲ್ಲಿ ಇದ್ದಂತೆ. ಯಾವ ಕ್ಷಣದಲ್ಲಿ ಎಲ್ಲಿಂದ ಹೇಗೆ ಅಪಾಯ ಬಂದೆರೆಗಬಹುದು ಎಂದು ಹೇಳುವುದು ಕಷ್ಟವೇ. ಅದರಲ್ಲೂ ಯಾರಿಂದ ಎನ್ನುವುದಂತೂ ಬಹಳ ಕಷ್ಟ. ಅಧಿಕಾರ ಎನ್ನುವುದು ಹಾವು ಏಣಿ ಆಟವಿದ್ದಂತೆ. ಯಾರು ಇಳಿಯುತ್ತಾರೋ, ಮತ್ಯಾರು ಮೇಲಕ್ಕೆ ಹತ್ತುತ್ತಾರೋ ಹೇಗೆ ಹೇಳುವುದು. ಅಸಲಿಗೆ ಹೈದರಾಲಿ ಅಧಿಕಾರಕ್ಕೆ ಬಂದದ್ದು ನಂಬಿಕೆ  (?) ಎನ್ನುವುದು ಉಪಯೋಗಿಸಿ ಕೊಂಡೆ ಅಲ್ಲವೇ.  ಈಗ ಬ್ರಿಟಿಷರು ಅಂಥಹ ನಂಬಿಕಸ್ತರನ್ನು ಉಪಯೋಗಿಸಿಕೊಂಡೆ ಯುದ್ಧಕ್ಕೆ ಅಣಿಯಾಗುತ್ತಿದ್ದಾರೆ. ಎದುರಿಗಿದ್ದ ಸಿಪಾಯಿ ತನ್ನನ್ನು ನಂಬಿ ಸುಲ್ತಾನ್ ತನ್ನ ಮನಸ್ಸಿನ ಮಾತು ಹೇಳುತ್ತಿದ್ದಾನೆ ಎಂದು ನಂಬಿದ್ದಾನೆ. ಯಾರು ಯಾರನ್ನು ನಂಬಿದ್ದಾರೆ, ಯಾರು ಯಾರ ನಂಬಿಕೆಯನ್ನು ಹೇಗೆ ಉಪಯೋಗಿಸಿಕೊಂಡಿದ್ದಾರೆ ಅನ್ನುವುದೇ ಗೊಂದಲ. ನಂಬಬಾರದ.... ನಂಬಿದಂತೆ ನಟಿಸುತ್ತಲೇ ಅಪನಂಬಿಕೆಯ ಚಾದರ ಹೊದ್ದಿರಬೇಕಾ.. ತಪ್ಪು ನಂಬುವವನದ್ದಾ ಅಥವಾ ಆ ನಮ್ಬಿಕೆಯೆಂಬ ಏಣಿಯನ್ನು ಬಳಸಿಕೊಂಡು ಮೇಲೆರಿದವನದ್ದಾ... ಇಂತಹದೊಂದು ಗೊಂದಲ ಕಾದಿದ್ದು ಅಜ್ಞಾತನೊಬ್ಬನ ಆತ್ಮಚರಿತ್ರೆ ಓದುವಾಗ. ಟಿಪ್ಪು ಸುಲ್ತಾನ್ ಆಸ್ಥಾನದ ದಳವಾಯಿಯೊಬ್ಬನ ಆತ್ಮಕತೆಯಂತಿರುವ ಇದು ಇತಿಹಾಸದ ಒಳಸುಳಿಗಳನ್ನು ಪರಿಚಯಿಸುತ್ತಲೇ ಮನಸ್ಸಿನ ಒಳಸುಳಿಗಳ ಅನಾವರಣ ಮಾಡುತ್ತಾ ಹೋ

ಮಂಗಗಳ ಉದ್ಯಾನ

ಇಳಿ ಸಂಜೆಯ ಹೊತ್ತಿಗೆ ಪ್ಯಾಸೇಜ್ ಬಾಗಿಲು ತೆಗೆದು ಹೊರ ಬಂದವಳಿಗೆ ಕಂಡಿದ್ದು ಕಳಿತ ಕಿತ್ತಳೆ ಹಣ್ಣಿನಂತಿದ್ದ ಆಕಾಶ. ಒಹ್ ಇವನಾಗಲೇ ಮನೆಗೆ ಹೊರಟಾಯ್ತು ಕಳುಹಿಸಿಯೇ ಹೋಗೋಣವೆಂದು ಅವನನ್ನೇ ದಿಟ್ಟಿಸುತ್ತಾ ನಿಂತೇ.. ಜಗದ ಗಂಡಂದಿರಂತಲ್ಲ ಈ ಸೂರ್ಯ. ಮನೆ ಸೇರುವ ಆತುರ ಅವನಿಗೆ. ಇನ್ನೂ ಇಲ್ಲೇ ಇದ್ದಾನಲ್ಲ ಬಿಡು ಅಂತ ಆಚೀಚೆ ಕಣ್ಣು ಹಾಯಿಸಿದರೆ ಮುಗಿದೇ ಹೋಯಿತು, ಮುನಿದ ಇನಿಯನಂತೆ ಅಷ್ಟು ದೂರಕ್ಕೆ ಹೋಗಿ ಬಿಟ್ಟಿರುತ್ತಾನೆ. ಎವೆಯಿಕ್ಕದೆ ಅವನನ್ನೇ ನೋಡುತಿದ್ದೆ, ನೋಟಕ್ಕೆ ಸಿಲುಕದಂತೆ ಜಾರುತ್ತಲೇ ಇದ್ದವನು ಕ್ಷಣ ಮಾತ್ರದಲ್ಲಿ ಕುರುಹೂ ಸಿಗದಂತೆ ಮಾಯವಾದ. ಇನ್ನೇನು ಇರುಳು ಅಡಿಯಿಡುವ ಹೊತ್ತು  ದೀಪ ಹೊತ್ತಿಸಬೇಕು ಎಂದು ಒಳಗೆ ಕಾಲಿಡಬೇಕು ಅಚಾನಕ್ಕಾಗಿ ಒಂದು ಕಡೆ ಹಾದ ದೃಷ್ಟಿ ಅಲ್ಲಿಯೇ ಸೆರೆಯಾಯಿತು. ತುಂಬು ಬಸುರಿ ಕೋತಿಯೊಂದು ಒಬ್ಬಂಟಿಯಾಗಿ ಕುಳಿತಿತ್ತು. ಮುಖದಲ್ಲೇನೋ ದುಗುಡ. ಅಕ್ಕಪಕ್ಕದ ಸಾಲು ಕಟ್ಟಡಗಳು ಒಂದರ ಮೇಲೊಂದು ಮನೆಯ  ಕಿರೀಟ ಹೊತ್ತು ಕುಳಿತಿದ್ದರೆ ಇದೊಂದು ಮನೆ ಮಾತ್ರ  ಕಿರೀಟ ಕಳಚಿಟ್ಟ ರಾಜನಂತೆ ನಿಂತಿತ್ತು. ಉದ್ದದ ಟೆರೆಸ್ ನ ಎರಡೂ ಬದಿ ಹೂವಿನ ಗಿಡಗಳು ಸಾಲುಗಟ್ಟಿ ನಿಂತಿದ್ದರೆ ಅಷ್ಟು ಎತ್ತರದಲ್ಲಿ ಗಂಭಿರವಾಗಿ ನಿಂತ ವಾಟರ್ ಟ್ಯಾಂಕ್ ಹಾಗೂ ಅದರ ಹತ್ತಿರ ಹೋಗಲು ಇಟ್ಟಿದ್ದ ಒಂದು ಕಬ್ಬಿಣದ ಏಣಿ. ಆ ಏಣಿಯ ಕೊನೆಯ ಮೆಟ್ಟಿಲ ಮೇಲೆ ಏಕಾಂಗಿಯಾಗಿ ಕುಳಿತ ಈ ಕೋತಿ. ಒಂದಷ್ಟು ಹೊತ್ತು ಆ ಏಣಿಯ ಮೇಲೆ ಅದೇನೋ ಯೋಚಿಸುವಂತೆ

ಸಾವರ್ಕರ್ ಹೊಸದಿಂಗಂತ 24.1019

ನವರಾತ್ರಿಯ ಸಮಯ. ಅಷ್ಟು ದಿನಗಳು ಊರಿನ ಹೊರಗೆ ಇರುತ್ತಿದ್ದ ಭವಾನಿಯ ವಿಗ್ರಹ ಅಂದು ಊರಿನ ಒಳಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಬರುತ್ತಿತ್ತು. ಹಾಗೆ ಬಂದ ಪಲ್ಲಕ್ಕಿ ಆ ಊರಿನ ಪ್ರಮುಖರ ಮನೆಯ ಮುಂದೆ ನಿಲ್ಲುತ್ತಿತ್ತು. ಅಲ್ಲಿಂದ ಏನು ಮಾಡಿದರೂ ಮುಂದಕ್ಕೆ ಸರಿಯುತ್ತಿರಲಿಲ್ಲ. ಹಾಗೆ ಬಂದ ದೇವರನ್ನು ಸ್ವಾಗತಿಸಿ ತೆಗೆದುಕೊಂಡು ಹೋಗಿ ದೇವರ ಕೋಣೆಯಲ್ಲಿ ಪ್ರತಿಷ್ಟಾಪನೆ ಮಾಡಿ ಅಲ್ಲಿಂದ ಹತ್ತು ದಿನಗಳ ಕಾಲ ಪೂಜೆ ವ್ರತ ಶ್ರದ್ಧೆಯಿಂದ ನಡೆಸಲಾಗುತ್ತಿತ್ತು. ಜನರೂ ಹಾಗೆಯೇ ಬರುತ್ತಿದ್ದರು. ಬಂದ ಜನಗಳೆಲ್ಲಾ ಖಾಲಿಯಾದ ಮೇಲೆ ಆ ಮನೆಯ ಹುಡುಗನೊಬ್ಬ ಒಳಗೆ ಹೋಗಿ ದೇವಿಯ ಮುಂದೆ ಕಣ್ಮುಚ್ಚಿ ಕೂರುತ್ತಿದ್ದ. ಅಷ್ಟ ಭುಜಾಕೃತಿಯ ಆ ದೇವಿಯನ್ನು ಧ್ಯಾನಿಸುತ್ತಾ ನೋಡು ನಿಂಗೆ ರಾಕ್ಷಸರ ಸಂಹಾರ ಮಾಡುವುದಕ್ಕೆ ನಾನು ಸಹಾಯ ಮಾಡುತ್ತೇನೆ , ನಂಗೆ ನಿನ್ನ ಕೈಯಲ್ಲಿರುವ ಆಯುಧಗಳನ್ನು ಕೊಡು ಎಂದು ಕೇಳಿಕೊಳ್ಳುತ್ತಿದ್ದ.   ಎಳೆಯ ವಯಸ್ಸಿನಲ್ಲಿಯೇ ದೇಶದ ಆಗುಹೋಗುಗಳ ಬಗ್ಗೆ , ರಾಜಕೀಯದ ಬಗ್ಗೆ ತಿಳಿದಿದ್ದ ಆ ಹುಡುಗನಿಗೆ ಎಷ್ಟೋ ಸಲ ಶಾಲೆಯಲ್ಲಿ ಮೇಷ್ಟರು ಸಣ್ಣ ಬಾಯಲ್ಲಿ ದೊಡ್ಡ ತುತ್ತು ನುಂಗಬೇಡ ಸುಮ್ಮನಿರು ಎಂದು ಗದರಿಸುತ್ತಿದ್ದರು. ಹುಟ್ಟಿದ ಮನೆತನವೇ ಅಂತಹುದು. ಅವರ ಪೂರ್ವಿಕರ ಸಾಧನೆಗೆ ಪೇಶ್ವೆಗಳು ಪಲ್ಲಕ್ಕಿಯನ್ನೇ ಕೊಟ್ಟಿದ್ದರಂತೆ. ಹಾಗಾಗಿ ಆ ಹುಡುಗನಿಗೆ ಶೌರ್ಯ ಹಾಗೂ ಧೈರ್ಯ ಎರಡೂ ರಕ್ತದಲ್ಲಿಯೇ ಬಂದಿತ್ತು. ರಾತ್ರಿ ಕೂರಿಸಿಕೊಂಡು ದೊಡ್ಡಪ್ಪ ಹೇಳ

ಬಾಳೆ.

ದನಗಳನ್ನು ಮೇಯಲು ಬಿಡುತ್ತಿದ್ದ ಅಜ್ಜಿ ಅಲ್ಲೇ ಹುಲ್ಲಿನ ಹೊರೆಯ ಪಕ್ಕ ಹೊಂಬಾಳೆ ಇದೆ ನೋಡು, ಕರುವಿಗೆ ತಿನ್ನಿಸು ಎಂದಾಗ ಓಡಿ ಬಂದಿದ್ದೆ. ಹಸಿರ ಹುಲ್ಲಿನ ಪಕ್ಕದಲ್ಲಿ ಪುಟ್ಟ ಹೊಂಬಾಳೆ ಸುಮ್ಮಗೆ ಬಿದ್ದುಕೊಂಡಿತ್ತು. ಪುಟ್ಟ ಕರುವಿನ ಕೆಂಪಾದ ನಾಲಿಗೆಯ ಹಾಗಿನ ತೆಳು ನಸುಗಂಪು ಹೊಂಬಾಳೆಯನ್ನು ಇಷ್ಟಿಷ್ಟೇ ಸೀಳಿ ಅದನ್ನು ಅದರ ಬಾಯಿ ತೆರೆಸಿ ಇಟ್ಟರೆ ಅಮ್ಮ ಮೇಯುವುದಕ್ಕೆ ಹೋಗಿದ್ದನ್ನು ಮರೆತು ಕರು ತಿನ್ನುತ್ತಾ ಅಲ್ಲೇ ಮಲಗಿಕೊಂಡಿತು. ಜಾಸ್ತಿ ತಿನ್ನಿಸಬೇಡಾ ಥಂಡಿ  ಆದೀತು ಅನ್ನುತ್ತಲೇ ಒಳಬಂದವಳು ತೋಟಕ್ಕೆ ಹೋದವರು ಬರುವಾಗ ಬಾಳೆ ಎಲೆ ಕೊಯ್ದುಕೊಂಡು ಬರಲು ಹೇಳಬೇಕು ಅನ್ನುತ್ತಾ ಒಳಗೆ ಹೋದರೆ ನಿಂಗೆ ಬಾಳೆ ವಿಷ್ಯ ವಿಲ್ಲದೆ ದಿನವೇ ಹೋಗುವುದಿಲ್ಲ ನೋಡು ಎಂದು ನಕ್ಕೆ. ಈಗ ಒಮ್ಮೆ ತಿರುಗಿ ನೆನಪುಗಳ ಹರಡಿಕೊಂಡರೆ ಈ ಬಾಳೆ ಎನ್ನುವುದು ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿತ್ತಲ್ಲ ಅನ್ನಿಸುತ್ತದೆ. ನಮಗೆ ಗೊತ್ತಿದ್ದ ಮಟ್ಟಿಗೆ ಬೇರೆಲ್ಲವನ್ನೂ ಬೀಜ ಹಾಕಿ ಅದು ಮೊಳಕೆ ಒಡೆದು ಗಿಡ ಮಾಡುತ್ತಿದ್ದರೆ ಈ ಬಾಳೆಗೆ ಮಾತ್ರ ಬೀಜ ಅನ್ನುವುದೇ ಇರುತ್ತಿರಲಿಲ್ಲ. ಅದು ಬೆಳೆಯುತ್ತಿದ್ದದ್ದು ಕಂದಿನಿಂದ. ಒಂದು ಕಂದು, ಒಂದು ಗಿಡ, ಒಂದು ಗೊನೆ. ಅದ್ವೈತ ತತ್ವಕ್ಕೆ ಈ ಬಾಳೆಗಿಂತ ಒಳ್ಳೆಯ ಉದಾಹರಣೆ ಬೇರೆಯಾವುದೂ ಇಲ್ಲವೇನೋ ಅನ್ನಿಸುತ್ತಿತ್ತು. ಅಡಿಕೆಯ ತೋಟ ಮಾಡುವಾಗ ಮೊದಲು ನೆಡುತ್ತಿದ್ದದ್ದೆ ಈ ಬಾಳೆಯ ಗಿಡಗಳನ್ನು. ಎಳೆಯ ಅಡಿಕೆ ಸಸಿಗಳಿಗೆ ನೆರಳು ಕೊಡುವ ಜ

ಮಲೆನಾಡಿನ ಆತಿಥ್ಯ (ವಿಕ್ರಮ ದಸರಾ ವಿಶೇಷಾಂಕ)

ರಾತ್ರಿ ಬಸ್ಸಿಗೆ ಯಾರು ಬರ್ತಾರೋ ಹೇಳೋಕೆ ಆಗೋಲ್ಲ ಒಂದರ್ಧ ಸೇರು ಅಕ್ಕಿ ಜಾಸ್ತಿನೇ ಹಾಕು ನೀರು ಮರಳ್ತಾ ಇದೆ ಇದೊಂದು ದನದ್ದು ಹಾಲು ಕರೆದು ಬರ್ತೀನಿ ಅಂತ ಅಜ್ಜಿ ಹೇಳಿದಾಗ ಹೂ ಅಂದು ಒಳಗೆ ಬಂದಿದ್ದೆ. ಒಳಗೆ ಕಟ್ಟಿಗೆ ಒಲೆಯ ಮೇಲಿಟ್ಟ ತಪ್ಪಲೆಯಲ್ಲಿ ನೀರು ಮರಳುವ ಸದ್ದು ಕೇಳಿಸುತಿತ್ತು. ಜಗುಲಿಯಲ್ಲಿ ಅದಾಗಲೇ ಮಾತಿನ ಮಳೆ ಶುರುವಾಗಿತ್ತು. ಮರುದಿನ ಅನಂತನ ವ್ರತ. ಹಾಗಾಗಿ ಹತ್ತಿರದ ಆದರೆ ದೂರದಲ್ಲಿ ಇರುವ ನೆಂಟರು ಬರುವ ನಿರೀಕ್ಷೆ. ಅಕ್ಕಿ ಅಳೆಯಲು ಹೋಗುವಾಗ ಅರ್ಧ ಸೇರು ಎಲ್ಲಿ ಸಾಕಾಗುತ್ತೆ ಮಾವಿನಕೊಪ್ಪದವರು, ತಲ್ಲೂರು ಅಂಗಡಿ ಮಾವ ಎಲ್ಲಾ ಬಂದರೆ ಅನ್ನಿಸಿ ಇನ್ನರ್ಧ ಸೇರು ಜಾಸ್ತಿ ಹಾಕಿ ತೊಳೆದು ತಪ್ಪಲೆಗೆ ಸುರಿದು ಜಗುಲಿಯಲ್ಲಿ ಅದಾಗಲೇ ರಂಗೇರಿದ್ದ ಮಾತು ಕೇಳುತ್ತಾ ಮೈ ಮರೆತವಳಿಗೆ ಅಯ್ಯೋ ಎಲ್ಲಾ ಬಿಟ್ಟು ಇವಳಿಗೆ ಕೆಲಸ ಹೇಳಿದ್ನಲ್ಲ ಮಾಡೋದೆಲ್ಲ ಅವಾಂತರವೇ ಅನ್ನುವ ಬೈಯುವ ಸದ್ದಿಗೆ ಎಚ್ಚರವಾಯ್ತು. ಎಲ್ಲರೆದುರು ಬೈಸಿಕೊಳ್ಳುವ ರಗಳೆ ಯಾಕೆ ಅಂತ ಏನೇ ಎಂದು ಪಿಸುದನಿಯಲ್ಲೇ ಕೇಳುತ್ತಾ ಒಳಗೆ ಅಡಿಯಿಟ್ಟರೆ ಎಷ್ಟು ಅಕ್ಕಿ ಹಾಕಿದ್ಯೇ ಅನ್ನುವ ಸ್ವರದ ತೀವ್ರತೆಗೆ ಬೆಚ್ಚಿ ಹೇಳಿದರೆ ಅಯ್ಯೋ ಒಂದು ಸೇರು ಅಕ್ಕಿ ಬೇಯುವ ಪಾತ್ರೆಗೆ ಒಂದೂವರೆ ಸೇರು ಹಾಕಿದರೆ ಅನ್ನ ಆಗುತ್ತೇನೆ ಕರ್ಮ ನಂದು ಅನ್ನುತ್ತಲ್ಲೇ ಎದುರಾದ ಅತ್ತೆಗೆ ಅದ್ಯಾವ ಕುಬೇರ ವಂಶದಲ್ಲಿ ಹುಟ್ಟಿತ್ತೋ ಹೋದ ಜನ್ಮದಲ್ಲಿ ಕೈ ದೊಡ್ಡ ಒಂದು ಸೇರು ಹಾಕುವಲ್ಲಿ ಎರಡು ಸೇರು ಹಾಕುತ್ತ

ಭೂಮಿ ಹುಣ್ಣಿಮೆ.

ಆಗ ತಾನೇ ಮೋಡ ಚದುರಿ ಬಿಸಿಲು ಸಸುನಗುತ್ತಾ ಹೊರಗೆ ಹಣುಕುವಾಗ ಹಾರೆಯನ್ನು ಹೆಗಲ ಮೇಲೆ ಹಾಕಿಕೊಂಡು ಗದ್ದೆಗೆ ನೀರು ಕಟ್ಟಿ ಬರ್ತೀನಿ ಅಂದವನ ಬೆನ್ನ ಹಿಂದೆಯೇ ಹೊರಟೆ. ಆಗಷ್ಟೇ ಮಳೆಗಾಲ ಮುಗಿದು ಸೂರ್ಯನೂ ಹೊರಗೆ ಬಂದಿದ್ದ. ಎಳೆಬಿಸಿಲಿಗೆ ಹಸಿರು ಇನ್ನಷ್ಟು ಹೊಳೆಯುತ್ತಿತ್ತು. ತಣ್ಣನೆಯ ಗಾಳಿ ಹಿತವಾಗಿ ಭತ್ತದ ಪೈರನ್ನು ನೇವರಿಸಿ ಕುಶಲ ವಿಚಾರಿಸುತಿತ್ತು. ಅದು ಇನ್ಯಾರಿಗೂ ಕೇಳಬಾರದೇನೋ ಎಂದು ಬಾಗಿ ಏನೋ ಪಿಸುಗುಡುತಿತ್ತು. ಹಾಗಾಗಿ ಎಷ್ಟು ಕಿವಿ ನಿಮಿರಿಸಿದರೂ ಸುಯ್ ಎನ್ನುವ ಶಬ್ದ ಒಂದು ಬಿಟ್ಟು ಇನ್ನೇನೂ ಕೇಳಲಿಲ್ಲ.  ಜುಳು ಜುಳನೆ ಹರಿಯುವ ನೀರಿಗೂ ಸಂಭ್ರಮ, ತಿಳಿಯಾಗಿ ಹರಿದು ಶುದ್ಧ ಭಾವ ಮೂಡಿಸುತ್ತ ಮುಂದಿನ ಗದ್ದೆಗೆ ಹೋಗುತಿತ್ತು.  ಅದೇನೋ ಅರ್ಜೆಂಟ್ ಕೆಲಸವಿದೆಯೇನೋ ಅನ್ನುವ ಹಾಗೆ ಏಡಿಯೊಂದು ಗಡಿಬಿಡಿಯಲ್ಲಿ ಹೋಗುತಿತ್ತು. ಅಂಚಿನ ಬದಿಯಲ್ಲಿ ಹುಲ್ಲು ಹಸಿರಾಗಿ ನಳನಳಿಸುತಿತ್ತು. ಹುಲ್ಲಿಗೂ ತನ್ನ ಬಣ್ಣಕ್ಕೂ ತಕ್ಷಣಕ್ಕೆ ವ್ಯತ್ಯಾಸ ಗೊತ್ತಾಗದ ಹಾಗಿರುವ ಮಿಡತೆ ಚಳಿ ಕಾಯಿಸುತ್ತಾ ಕನಸು ಕಾಣುತಿತ್ತು.  ಇದ್ಯಾವುದರ ಗೊಡವೆಯೂ ಬೇಡವೆಂಬಂತೆ ಬೆಳ್ಳಕ್ಕಿಯೊಂದು ಬಿಸಿಲಿಗೆ ಮೈಯೊಡ್ಡಿ ಧ್ಯಾನ ಮಗ್ನವಾಗಿತ್ತು. ಯಾವುದೋ ಕಾರ್ಯಕ್ರಮಕ್ಕೆ ಬಂದ ಜನ ಜಂಗುಳಿಯ ಓಡಾಟದಂತೆ ಕಾಣುತಿತ್ತು ಹಾರುತಿದ್ದ ಕೀಟ ಸಂಕುಲ. ಗದ್ದೆಯ ನಡುವೆ ಗಂಭೀರವಾಗಿ ನಿಂತು ಗಮನಿಸುತ್ತಿದ್ದ ಮರದ ತುಂಬಾ ಬಗೆಬಗೆಯ ಹಕ್ಕಿಗಳ ಇಂಚರ. ಇಡೀ ಗದ್ದೆಯೆಂಬ ಗದ್ದೆಯ ಕೋಗು ಎಳೆಬಿ

ಓದಿನ ಸುಖ ವಿಜಯಕರ್ನಾಟಕ 08.09.19

ಸೂಜಿಗೆ ದಾರ ಹಾಕಿಕೊಡಲು ಹೇಳುತ್ತಿದ್ದ ಅಜ್ಜಿ ಸಂಜೆ ಶಾಲೆಯಿಂದ ಬರುವಾಗ ಇಳಿಬಿಸಿಲಿಗೆ ಎದುರಾಗಿ ಪುಸ್ತಕ ಹಿಡಿದು ಓದುವುದು ಕಂಡು ಇವಳು ನಮ್ಮತ್ರ ಕೆಲಸ ಮಾಡಿಸಲು ಕಣ್ಣು ಕಾಣಿಸೋಲ್ಲ ಅಂತಾಳ ಅನ್ನುವ ಗೊಂದಲ ಶುರುವಾಗುತ್ತಿತ್ತು. ತನ್ನ ಕೆಲಸವೆಲ್ಲಾ ಮುಗಿಸಿ ಬೆಳಕು ಇದ್ದಾಗ ಅಂಗಳದ ಚಪ್ಪರದ ಕಂಬಕ್ಕೆ ಒರಗಿ ರಾಮಾಯಣವನ್ನೋ, ಮಹಾಭಾರತವನ್ನೋ ಓದುತ್ತಿದ್ದ ಅವಳು ನಾನು ಮೂರನೆ ತರಗತಿಗೆ ಬರುವ ಹೊತ್ತಿಗೆ ಅದನ್ನು ನನ್ನ ಹೆಗಲಿಗೆ ವರ್ಗಾಯಿಸಿದ್ದಳು. ಶಾಲೆ ಮುಗಿಸಿ ಬಂದು ಚೂರು ಏನಾದರೂ ತಿಂದು ಅವಳು ಬತ್ತಿ ಮಾಡುವಾಗ ಓದಿ ಹೇಳುವ ಕೆಲಸ ಅಂತ ಇಷ್ಟದ್ದೇನು ಆಗಿರಲಿಲ್ಲ. ಸಾಕಾ ಅಂತ ರಾಗ ಎಳೆಯುತ್ತಿದ್ದರೆ ಇನ್ನೊಂದು ಕಟ್ಟು ಬತ್ತಿ ಮಾಡುವ ತನಕ ಓದು ಅಂತ ಅವಳು ಉಪಾಯದಲ್ಲಿ ಮತ್ತೆ ಮೂರೋ ನಾಲ್ಕೋ ಅಧ್ಯಾಯ ಓದಿಸಿ ಬಿಡುತ್ತಿದ್ದಳು. ಪ್ರೈಮರಿ ಶಾಲೆ ಮುಗಿಸುವ ಹೊತ್ತಿಗೆ ಈ ಓದಿ ಹೇಳುವ ಕೆಲಸದಿಂದಾಗಿ ರಾಮಾಯಣ ಹಾಗೂ ಮಹಾಭಾರತ ಎರಡೂ ಓದಿ ಮುಗಿಸಿವುದರ ಜೊತೆಗೆ ಪಟ್ಟಾಗಿ ಕುಳಿತು ಓದುವುದು ಅಭ್ಯಾಸ ಆಗಿಬಿಟ್ಟಿತ್ತು. ಆಮೇಲೆ ನಿಧಾನಕ್ಕೆ ಅವಳಿಗೆ ರಾಗಸಂಗಮದಲ್ಲಿ ಬರುತ್ತಿದ್ದ ಕಾದಂಬರಿ ಓದಿ ಹೇಳುವುದು ಶುರುವಾದ ಮೇಲೆ ಈ ಓದುವಿಕೆ ಆಸಕ್ತಿ ಅನ್ನಿಸತೊಡಗಿತ್ತು. ಅವಳು ಸಾಕು ಅಂದರೂ ಇರು ಇನ್ನೊಂದು ಚೂರು ಇದೆ ಓದಿ ಮುಗಿಸಿಬಿಡ್ತೀನಿ ಅನ್ನುತ್ತಿದ್ದೆ. ಹೀಗೆ ನನ್ನಲ್ಲಿ ಓದುವಿಕೆಯ ಬೀಜ ನೆಟ್ಟು ಅದನ್ನು ಪೋಷಿಸಿದ್ದು ಅಜ್ಜಿ. ಇವತ್ತು ಓದುವಿಕೆ ಇಲ್ಲದೆ ಹ

ಅಜ್ಜಿ

ಅವಳು ಹೊರಟು ದಿನವೆರೆಡು ಕಳೆದಿತ್ತು ಅಷ್ಟೇ. ಎಲ್ಲರೂ ಇದೀರಲ್ಲ ನೋಡಿಬಿಡಿ ಅಂತ ಅವಳ ಪೆಟ್ಟಿಗೆಗಳನ್ನು ಒಂದೊಂದಾಗಿ ತಂದು ಮಧ್ಯದ ಒಳಗೆ ಇಡುತ್ತಿದ್ದ ಮಾವ. ಕರಳು ಚುರುಕ್ ಎಂದರೂ ಅವಳ ಗುಟ್ಟು ನೋಡುವ ಹಂಬಲ. ಅವಳಷ್ಟೇ ವಯಸ್ಸಾಗಿರುವ(?) ಪೆಟ್ಟಿಗೆಗಳು ಕಪ್ಪು ಹಿಡಿದು ಹೋಗಿದ್ದವು.  ಅದೇ ಹಳೆಯ ಪೆಟ್ಟಿಗೆಯನ್ನು ಎಸೆಯದೆ ಅದಕ್ಕೆ ಹಳೆಯ ಪಂಚೆಯನ್ನು ಸುತ್ತಲೂ ಹಾಕಿ ಅದರ ತುಕ್ಕು ಬಟ್ಟೆಗೆ ಹಿಡಿಯದಂತೆ ಜೋಪಾನವಾಗಿ ಇಟ್ಟಿದ್ದಳು. ಅವಳಿಗೆ ಎಲ್ಲವನ್ನೂ ಜೋಪಾನವಾಗಿ ಇದುವ ಸ್ವಭಾವ ಬಂದಿದ್ದು ರಕ್ತದಿಂದಲೋ ಇಲ್ಲಾ ಬಡತನ ಅನಿವಾರ್ಯತೆಯಿಂದಲೋ ಈ ಕ್ಷಣಕ್ಕೂ ಗೊಂದಲ. ಮಹಾ ಅಚ್ಚುಕಟ್ಟು. ಒಂದಿನಿತೂ ಹಾಳು ಮಾಡದ ಸ್ವಭಾವ. ಅಷ್ಟು ಸುಧೀರ್ಘ ಬದುಕಿನ ಅವಳ ಆಸ್ತಿ ಒಂದು ಐದಾರು ಇಂತ ಪೆಟ್ಟಿಗೆಗಳೇ. ಒಂದೊಂದೇ ತೆಗೆಯುತ್ತಾ ಹೋದರೆ ಜೋಡಿಸಿಟ್ಟ ಆ ಅಚ್ಚುಕಟ್ಟು ಕೈ ಹಾಕಲೇ ಹಿಂಜರಿಯುವ ಹಾಗೆ ಮಾಡಿತ್ತು. ಪೆಟ್ಟಿಗೆಯ ತುಕ್ಕು ಸ್ವಲ್ಪವೂ ತಾಗದ ಹಾಗೆ ಇಡೀ ಪಂಚೆಯನ್ನು ಹಾಸಿ ಅದನ್ನೇ ಹೊದ್ದಿಸಿ ಆಗಷ್ಟೇ ಸ್ನಾನ ಮುಗಿಸಿ ಬಂದ ಎಳೆ ಮಗುವನ್ನು ಸುತ್ತಿ ಮಲಗಿಸಿದ ಹಾಗೆ ಇಟ್ಟ ಬಟ್ಟೆಗಳು. ಚೂರೂ ಸುಕ್ಕಾಗದಂತೆ, ಮಡಿಕೆ ಬೀಳದಂತೆ ಅಂಗಡಿಯಲ್ಲಿ ಜೋಡಿಸಿಟ್ಟ ಹಾಗೆ ಪೇರಿಸಿಟ್ಟ ಸೀರೆಗಳ ಕಂಡು ಕಿಬ್ಬೊಟ್ಟೆಯಲ್ಲಿ ಸಂಕಟ ಹುಟ್ಟಿತು. ಬಂಧು ಬಳಗದವರು, ಮಕ್ಕಳು ಕೊಟ್ಟ ಸೀರೆಗಳನ್ನೆಲ್ಲಾ ಹಾಗೆಯೇ ಮುಚ್ಚಿಟ್ಟಿದ್ದಳು. ಮನೆಯ ಗೃಹಪ್ರವೇಶದ ಸಮಯದಲ್ಲಿ ನೋಡು ನಿಂಗೆ ರೇಷ್ಮೆ ಸ

ಗೌರೀ

ಹೊಯ್ಯುವ ಮಳೆಗೂ ತುಸು ಸುಧಾರಿಸಿಕೊಳ್ಳುವ ಹೊತ್ತದು. ಒಂದೇ ಸಮನೆ ಸುರಿದರೆ ಮಳೆಯಾದರೂ, ಮಾತಾದಾರೂ ಕೊನೆಗೆ ಪ್ರೀತಿಯಾದರೂ  ರೇಜಿಗೆ ಹುಟ್ಟಿಸುತ್ತದೆ. ನಿಂತರೆ ಸಾಕು ಅನ್ನಿಸುತ್ತದೆ. ಹಾಗಾಗಿ ಅದಕ್ಕೂ ಮೊದಲೇ ಮಳೆ ನಿಧಾನಕ್ಕೆ ಹೊರಡುವ ಸಿದ್ಧತೆ ಮಾಡಿಕೊಳ್ಳುತ್ತದೆ. ಆದೊಮ್ಮೆ ಈಗೊಮ್ಮೆ ಪುಟ್ಟ ಮಳೆ, ನಡುನಡುವೆ ತುಸು ಬಿಸಿಲು, ಮತ್ತೆ ಸಣ್ಣನೆಯ ಮೋಡ, ಮಬ್ಬಿಗಿಂತ ಸ್ವಲ್ಪ ಪ್ರಕಾಶಮಾನವಾದ ಬೆಳಕು ಇದು ಭಾದ್ರಪದದ ಲಕ್ಷಣ. ಬಿಡುವು ಬರೀ ಮಳೆಗಷ್ಟೇನಾ ಎಂದರೆ ಅಲ್ಲ, ಕೆಲಸಕ್ಕೂ ಸ್ವಲ್ಪ ವಿರಾಮ. ನಾಟಿ, ಕಳೆ ಅಂಚು ಕಡಿಯುವುದು ಎಂಬೆಲ್ಲಾ ಕೆಲಸಗಳು ಮುಗಿದು, ಪೈರೂ ದಟ್ಟ ಹಸಿರಿಗೆ ತಿರುಗುವ ಹೊತ್ತು, ಭೋರ್ಗೆರೆದು ಅಬ್ಬರಿಸಿ ಉಕ್ಕುತ್ತಾ ಕೆಂಪು ಕೆಂಪಾಗಿ ಹರಿವ ಹಳ್ಳ, ನದಿಗಳೂ ಮೂಲ ಸ್ವರೂಪಕ್ಕೆ ಮರಳುವ ಹಣಿಯಾಗುವ ಹೊತ್ತು, ಗಿಡಗಳು ಮೈತುಂಬಾ ಹೂ ಬಿಟ್ಟು ಇಡೀ ಪ್ರಕೃತಿಗೆ ಬಣ್ಣ ಬಳಿಯುವ ಸಮಯ, ಪ್ರಕೃತಿಯೇ ಸುಧಾರಿಸಿಕೊಳ್ಳುತ್ತಿದೆಯೇನೋ ಎಂದು ಕಾಣುವ ಹೊತ್ತಿನಲ್ಲಿ ನಡುಮನೆಯ ಗೋಡೆಗೆ ಒರಗಿ ಕಾಲುಚಾಚಿ ಕುಳಿತರೆ ಬಿಸಿಲುಕೋಲಿನ ಹಾಗೆ ಪಕ್ಕನೆ ಮಿಂಚುವ ತವರಿನ ನೆನಪು, ಹೋಗುವ ಹಂಬಲ, ಅಪ್ಪ ಬರುವುದು ಕಾಯುವ ನಿರೀಕ್ಷೆ. ಪ್ರತಿ ಹೆಣ್ಣಿಗೂ ತವರು ಕಾಡುವ ಮಾಯೆ, ಮನುಷ್ಯರ ಪಾಡು ಹಾಗಿರಲಿ ಅಂತ ಪರಶಿವನ ಪತ್ನಿ ಗೌರಿಯನ್ನೇ ತವರಿನ ಮೋಹ ಬಿಟ್ಟಿಲ್ಲ. ಜಗತ್ತೇ ಹೀಗೆ ಸುಧಾರಿಸಿಕೊಳ್ಳುವ ಹೊತ್ತಿಗೆ ಬೆಳ್ಳಂಬೆಳಿಗ್ಗೆ ತವರಿನ ನೆನಪಾಗಿ ಎದ್ದು ಹೊರಟಳಂ

ಸಮರ ಭೈರವಿ

ಅಷ್ಟೂ ಕೇಳಿಸಿಕೊಂಡು ಸುಮ್ನೆ ಬಂದ್ಯಾ, ನಿಂಗೆ ರಕ್ತ ಕುದಿಲಿಲ್ವಾ ಅದೆಂಥಾ ಷಂಡತನ ನಿಂದು ಎಂದು ಶಾಲೆಗೇ ಹೋಗುವಾಗ ರಸ್ತೆ ಬದಿಯ ಮನೆಯಿಂದ ತೂರಿಬಂದ ಮಾತುಗಳು ಕ್ಷಣಕಾಲ ಕಾಲುಗಳನ್ನು ಸ್ತಬ್ಧವಾಗಿಸಿತು. ಒಮ್ಮೆ ಪಕ್ಕದ ಮನೆಯವರಾರೋ ರೇಗಿಸಿದರು ಎಂದು ಅಳುತ್ತಾ ಬಂದಿದ್ದ ನಾಲ್ಕು ವರ್ಷದ ನನಗೂ ಅಳ್ತಾ ಬರೋದಲ್ಲ ಶೋಭಣ್ಣ ತಿರುಗಿಸಿ ಕೊಟ್ಟು ಬರಬೇಕು, ಹೇಡಿ ಆಗಬಾರದು, ಧೈರ್ಯ ಕಲಿಲಿಲ್ಲ ಅಂದ್ರೆ ಹೀಗೆ ಅಳ್ತಾ, ಯಾರಾದರೂ ಸಹಾಯಕ್ಕೆ ಬರ್ತಾರ ಅಂತ ಕಾಯ್ತಾ ಇನ್ನೊಬ್ಬರ ಕಡೆಗೆ ಕೈ ಚಾಚಬೇಕು ನೋಡು ಅಂದಿದ್ದ. ಇಷ್ಟು ದೀರ್ಘದ ಬದುಕಿನ ಉದ್ದಕ್ಕೂ ನನ್ನ ಕಾಡಿದ್ದು, ಕಾಪಾಡಿದ್ದು, ಎದೆಗುಂದದ ಹಾಗೆ ಕಾದದ್ದು ಇವೇ ಮಾತುಗಳು. ಬರೀ ತಾಳ್ಮೆ ಸಹನೆ ಅಷ್ಟೇ ಹೇಳಿಕೊಟ್ಟರೆ ಕಲಿತರೆ ಸಾಲದು ಧೈರ್ಯ ಛಲ ಎರಡೂ ಇರಬೇಕು, ಪೋಷಿಸಬೇಕು ಅಂತ ಕಲಿಸಿದ್ದು ನನ್ನಪ್ಪ... ಇವಷ್ಟೂ ಗುಣಗಳ ಎರಕ ಹೊಯ್ದಂತೆ ಬದುಕುವವರು ತುಂಬಾ ಕಡಿಮೆ. ಆದರೆ ಇವೆಲ್ಲವೂ ಕಾಣಿಸುವುದು ಒಬ್ಬ ಯೋಧನಲ್ಲಿ.  ಇದು ಮತ್ತೆ ಹಸಿರಾಗಿದ್ದು, ಇನ್ನಷ್ಟು ಅರ್ಥವಾಗಿದ್ದು ಸಮರ ಭೈರವಿ ಓದುವಾಗ. ಒಂದು ದೇಶದ ಮಾನಸಿಕತೆಯನ್ನು ಹಾಳು ಮಾಡುವುದಕ್ಕೆ ಹದಿನೈದು ವರ್ಷಗಳು ಸಾಕಂತೆ. ಕೊಂಚವೂ ರಕ್ತಪಾತವಿಲ್ಲದೆ, ಆಯುಧಧ ಹಂಗಿಲ್ಲದೇ ಮೈಯೂ ಮುಟ್ಟದೆ ಅದನ್ನು ಸುಲಭವಾಗಿ ಮಾಡಿಬಿಡಬಹುದು. ನಿನ್ನ ಆಚರಣೆ, ನಂಬಿಕೆ, ವಿದ್ಯೆ ಇವು ಸರಿಯಿಲ್ಲ ಅಂತ ಪದೇ ಪದೇ ಹೇಳುತ್ತಾ ಇನ್ನೆನ್ನೋ ಸುಲಭವಾದುದನ್ನು ತೋರಿಸಿಬಿಟ್ಟರ
ಇವತ್ತೇ ಹೊರಟು ಬಿಡು ಮಳೆ ಸ್ವಲ್ಪ ಕಡಿಮೆ ಆದ ಹಾಗಿದೆ ಅಂತ ಫೋನ್ ಬಂದಾಗ ಹೊರಡುವುದೋ ಬೇಡವೋ ಅನ್ನುವ ಗೊಂದಲಕ್ಕೆ ತೆರೆ ಬಿದ್ದು ಆದದ್ದಾಗಲಿ ಹೊರಟೇ ಬಿಡ್ತೀನಿ ಮತ್ತೆ ಏನಾಗುತ್ತೋ ನೋಡುವ ಎಂದು ಹೊರಟಿದ್ದಾಗಿತ್ತು. ಅದಾಗಲೇ ಉತ್ತರ ಕರ್ನಾಟಕ ಅರ್ಧ ಮುಳುಗಿದ ಸುದ್ದಿ ಕೇಳಿ ನೆಲೆ ಕಳೆದುಕೊಂಡವರ ನೋಡಿ ಸಂಕಟ. ಊರಲ್ಲಿ ಏನಾಗಿದೆಯೋ ಅನ್ನೋ ಆತಂಕ. ಮದುವೆಗಿನ್ನೂ ಒಂದೇ ವಾರ ಹೀಗೆ ಮಳೆ ಹೊಯ್ದರೆ ಹೇಗೆ ನಡೆಯುತ್ತೋ ಅನ್ನುವ ಭಯ. ಇವೆಲ್ಲಗಳನಡುವೆ ಊರಿನ ಮಳೆ ಹೊಳೆ ನೋಡುವ ಸಣ್ಣ ಸಂಭ್ರಮ. ಅಂತೂ ಇಂತೂ ಬಸ್ ಹತ್ತಿ ಕುಳಿತರೆ ಮೊದಲೇ ನಿದ್ದೆ ಬರದದ್ದು ಈಗ ಬರುವುದಾದರೂ ಹೇಗೆ? ದಾರಿಯ ಮಧ್ಯೆ ಸಿಗುವ ವಾಹನಗಳ ಹಾಗೆ ಮಳೆಯೂ ನಡು ನಡುವೆ ಸಿಗುತ್ತಾ, ಕಚಗುಳಿಯಿಟ್ಟು ಮಾತಾಡಿಸುತ್ತಾ ದಾರಿ ಸಾಗುತಿತ್ತು. ಯಾಕೋ ಕುಳಿತು ಕುಳಿತು ಬೆನ್ನು ನೋವು ಎಂದು ಹಾಗೆ ಒರಗುವಾಗ ಮಂಡಗದ್ದೆಯಲ್ಲಿ ದಾರಿ ಕ್ಲಿಯರ್ ಇದೆ ಅನ್ನುವ ಮಾತು ಕೇಳಿ ಇನ್ನಷ್ಟು ಸಮಾಧಾನದಿಂದ ಹಾಗೆ ಒರಗಿ ಗಾಜನೂರು ಬರುತ್ತಿದ್ದ ಹಾಗೆ ಮತ್ತೆ ತುಂಗೆಯ ಅಬ್ಬರ ನೋಡುವ ಮನಸ್ಸಾಗಿ ಎದ್ದು ಕಣ್ಣು ಕೀಲಿಸಿ ಕುಳಿತು ಸಮಯ ಎಷ್ಟು ಎಂದು ನೋಡುವ ಎಂದು ಮಗಳಿಗೆ ಹೊಚ್ಚಿದ್ದ ರಜಾಯಿ ನಿಧಾನಕ್ಕೆ ಸರಿಸಿ  ಹ್ಯಾಂಡ್ ಬ್ಯಾಗ್ ತೆಗೆಯಲು ಹೋದರೆ ಒಮ್ಮೆಗೆ ಎದೆ ಧಸಕ್ಕೆಂದಿತು. ಯಾವತ್ತೂ ಒಮ್ಮೆ ಹತ್ತಿದ ಮೇಲೆ ಕಾಲ ಬುಡದಲ್ಲಿ ಬ್ಯಾಗ್ ಇಟ್ಟರೆ ಇಳಿಯುವಾಗಲೇ ತೆಗೆಯುವ ಸ್ವಭಾವ. ಅವತ್ತೂ ಹಾಗೆ ಕಾಲ ಬುಡದಲ್ಲಿ