Posts

Showing posts from 2020
ಆಟ  ಮುಗಿಸಿ ಮನೆಗೆ ಬರುವಾಗ ಮುಖ ಧುಮು ಧುಮು. ತುಟಿ ಮುಂದು. ಮಾತಾಡಿದರೆ ಜ್ವಾಲಾಮುಖಿ  ಸಿಡಿಯುತ್ತೆ ಎಂದುಕೊಂಡು  ನೋಡಿದರೂ ನೋಡದವಳ ಹಾಗೆ ಇದ್ದರೂ ಕಿಂಚಿತ್ತೂ ಉಪಯೋಗವಾಗಲಿಲ್ಲ. ಹತ್ತಿರವೇ ಬಂದು  ಏನಾಯ್ತು ಎಂದು ಕೇಳುವ ಅಗತ್ಯವೇ ಇಲ್ಲದೆ ಅವರೆಲ್ಲಾ ದಿನಾ ಪ್ರಾಕ್ಟೀಸ್ ಮಾಡ್ತಾ ಇದ್ರು, ಹ್ಯಾಂಡಲ್ ಹಿಡಿಯದೇ ಎರಡು ರೌಂಡ್ ಹೋಗ್ತಾರೆ ನಂಗೆ ಆಗಿಲ್ಲ ಅದಕ್ಕೆ ಎಷ್ಟು ಇನ್ಸಲ್ಟ್ ಮಾಡಿದ ಗೊತ್ತಾ ಅವನು ಕೆಂಡ ನಿಗಿ ನಿಗಿ. ನೀರು ಹಾಕಿದರೆ ಬೂದಿ ಮುಖಕ್ಕೆ ಹಾರುವುದು ಖಚಿತ ಎಂದು ಗೊತ್ತಿದ್ದರಿಂದ ಮೌನವಾಗಿಯೇ ಕೇಳಿಸಿಕೊಳ್ಳುತ್ತಿದ್ದೆ. ಎಷ್ಟು ಹೊತ್ತು ತಾನೇ ಉರಿದೀತು? ಆರಲೇ ಬೇಕಲ್ಲ. ಉರಿದು ಆರಿದರೆ ಅಲ್ಲಿಗೆ ಎಲ್ಲವೂ ನಿಶ್ಚಲ ಆ ವಯಸ್ಸಿನಲ್ಲಿ ನಾನಿದ್ದದ್ದೂ ಹೀಗೆ ಅಲ್ಲವಾ..  ಈ ಅವಮಾನಗಳೇ ಹೀಗೆ. ಕೋಪ, ದುಃಖ, ಅಸಹಾಯಕತೆ ಎಲ್ಲವನ್ನೂ  ಸೃಷ್ಟಿಸಿಬಿಡುತ್ತವೆ. ಅವಮಾನಕ್ಕಿಂತ ದೊಡ್ಡ ಶಿಕ್ಷೆ ಯಾವುದಿದೆ ಅನ್ನಿಸಿದ್ದು  ಎಷ್ಟೋ ಸಲ. ಕೆಲವೊಮ್ಮೆ ಉತ್ತರಿಸಬೇಕು ಎಂದರೂ ಉತ್ತರಿಸಲಾಗದ ಪರಿಸ್ಥಿತಿಯಲ್ಲಿ ನಿಂತು ಬಿಟ್ಟಿರುತ್ತೇವೆ.  ಅವುಡುಗಚ್ಚಿ ಸಹಿಸುವುದರ ವಿನಃ ಬೇರೆ ದಾರಿಯೇ ಇರುವುದಿಲ್ಲ. ಭಾರವಾದರೂ, ಕುಸಿದರೂ ಇಳಿಸಲು ಆಗುವುದೇ ಇಲ್ಲ. ನರಳುವುದು ತಪ್ಪುವುದಿಲ್ಲ. ಅದನ್ನು ಅವರು ಉದ್ದೇಶ ಪೂರ್ವಕವಾಗಿ ಮಾಡಿದ್ದರೂ ಗೊತ್ತಿಲ್ಲದೇ ಜರುಗಿದ್ದರೂ ಅದನ್ನೆದುರಿಸಿದವರ ಪಾಡು ಬದಲಾಗುವುದಿಲ್ಲ. ಕ...
 ಮೊದಲ ಬಾರಿಗೆ ತನ್ನ ತಂದೆಯ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ ಬೆಳೆಗೆರೆ ಎನ್ನುವ ಸಾಲು ಕಾಣಿಸುತ್ತಲೇ ಕೈ ಸ್ಕ್ರಾಲ್ ಮಾಡುವುದು ನಿಲ್ಲಿಸಿತ್ತು. ಹಾಳಾದ್ದು ಈ ಕುತೂಹಲ ಅದು ಇನ್ನೊಬ್ಬರ ಬಗ್ಗೆ ಬಿಡಿಸಿಕೊಳ್ಳುವುದು ಸುಲಭವಲ್ಲ ಅನ್ನಿಸಿದರೂ ಮೀರಲಾಗಲಿಲ್ಲ. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ, ಇಲ್ಲದ ಮಕ್ಕಳ ತಬ್ಬಲಿತನ ಎಷ್ಟು ಬೆಳೆದರೂ, ಏನೇ ಸಾಧಿಸಿದರೂ ಹೋಗದು. ಆ ಅನಾಥಭಾವ ಕೊನೆಯ ಉಸಿರಿನತನಕ  ಬೆಂಬಿಡದ ಸಂಗಾತಿ. ಇದನ್ನು ಅನುಭವಿಸಿದ್ದರಿಂದಲೇ ಅವರು ಅದನ್ನು ಹೇಗೆ ಎದುರಿಸಿದರು ಎನ್ನುವ ಕುತೂಹಲ. ಕೇಳಿ ಮುಗಿಸುವ ಹೊತ್ತಿಗೆ ಇದು ಬೆಂಬಿಡದ ಬೇತಾಳ ಅನ್ನುವುದು ಅರ್ಥವಾಗಿತ್ತು. ತಂದೆಯಿಲ್ಲ ಜೊತೆಗೆ ಬಡತನ ಅಂದರೆ ಮುಗಿದೇ ಹೋಯಿತು. ಊರೆಲ್ಲಾ ಬುದ್ಧಿ ಹೇಳುವವರೇ, ಜವಾಬ್ದಾರಿ ಕಲಿಸುವವರೇ. ಆ ವಾತಾವರಣದಲ್ಲಿ ಬೆಳೆದವರೆಗೆ ಅನುಕಂಪ ಎಂದರೆ ಪರಮ ಅಹಸ್ಯ. ಅಷ್ಟೆಲ್ಲಾ ಸಾಧನೆ ಮಾಡಿ ಹೆಸರುವಾಸಿ ಆಗಿ ಶ್ರೀಮಂತಿಕೆಯಲ್ಲಿ ತೇಲಾಡಿದರು ಬೇರೆಲ್ಲಾ ಬಿಟ್ಟು ಹೋದರೂ ಈ ಅನಾಥಭಾವ ಮಾತ್ರ ಬಿಟ್ಟು ಹೋಗುವುದಿಲ್ಲವಲ್ಲ ಅನ್ನಿಸಿ ಹೊಟ್ಟೆಯೊಳಗೆ ಸಂಕಟ. ಅದರಲ್ಲೂ ತಂದೆ ಇಲ್ಲ ಎನ್ನುವುದಕ್ಕಿಂತ ಯಾರು ಎಂದು ಗೊತ್ತಿಲ್ಲ ಎನ್ನುವುದು ಮತ್ತಷ್ಟು ಹಿಂಸೆ. ಎಷ್ಟೇ ಎತ್ತರಕ್ಕೆ ಬೆಳೆದವನನ್ನೂ ಒಂದೇ ಸಲಕ್ಕೆ ಮೊಳಕಾಲ ಮೇಲೆ ಕೂರಿಸಿ ಬಿಡುವ ಶಕ್ತಿ ಅದಕ್ಕೆ. ಬೇರೇನೂ ಸಿಗದಾಗ ಎದುರಿನ ವ್ಯಕ್ತಿಯನ್ನು ಸಾಯಿಸಲು ಇರುವ ಏಕೈಕ ಆಯುಧ. ಇವೆಲ್ಲಾ ಅನುಭವಿಸಿ...
 ಮೊದಲ ಕಾರು ಕೊಂಡ ಸಂಭ್ರಮ. ಇಬ್ಬರೂ ಆಫೀಸ್ ಗೆ ಹೋಗುತ್ತಿದ್ದರಿಂದ ರಜೆ ಸಿಕ್ಕಿದ ಕೂಡಲೇ ಎಲ್ಲಾದರೂ ಹೊರಡುವ ಅಭ್ಯಾಸ. ಹೊಸ ಕಾರ್ ಸುತ್ತುವ ಹುಚ್ಚು ಎರಡು ಜೊತೆಯಾಗಿತ್ತು. ಹಾಗೆ ಮೈಸೂರಿಗೆ ಹೋಗುವ ಹುಕಿ ಬಂದು ಹೋಗಿದ್ದೆವು. ಎಲ್ಲಾ ಕಡೆ ಸುತ್ತಾಡಿ ಅರಮನೆ ನೋಡಿ ಬಂದು  ಕಾರ್ ಸ್ಟಾರ್ಟ್ ಆಗಿ  ಇನ್ನೇನು ಹೋರಡಬೇಕು ಅಕ್ಕಾ ಎನ್ನುವ ಸ್ವರ. ಕಿಟಕಿಯಿಂದ ಹೊರಗೆ ನೋಡಿದರೆ ಕೈಯಲ್ಲಿ ಪುಟ್ಟ ಮರದ  ಆಭರಣದ ಪೆಟ್ಟಿಗೆ ಹಿಡಿದ ವ್ಯಕ್ತಿಯೊಬ್ಬ ಕಾಣಿಸಿದ. ಅದರ ಮೇಲಿನ ಕುಸುರಿ ಕೆಲಸ ಒಳಗೆ ಹಾಕಿದ ಕೆಂಪು ಮಕಮಲ್ ಬಟ್ಟೆ ಎಲ್ಲವೂ ಚೆಂದವಿದ್ದರೂ ತಗೊಂಡು ಏನು ಮಾಡೋದು ಅನ್ನಿಸಿ  ಬೇಡ ಎಂದೇ. ನಾವು ಹೋಗಿ ತೆಗೆದುಕೊಳ್ಳುವುದಕ್ಕೂ ಯಾರಾದರೂ ಬಂದು ತೆಗೆದುಕೊಳ್ಳಿ ಎನ್ನುವುದಕ್ಕೂ ತುಂಬಾ ವ್ಯತ್ಯಾಸ. ಅವನು ಹೋಗುವ ತರಹ ಕಾಣಿಸಲಿಲ್ಲ.  ತಗೊಳ್ಳಿ ಬಂಗಾರ ಹಾಕಿಡಲು ಚೆನ್ನಾಗಿರುತ್ತದೆ ಅವನ ದನಿಯಲ್ಲಿ ಸಣ್ಣಗೆ ಒತ್ತಾಯ ಕಾಣಿಸಿ ಕಸಿವಿಸಿ. ಬೇಡ ಅಂದೇನಲ್ಲ ದನಿ ಕೊಂಚ ಜೋರಾದ ಹಾಗೆ ಅನ್ನಿಸಿತು.  ಅದೇನೋ ಇನ್ನೂ ಬಂಗಾರದ ಮೋಹವಿರಲಿ ಅಲಂಕಾರ ಮಾಡಿಕೊಳ್ಳುವ ಆಸಕ್ತಿಯು ಇರಲಿಲ್ಲ. ಬಟ್ಟೆಗಳ ಬಗ್ಗೆ ವಿಪರೀತ ಮೋಹಕ್ಕೆ ಬಿದ್ದ ಹೊತ್ತು ಅದು. ಅದೆಷ್ಟು ಬಟ್ಟೆಗೆ ದುಡ್ಡು ಸುರಿತಿ ಅದರ ಬದಲು ಬಂಗಾರ ತಗೋಬಾರದ ಆಪತ್ಕಾಲಕ್ಕೆ ಆಗುತ್ತೆ ಮನೆಯ ಓನರ್ ಆದರೂ ಅಮ್ಮನಂತಿದ್ದ ಅವರು ಬೈಯ್ದು ಬೈದು ಸಾಕಾಗಿ ತಿಂಗಳಿಗೆ ಇಂತಿಷ್ಟು ಅಂತ ನಂ...

ಓದಿನ ಮೆಟ್ಟಿಲುಗಳು (ವಿಜಯಕರ್ನಾಟಕ)

 ಆಟದ ನಡುವೆ ತುಸು ಸುಧಾರಿಸಿಕೊಳ್ಳಲು ಕುಳಿತಾಗ ಕೈ ಗೆ ಬರುತ್ತಿದ್ದದ್ದು ಚಂದಮಾಮ. ಅದರಲ್ಲಿ ಬರುತ್ತಿದ್ದ ಬೇತಾಳನ ಕತೆಗಳನ್ನು ಮೊದಲು ಓದಿಯೇ ಆಮೇಲೆ ಉಳಿದ ಕಥೆಗಳತ್ತ ಕಣ್ಣು ಹರಿಯುತ್ತಿದ್ದದ್ದು. ವಿಕ್ರಮಾದಿತ್ಯ ಏನು ಉತ್ತರ ಕೊಟ್ಟಿದ್ದಿರಬಹುದು ಎಂದು ಯೋಚಿಸಿ ಕೆಲವೊಮ್ಮೆ ಚರ್ಚಿಸಿ(?) ಯಾರು ಸರಿಯಾದ ಉತ್ತರ ಕೊಡ್ತಾರೋ ಅವರಿಗೆ ಚಂದಮಾಮ ಮೊದಲು ಓದುವ ಅವಕಾಶ. ಹೀಗೆ ಪುಸ್ತಕವನ್ನು  ಮೊದಲು ಓದಬೇಕಾದರೆ  ತಲೆಗೆ ಕೆಲಸ ಕೊಡಬೇಕು ಎಂದು ಕಲಿಸಿದ್ದು ಚಂದಮಾಮ.  ಚಿಕ್ಕಂದಿನಿಂದಲೂ ರೈಲುಬೋಗಿಯ ಪಯಣದಲ್ಲಿ ಬಂದವರು ಹೋದವರು, ಬರುತ್ತಿರುವವರ  ನಡುವೆ ಜೊತೆಗೆ ನಿರಂತರವಾಗಿ ಅಷ್ಟೇ ಆಪ್ತವಾಗಿ ಇವತ್ತಿಗೂ ಉಳಿದಿದ್ದು, ಪೊರೆದದ್ದು, ಸಾಂಗತ್ಯ ನೀಡಿದ್ದು ಪುಸ್ತಕಗಳು. ನಂತರ ಬಂದ ಬಾಲಮಂಗಳ, ಚಂಪಕ, ಶಾಲೆಯ ಲೈಬ್ರರಿ ಎಂಬ ಪುಟ್ಟ ಪೆಟ್ಟಿಗೆಯಲ್ಲಿದ್ದ ಅಮರ ಚಿತ್ರಕಥಾ, ಭಾರತ ಭಾರತೀ ಪುಸ್ತಕಗಳು ಹಸಿವೆಯ ತಣಿಸಿದ ಆತ್ಮಬಂಧುಗಳು. ಇದೆ ಪ್ರಪಂಚದಲ್ಲಿ ಮುಳುಗಿಹೋದವರನ್ನು ಹಠಾತ್ತನೆ ಮತ್ತೊಂದು ಪ್ರಪಂಚಕ್ಕೆ ಎಳೆದೊಯ್ದಿದ್ದು ಅಜ್ಜನ ಅನಾರೋಗ್ಯ. ಅವರಿಗಾಗಿ ರಾಮಾಯಣ ಮಹಾಭಾರತ ಓದುವ ಕೆಲಸ ಅಂಟಿಕೊಂಡಿತ್ತು. ಆಟವನ್ನು ಬಿಟ್ಟು  ಅದರಲ್ಲೂ ನಮ್ಮಷ್ಟಕ್ಕೆ ನಾವೇ ಓದಿಕೊಳ್ಳುವ ಸುಖದಿಂದ ಜೋರಾಗಿ ಇನ್ನೊಬ್ಬರಿಗೆ ಓದಿ ಹೇಳುವ ಸಂಕಟ ಬೇರೆ. ಕತೆಗಳು ಉಪಕಥೆಗಳು, ವಾಲ್ಮೀಕಿ, ವ್ಯಾಸರ ಕತೆ ಹೇಳುವ ರೀತಿ ಆಳ...

ಅಟ್ಟ

 ನಾಳೆ ಅಟ್ಟ ಗುಡಿಸಬೇಕು ಅವಳ ಸ್ವಗತ  ನಮಗೆ ಸಂಭ್ರಮ. ನಡುಮನೆಯ ಮೂಲೆಯಲ್ಲಿದ್ದ ಏಣಿಯ ಕಡೆಗೆ ಗಮನ.  ನಡುಮನೆಯ ಮಾಡಿಗೂ ನೆಲಕ್ಕೂ ಮಧ್ಯದಲ್ಲಿ ಮರದ ಹಲಗೆ ಹಾಸಿ ಮಾಡಿದ ಅಟ್ಟ  ನೋಡಿದಾಗಲೆಲ್ಲ ಯಾಕೋ ತ್ರಿಶಂಕು ಸ್ವರ್ಗವೇ ನೆನಪಿಗೆ ಬರುತಿತ್ತು. ಸ್ವರ್ಗದಲ್ಲಿದ್ದು ಇಲ್ಲಿಲ್ಲ ಅನ್ನುವ  ಯಾವ ವಸ್ತುವೂ ಇರಬಾರದು ಎಂದು ಹಠದಿಂದಲೇ ಸೃಷ್ಟಿ ಮಾಡಿದ್ದನಂತೆ. ಮನೆಯಲ್ಲಿ ಯಾವ ವಸ್ತು ಕೇಳಿದರು ಅಲ್ಲಿ ಅಟ್ಟದಲ್ಲಿ ಇರಬೇಕು ನೋಡು ಎನ್ನುವ ಮಾತು ಕೇಳಿದಾಗ ಇದು ನೆನಪಾಗುತಿತ್ತು. ಹಾಗಾಗಿ ಅಟ್ಟವೆಂದರೆ ಬಹು ವರ್ಷಗಳ ತನಕ ನನ್ನ ಪಾಲಿಗೆ ತ್ರಿಶಂಕು ಸ್ವರ್ಗ. ಏಣಿ ಹತ್ತಿ ಅಟ್ಟ ಏರಿದ ಕೂಡಲೇ ಸ್ವಾಗತಿಸುತ್ತಿದ್ದದ್ದು ಕಡುಕತ್ತಲು. ಎಲ್ಲೋ ಗಾಳಿಗೆ ಸರಿದ ಹಂಚಿನ ಸಂದಿಯಿಂದಲೋ, ಕಡು ಮಾಡಿನ ಮೂಲೆಯಿಂದಲೋ ಒಂದು ಸಣ್ಣ ಬೆಳಕು ಬಂದರು ಬೆಳಕು ಕಾಣಿಸುತಿತ್ತೇ ಹೊರತು ಅಟ್ಟ ಕಾಣಿಸುತ್ತಿರಲಿಲ್ಲ. ಆ ಮಟ್ಟಿಗೆ ಅಟ್ಟ ತನ್ನಲ್ಲಿದ್ದ ರಹಸ್ಯವನ್ನು ಕಾಪಾಡಿಕೊಳ್ಳುತಿತ್ತು. ಯಾರೇ ಬಂದರೂ ತಕ್ಷಣಕ್ಕೆ ಬಿಟ್ಟುಕೊಡುತ್ತಿರಲಿಲ್ಲ. ಹಾಗಾಗಿ ಏನಾದರೂ ತೆಗೆದುಕೊಂಡು ಬರಲು ಹೋದರೆ ಪಕ್ಕನೆ ಸಿಗುತ್ತಿರಲಿಲ್ಲ. ಒಂದು ಬೆಳಕಿನ ಕಿಡಿಯೂ ಇಲ್ಲದೆ ಕಣ್ಣು ಮುಚ್ಚಿಕೊಂಡು ಹೋದರೂ ಅಜ್ಜಿಗೆ ಸಿಗುತ್ತಿದ್ದ ವಸ್ತು ಬ್ಯಾಟರಿ ಹಿಡಿದು ಹೋದರೂ ನಮಗೆ ಸಿಗದಿದ್ದಾಗ ಸಿಟ್ಟು ಬರುತಿತ್ತು. ಇಟ್ಟಿದ್ದು ನಾನಲ್ವ ಹಾಗಾಗಿ ಬೇಗ ಸಿಗುತ್ತೆ ಅನ್ನುವ ಮಾತಿನ ಅರ್ಥ ಆಗ ಆ...

ಹೂ ಗಿಡ ಒಂದಾದರು ಇರಬೇಕು

 ಬೆಳಕು ಹರಿಯುತ್ತಿದ್ದ ಹಾಗೆಯೇ ಏಳಬೇಕಿತ್ತು. ಹಾಗಾಗಿ ಪ್ರತಿದಿನ ಸೂರ್ಯೋದಯ ನೋಡುವ ಅವಕಾಶ.  ಬಿಸಿಲು ಏರುವವರೆಗೆ ಮಲಗುವುದು ಎಂದರೆ ಗೊತ್ತಿಲ್ಲದ ಕಾಲ. ಬೆಳಕು ಮೂಡುವ ಮುನ್ನವೇ ಅಜ್ಜಿ ಏಳುತ್ತಿದ್ದಳು. ಬೆಳಕು ಮೂಡಿದ ಮೇಲೆ ನಾವುಗಳು ಅಷ್ಟೇ. ನಸು ಬೆಳಕು ತುಸು ತುಸುವಾಗಿ ಅಡಿಯಿಡುವಾಗಲೇ ನಾವು ಕಣ್ಣುಜ್ಜಿಕೊಂಡು ಅರೆಗಣ್ಣು ತೆರೆದೇ ಬಚ್ಚಲ ಮನೆಯ ಕಡೆಗೆ ನಡೆಯುತ್ತಿದ್ದೆವು. ಅದಾಗಲೇ ದನ ಕರುಗಳು ಎದ್ದು ಸರಭರ ಸದ್ದು ಮಾಡುವುದನ್ನೇ ನೋಡುತ್ತಾ, ಧಗಧಗನೆ ಉರಿಯುವ ಬೆಂಕಿಯ ಎದುರು ತುಸು ಕುಳಿತು ಮೈ ಬೆಚ್ಚಗೆ ಮಾಡಿಕೊಂಡು ಅದಾಗಲೇ ಮರಳುತಿರುತ್ತಿದ್ದ ನೀರಿನಲ್ಲಿ ಮುಖ ತೊಳೆದು ಒಳಗೆ ಬರುವ ಹೊತ್ತಿಗೆ ಲೋಟದಲ್ಲಿ ಹಬೆಯಾಡುವ ಕಾಫಿ. ಕಾಫಿ ಕುಡಿದು ಈಚೆಗೆ ಬರುವ ಹೊತ್ತಿಗೆ ಸ್ವಾಗತಿಸುವ ಬೆಳ್ಳಂ ಬೆಳಗು,  ಕೈಯಲ್ಲಿ ಹೂವಿನ ಬುಟ್ಟಿ. ಪ್ರತಿದಿನ ಬೆಳಿಗ್ಗೆ ಕಾಫಿ ಕುಡಿದ ಮೇಲೆ ದೇವರ ಪೂಜೆಗೆ ಹೂವು ಬಿಡಿಸುವುದು ನಮ್ಮ ಕೆಲಸ. ಅದೊಂದೇ ಆದರೆ ಏನೂ ಅನ್ನಿಸುತ್ತಿರಲಿಲ್ಲವೇನೋ? ಹಾರುವ ಚಿಟ್ಟೆಗಳ ನೋಡುತ್ತಾ, ಎಲೆಯ ತುದಿಯಲ್ಲಿ ಗುಂಡಾಗಿ ಫಳ ಫಳ ಹೊಳೆಯುತ್ತಿದ್ದ ನೀರ ಹನಿಗಳ ಅಲುಗಿಸಿ ಬೀಳಿಸಿ ಅದನ್ನು ಬೊಗಸೆಯಲ್ಲಿ ಹಿಡಿಯುತ್ತಾ, ನಾಚಿಕೆ ಮುಳ್ಳಿನ ಗಿಡದ ಎಲೆಗಳನ್ನು ಮೃದುವಾಗಿ ತಾಕಿ ಅದು ಮುಚ್ಚಿಕೊಳ್ಳುವುದನ್ನು ಗಮನಿಸುತ್ತಾ, ಯಾವ ಗಿಡದಲ್ಲಿ ಯಾವ ಹೂ ಬಿಟ್ಟಿದೆ ನೋಡುತ್ತಾ, ಹಕ್ಕಿಗಳ ಕೂಗು ಆಲಿಸುತ್ತಾ, ಇಬ್ಬನಿಯ ಹನಿ ಅಂಗಾಲು ತ...
 ಎಲ್ಲೇ ಹೋಗಲಿ ನಮ್ಮ  ಮನೆಗೆ ಬಂದು ಎರಡು ರೊಟ್ಟಿ ತಿಂದು ಮೊಸರು ಅನ್ನ ತಿಂದರೇನೇ ಸಮಾಧಾನ ನೋಡಿ ಅವರು ನಗುತ್ತಲೇ ಹೇಳುತ್ತಿದ್ದರು. ಎಲ್ಲಿ ಹೋಗುತ್ತೆ ರಾತ್ರಿ ಆಗುತ್ತಿದ್ದ ಹಾಗೆ ಕೊಟ್ಟಿಗೆಗೆ ಬರುತ್ತೆ ಅಜ್ಜಿ ಎಲ್ಲಾ ದನಗಳ ಜೊತೆಗೆ ಬಾರದ ಕೌಲಿಯ ಬಗ್ಗೆ ಮಾತಾಡುತ್ತಿದ್ದದ್ದು ನೆನಪಾಯಿತು. ಎಂಥ ಕೆಲಸ ಇಲ್ಲದಿದ್ರೂ ನಮ್ಮ ಮನೇಲಿ ನಮಗೆ ಬೇಜಾರಾಗೊಲ್ಲ ಊರಿನಿಂದ ಬಂದ ಅತ್ತೆ ನುಡಿಯುತ್ತಿದ್ದರು. ಯಾಕೋ ಅವರ ಮಾತು ಕೇಳುತ್ತಿದ್ದ ಹಾಗೆ ಮನಸೇಂಬ ಗೂಗಲ್ ಲಿಂಕ್ ಕೊಡುತ್ತಾ ಹೋಯಿತು. ಎಷ್ಟೊಂದು ಲಿಂಕ್ ಗಳಲ್ಲಿ ನನ್ನದೇ ಲಿಂಕ್ ಎಲ್ಲಿದೆ ಎಂದರೆ ಕಾಡಿದ್ದು  ವಿಷಾದ ಮಾತ್ರ. ಹೆಸರಿನ ಹಿಂದೆ ಇದ್ದ ಕೆ ಯಾವೂರ ಹೆಸರು ಎಂಬುದು ಹೈ ಸ್ಕೂಲ್ ಗೆ ಬರುವವರೆಗೂ ಗೊತ್ತಿರಲಿಲ್ಲ. ಇವತ್ತಿನವರೆಗೂ ಆ ಊರು ಕಂಡಿಲ್ಲ. ಅಲ್ಲಿದ್ದ ಮನೆತನದ ಹಿರಿಯರ ನೋಡಿಲ್ಲ. ಹಾಗಾಗಿ  ಅದು ಹೆಸರಿಗಂಟಿಕೊಂಡಿದೆ ಬಿಟ್ಟರೆ ನನ್ನದಲ್ಲ ಎನ್ನುವ ಭಾವ .  ಅಪ್ಪನ ಕೈ ಹಿಡಿದು ಭದ್ರಾವತಿಯ ರಸ್ತೆಗಳಲ್ಲಿ ರಾಜಕುಮಾರಿಯ ಹಾಗೆ ನಡೆದದ್ದು ಕೆಲವೇ ವರ್ಷಗಳು. ಅವನು ಕೈ ಬಿಡಿಸಿಕೊಂಡ ಮೇಲೆ ಅದರ ಬಗ್ಗೆ ಮೋಹ ಉಳಿದಿಲ್ಲ. ಊರಿಗೆ ಹೋಗುವಾಗ ಆ ರಸ್ತೆಗಳಲ್ಲಿ ಅಪ್ಪ ನೆನಪಾಗುತ್ತಾನೆ ಬಿಟ್ಟರೆ ನನ್ನೂರು ಎನ್ನಿಸುವುದಿಲ್ಲ. ಆಮೇಲೆ   ಬಂದಿದ್ದು ಸಂಪಗೋಡು ಎಂಬ ವಾರಾಹಿ ಮಡಿಲಿಗೆ. ಹುಟ್ಟಿದ್ದು ಅಲ್ಲೇ ಆಗಿದ್ದರಿಂದ, ಬಾಲ್ಯ ಕಳೆದದ್ದು ಅಲ್ಲಿಯೇ...

ವಾಗರ್ಥವಿಲಾಸ

 ಕೊಯ್ಲು ಮುಗಿದ ವಿಶಾಲವಾಗಿ ಹಬ್ಬಿ ಮಲಗಿದ್ದ ಗದ್ದೆಯ ನಡುವಿನಲ್ಲಿ ಏನೋ ಗಜಿಬಿಜಿ ಶುರುವಾಗಿತ್ತು. ಅದೇನೆಂದು ಕುತೂಹಲ ತಡೆಯದೆ ಹೋಗಿ ನೋಡಿದರೆ ಇನ್ನೆರೆಡು ದಿನದಲ್ಲಿ ಅಲ್ಲಿ ಯಕ್ಷಗಾನ ಎನ್ನುವ ಸುದ್ದಿ ಕೇಳಿ ಸಂಭ್ರಮ. ರಂಗ ಸಿದ್ಧವಾಗುವ ಮೊದಲೇ ನಾವೆಲ್ಲಿ ಕೂರುವುದು ಎನ್ನುವ ಕಿತ್ತಾಟ, ಇದು ನನ್ನ ಜಾಗ ಎಂದು ಗಡಿ ನಿರ್ಮಿಸುವ ಕೆಲಸ ಆಗಿಬಿಟ್ಟಿತ್ತು. ಆದಿನ  ಬೆಳಿಗ್ಗೆಯಿಂದಲೇ ಕಣ್ಣು ಗಡಿಯಾರದ ಕಡೆ, ಯಾವಾಗ ರಾತ್ರಿ ಆಗುವುದೋ ಎನ್ನುವ ಕಾತುರ. ಏನು ತಿಂದೆವು ಎನ್ನುವುದೂ ಗೊತ್ತಾಗದ ಹಾಗೆ ನುಂಗಿ ನಮ್ಮ ಜಾಗಕ್ಕೆ ಓಡುವ ಹೊತ್ತಿಗೆ ರಂಗ ಪ್ರವೇಶ ಆಗಿ ಹೋಗಿತ್ತು. ನಮ್ಮದೆನ್ನುವ ಜಾಗ ಕಷ್ಟಪಟ್ಟು ಗುರುತಿಸಿ ತೆಗೆದುಕೊಂಡು ಹೋಗಿದ್ದ ಕಂಬಳಿ ಹಾಸಿ ಕುಳಿತರೆ ಇಡೀ ಜಗತ್ತೇ ಮರೆಯಾಗಿ ಹೊಸದೊಂದು ಲೋಕ ಕಣ್ಣೆದೆರು ಇಳಿದಂತೆ. ಯಕ್ಷ, ಗಂಧರ್ವ, ದೇವತೆ, ರಾಕ್ಷಸರು ಎಲ್ಲರೂ ಆ ಪುಟ್ಟ ರಂಗದಲ್ಲಿ ಬಂದು ಕುಣಿದು ಮೂರು ಲೋಕಗಳು ಒಂದೆಡೆ ಮೇಳೈಸಿ ಆ ವೈಭವಕ್ಕೆ ಕಣ್ಣು ಮುಚ್ಚಿ ಹೋಗುವಾಗ ಬಡಿಯುವ ಚೆಂಡೆ, ಏರುವ ಭಾಗವತರ ಸ್ವರ. ಅದೊಂದು ವಿಸ್ಮಯ ಲೋಕ. ಆ ವಿಸ್ಮಯ ಲೋಕದಲ್ಲಿ ಕತೆ  ದಾರಿ ತಪ್ಪದ ಹಾಗೆ ಸರಿಯಾಗಿ ಕರೆದೊಯ್ಯುವವರು ಭಾಗವತರು. ಕತೆಯ ಲೋಕ ಬಿಚ್ಚಿಡುತ್ತಾ ಒಳ ನೋಟ ನಮಗೆ ಬಿಡುತ್ತಾ ಅಲ್ಲಲ್ಲಿ ದಾರಿ ತೋರಿಸುತ್ತಾ ಇಡೀ ಪ್ರಸಂಗದ ದರ್ಶನ ಮಾಡಿಸುವವರು ಅವರು. ಅಷ್ಟೇ ವಿಸ್ಮಯವಾದ ಸಾಹಿತ್ಯ ಲೋಕದ ಭಾಗವತರು ಕೆ.ವಿ ತಿರುಮಲೇಶ್ ಸರ್. ಅ...

ಅಶ್ವತ್ಥಾಮನ್

 ಬಾಲ್ಯ ಸರಿಯಿಲ್ಲದ ಮಕ್ಕಳಿಗೆ ಸಮಾಜದ ಬಗೆಗೆ ಒಂದು ಅವ್ಯಕ್ತ ಅಸಹನೆ ಇರುತ್ತದೇನೋ. ಹಲವರಿಗೆ ಅವಕಾಶ ಸಿಕ್ಕಾಗ ಅದು ವ್ಯಕ್ತವಾಗಬಹುದು. ತಾವು ಅನುಭವಿಸಿದ ಅವಮಾನ, ಆಕ್ರೋಶ ಇವುಗಳನ್ನು ಹೊರಹಾಕಲು ತಮ್ಮದೇ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಯಾರನ್ನೋ ಮೆಚ್ಚಿಸುವ ಎನ್ನುವುದಕ್ಕಿಂತ ಎದುರಿನವರ ಕಣ್ಣಲ್ಲಿ ಹೀರೋ ಅನ್ನಿಸಿಕೊಳ್ಳುವ ಮನೋಭಾವ ಸುಪ್ತವಾಗಿರುತ್ತದೇನೋ. ಇಂಥದೊಂದು ಕಾರಣಕ್ಕೆ ದುರ್ಯೋಧನನ ಕಣ್ಣಲ್ಲಿ ಹೀರೋ ಆಗುವುದಕ್ಕೆ ಅಧರ್ಮ ಎಂದೂ ಗೊತ್ತಿದ್ದೂ ಆ ಅಶ್ವತ್ಥಾಮ ಅರ್ಧರಾತ್ರಿಯಲ್ಲಿ ಎದ್ದು ಹೊರಟನಾ...  ಜೋಗಿಯವರ ಈ ಅಶ್ವತ್ಥಾಮನೂ ಹೀಗೆ. ತನ್ನ ತಾಯಿಗೆ ತನ್ನ ತಂದೆಯೆಂಬ ವ್ಯಕ್ತಿಯಿಂದಾದ ಮೋಸಕ್ಕೆ ಸೇಡು ತೀರಿಸಿಕೊಳ್ಳಲು ಹೊರಟನೇನೋ ಅನ್ನಿಸುತ್ತದೆ. ತಾಯಿಯ ನಂಬಿಕೆಗೆ ಪೆಟ್ಟು ಬಿದ್ದ ಫಲವೇನೋ ಎಂಬಂತೆ ಯಾರನ್ನೂ ನಂಬದ ಎಲ್ಲರನ್ನೂ ನಂಬಿದಂತೆ ನಟಿಸುವ ಆತ ಅದ್ಭುತ ನಟ. ಆದರೆ ಆ ನಟನೆ ಎಲ್ಲಿಂದ ಆರಂಭವಾಗಿ ಎಲ್ಲಿ ಮುಗಿಯುತ್ತದೆ ಎನ್ನುವುದು ಕೊನೆಯವರೆಗೂ ಕಾಡುವ ಹಾಗೆ ಬರೆದಿರುವ ಶೈಲಿ ಮಾತ್ರ ಬಹಳ ಚೆಂದ. ಇದು ಕಾದಂಬರಿಯ, ಸ್ವಗತವಾ , ಯಾರದ್ದೋ ಆತ್ಮಕತೆಯ ನಿರೂಪಣೆಯಾ.. ಕಾವ್ಯವಾ ಲಲಿತ ಪ್ರಬಂಧವಾ ಅಥವಾ ಅವೆಲ್ಲವೂ ಒಟ್ಟು ಸೇರಿದ ಹೊಸದೊಂದು ಬಗೆ ಹುಟ್ಟಿದಿಯಾ ಎನ್ನುವ ಆಲೋಚನೆ ಕಾಡುತ್ತಲೇ ಓದಿಸಿಕೊಂಡು ಹೋಗುತ್ತದೆ. ನಿರೂಪಕನಾಗಿ, ಪಾತ್ರವಾಗಿ ಮೂರನೆಯ ವ್ಯಕ್ತಿಯಾಗಿ ಜೋಗಿ ಕೂಡಾ ಇಡೀ ಕಾದಂಬರಿಯಲ್ಲಿ ಅಶ್ವತ್ಥಾಮನಿಗಿಂತಲೂ...

ಆಲೆಮನೆ

ಮನೆಯ ಅಂಗಳ ದಾಟಿ, ಗದ್ದೆಯ ಬಯಲಿಗೆ ಇಳಿದು ಎಡಕ್ಕೆ ತಿರುಗಿ ಅದೇ ಕೋಗಿನಲ್ಲಿ ಒಂದರ್ಧ ಮೈಲು ನಡೆದರೆ ಕೋಗಿನ ಅಂಚಿನಲ್ಲಿ ಹರಿಯುತ್ತಿದ್ದ ಆ ದೊಡ್ಡ ಹಳ್ಳ ಸಿಗುತಿತ್ತು. ಅಲ್ಲಿ ಮಾತ್ರ ಇನ್ನೊಂದು ಹಳ್ಳವೂ ಬಂದು ಸೇರಿ ಇದು ಇನ್ನಷ್ಟು ಕೊಬ್ಬುತಿತ್ತು. ಬೇಸಿಗೆಯಲ್ಲಿ ಆರಾಮಾಗಿ ಇಳಿದು ದಾಟಬಹುದಾದರೂ ಮಳೆಗಾಲದಲ್ಲಿ ಅದರ ಆರ್ಭಟ ಜೋರಾಗಿರುತ್ತಿದ್ದರಿಂದ ಅಡಿಕೆಯ ಮರದ ಸಂಕವನ್ನು ಹಾಕಲಾಗಿತ್ತು. ತುಸು ಎತ್ತರವೇ ಅನ್ನಿಸಬಹುದಾದ ಆ ಸಂಕಕ್ಕೆ ಅಲ್ಲಲ್ಲಿ ಕೋಲು ಕಟ್ಟಿ ಹಿಡಿದು ದಾಟಲು ಅನುಕೂಲ ಮಾಡಿದ್ದರು. ಆ ಸಂಕ ದಾಟಿದರೆ ಕಬ್ಬಿನಕೇರಿ. ಇದ್ದಿದ್ದು ಒಂದೇ ಮನೆ ನರಸಿಂಹ ಶಾಸ್ತ್ರಿಗಳದ್ದು. ಮಳೆಗಾಲದಲ್ಲಿ ಅಲುಗಾಡುವ ಸಂಕ, ಕೆಳಗೆ ಭೋರ್ಗೆರೆದು ಕೆಂಪಾಗಿ ಹರಿಯುವ ಹಳ್ಳ ಭಯ ಹುಟ್ಟಿಸುತ್ತಿದ್ದರಿಂದ ಹೋಗುವುದು ಕಡಿಮೆಯಾಗಿದ್ದರೂ ಸಂಕ್ರಾಂತಿ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೆವು. ಸಂಕ್ರಾಂತಿ ಮುಗಿಯುತ್ತಿದ್ದ ಹಾಗೆ ಅಲ್ಲಿ ಆಲೆಮನೆ ಶುರುವಾಗುತ್ತಿತ್ತು. ಅವರು ಕಬ್ಬು ಬೆಳೆಯುತ್ತಿದ್ದರಿಂದ ಕಬ್ಬಿನಕೇರಿ ಅಂತಾರೆ ಎಂದು ನಾವೇ ಹೆಸರಿಗೊಂದು ಕಾರಣ ಕೊಟ್ಟುಕೊಳ್ಳುತ್ತಿದ್ದೆವು. ಕಣದಲ್ಲಿ ಕೋಣವನ್ನು ಕಟ್ಟಿ ಗಾಣ ತಿರುಗಿಸುವವರು, ತುಸು ದೂರದಲ್ಲಿ ಉರಿಯುವ ದೊಡ್ಡ ಒಲೆಯಾ... ಬೆಂಕಿಯ ಗೋಳವಾ ... ಅದರ ಮೇಲೊಂದು ದೊಡ್ಡದಾದ  ಬಾಣಲೆ.. ಅದರಲ್ಲಿ ಕುದಿಯುವ ಬೆಲ್ಲ.. ಸುತ್ತಲೂ ನೋಡುವ ಜನ, ಮಾತು ಕತೆ, ಕುತೂಹಲದಿಂದ ಮುಂದಕ್ಕೆ ನುಗ್ಗುವ ನಮ್ಮ...

ಬಿದಿರಿನ ಗಳ

ಎಲ್ಲ ಋಣನೂ ಹರ್ಕೋಬೇಕು ಕಣವ್ವ.... ಸುಲಭವಾ ಖಂಡಿತ ಅಲ್ಲ, ತೀರಾ ಕಷ್ಟವೂ ಅಲ್ಲ. ಒಂದು ರೀತಿಯಲ್ಲಿ ಇಲ್ಲಿ ಎಲ್ಲವೂ ಕ್ರಮಬದ್ಧ ಹಾಗೂ ನಿಯಮಬದ್ಧ. ಅದನ್ನು ಅರ್ಥಮಾಡಿಕೊಳ್ಳದೆ ದೂಷಿಸುತ್ತೇವೆ ಅಷ್ಟೇ. ಇದು ಇನ್ನಷ್ಟು ಅರ್ಥವಾಗೋದು ಬಿದಿರಿನ ಗಳ  ಓದುವಾಗ. ಮೊಮ್ಮಗನ ಮೇಲಿನ ಅಜ್ಜಿಯ ವ್ಯಾಮೋಹ, ಆ ಪ್ರೀತಿಗೆ ಓಗೊಟ್ಟು ಹೊರಡುವ ಮೊಮ್ಮಗ ದಾರಿಯಲ್ಲಿ ಅನಿರೀಕ್ಷಿತ(?) ಘಟನೆಯಲ್ಲಿ ಸಿಲುಕಿ ಮುಂದಿನ ಅಚ್ಚರಿಯ ಬೆಳವಣಿಗೆಗೆ ಕಾರಣನಾಗುತ್ತಾನೆ. ಅವನ ಆಗಮನ ಇನ್ನೊಂದು ಜೀವದ ಅಂತ್ಯಕ್ಕೆ ಕಾರಣವಾಗುವ ಸೂಚನೆ ಇಡೀ ಕಾದಂಬರಿ ಹೀಗೆ ಇಂಥ ಅನೂಹ್ಯ ತಿರುವುಗಳ ಸಂಗಮ. ಸೂಕ್ಷ್ಮವಾಗಿ ಕುರುಹು ಬಿಡುತ್ತಲೇ , ಹಾಗೆ ಬಿಡುತ್ತಲೇ ಮತ್ತೆ ಮುಚ್ಚಿಟ್ಟುಕೊಳ್ಳುತ್ತಾ ಒಂದು ಊರಿನ ಗ್ರಾಮೀಣ ಬದುಕಿನ ರೀತಿ ನೀತಿಗಳನ್ನು ತಿಳಿಸುತ್ತಾ ಹೋಗುತ್ತದೆ. ತಾಂತ್ರಿಕ ಲೋಕದ  ಮೋಹ ಎಲ್ಲರನ್ನೂ ಒಂದಲ್ಲ ಒಂದು ಬಾರಿ ಕಾಡಿರುತ್ತದೆ . ಕೆಲವರು ಆ ಮಾರ್ಗದಲ್ಲಿ ಚಲಿಸಿದರೂ ದಕ್ಕಿಸಿಕೊಳ್ಳುವುದು ಎಲ್ಲೋ ಕೆಲವು ಮಂದಿ ಮಾತ್ರ. ಆ ಲೋಕದ ವ್ಯವಹಾರಗಳೇ ವಿಚಿತ್ರ. ಸ್ವಾತ್ವಿಕತೆ ಉಳಿಸಿಕೊಂಡ ಜೀವಗಳು ಆ ದಾರಿಯನ್ನು ಪೂರ್ಣ ಒಪ್ಪಿಕೊಳ್ಳಲಾಗದೆ ಮೋಹ ಬಿಡಲಾಗದೆ ಚಡಪಡಿಸುತ್ತವೆ. ನರಸಪ್ಪನವರದ್ದು ಇದೆ ತೊಳಲಾಟ. ಆದರೆ ಅವರಿಗೆ ಸಿಕ್ಕ ಗುರುಗಳು ಈ ತೊಳಲಾಟ ಅರ್ಥ ಮಾಡಿಕೊಂಡು ಕೋಟೆಯೊಳಗೆ ಇದ್ದು ಯುದ್ಧ ಮಾಡು ಎಂಬ ಸೂಚನೆ ಕೊಟ್ಟು ಅದಕ್ಕಾಗಿ ತಯಾರಿ ಮಾಡುತ್ತಾರೆ. ನಮ್ಮ ನಮ್ಮ ಮಿತಿಗೆ...
ಕುದಿಕುದಿದು, ಉರಿದುರಿದು ಕೋಪ ಮುಗಿಯಿತೋ ಅಥವಾ ಮನೆಗೆ ಸಮಯವಾಯಿತು ಎಂದೋ ಸೂರ್ಯ ತನ್ನ ಬಿಸಿ ಕಳೆದುಕೊಳ್ಳುತ್ತಿದ್ದ.ನಡು ಆಕಾಶದಲ್ಲಿದ್ದವನು ಇಳಿಯಲು ಶುರುಮಾಡಿದ್ದ. ಇಳಿಜಾರಿನಲ್ಲಿ ವೇಗ ಹೆಚ್ಚು ಎನ್ನುವ ಹಾಗೆ ಅವನು ಚಲಿಸುವುದು ಕಾಣಿಸುತ್ತಿತ್ತು. ಒಳಗೂ ಹೊರಗೂ ಒಂದು ರೀತಿಯ ಧಗೆ.ಗಾಳಿಗೂ ತಾಕಿದ ಬಿಸಿ. ಒಳಗಿದ್ದರೆ ಸೆಕೆ ಇನ್ನೂ ಜಾಸ್ತಿ ಹೋಗಿ ಮಾವಿನಮರದ ಕೆಳಗೆ ಆದರೂ ಕುಳಿತರೆ ಜೀವ ತಣ್ಣಗೆ ಆಗಬಹುದೇನೋ ಎನ್ನಿಸಿ ಎದ್ದರೆ ಅದು ಕಾಣಿಸಿತು. ಇಳಿಯುತ್ತಿದ್ದ ಸೂರ್ಯನನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತಾ ಸದ್ದಿಲ್ಲದೇ ಕುಳಿತಿತ್ತು ಆ ಬೆಳ್ಳಕ್ಕಿ. ಅದೋ ವಯಸ್ಸಾದ ತೆಂಗಿನ ಮರ. ಒಂದೊಂದೇ ಗರಿಗಳನ್ನು ಕಳಚಿಕೊಂಡು ಮತ್ತೊಂದು ಹೊಸತರ ಜವಾಬ್ದಾರಿ ಹೊತ್ತು ಎತ್ತರಕ್ಕೆ ನಿಂತಿತ್ತು. ಇಳಿಯುವ ಸೂರ್ಯನನ್ನು ದಿಟ್ಟಿಸಲು ಇಳಿವಯಸ್ಸಿನ ಮರದಲ್ಲಿ ಕಾಲೂರುವ ಮುನ್ನ ಅದು ಪ್ರಶಸ್ತವಾದ ಜಾಗವನ್ನು ಆರಿಸಿಕೊಂಡಿತ್ತು.ಮೇಲಿನ ಗರಿಯ ನೆರಳಿನ ಅಡಿಯಲ್ಲಿ ಹೆಚ್ಚು ಅಲುಗಾಡದ ಗರಿಯ ಬುಡದಲ್ಲಿ ನಿಂತಿತ್ತು. ಎತ್ತರದಲ್ಲಿ ನಿಂತಿದ್ದರೂ ಗಾಳಿಯ ಚಲನೆಗೆ, ಗರಿಯ ಅಲುಗಾಟಕ್ಕೆ, ಮರದ ತೂಗುವಿಕೆಗೆ ಎಲ್ಲವಕ್ಕೂ ಹೊರತಾಗಿ ನಿಲ್ಲುವುದೇ ತನ್ನ ಧ್ಯೇಯ ಎಂದು ಅಲುಗಾಡದೆ , ಕಾಲವೇ ಸ್ತಬ್ಧವಾಗಿ ಹೋಗಿದೆಯೇನೋ, ನಿಂತಲ್ಲೇ ಕಲ್ಲಾಗು ಎಂಬ ಶಾಪಕ್ಕೆ ತುತ್ತಾಗಿದೆಯೇನೋ ಅನ್ನಿಸುವ ಹಾಗೆ, ಕಾಲುಗಳು ಪಾತಾಳಕ್ಕೆ ಇಳಿದು ಬೇರು ಬಿಟ್ಟಿದೆಯೇನೋ ಎಂಬ ಹಾಗೆ ಕಿಂಚಿತ್ತೂ ಅಲುಗಾಡದೆ ...

ಲಾಕ್ ಡೌನ್

ಹೊರಡುವಾಗ ಪರಿಸ್ಥಿತಿ ಇಷ್ಟು ಕ್ಲಿಷ್ಟಕರವಾಗಬಹುದು ಎನ್ನುವ ಕಿಂಚಿತ್ತೂ ಊಹೆಯೂ ಇರಲಿಲ್ಲ. ಒಂದು ಕೇಸ್ ಗೆ ಇಷ್ಟೊಂದು ಪ್ಯಾನಿಕ್ ಆಗಬೇಕಾ ಎನ್ನುವ ಯೋಚನೆಯಲ್ಲಿಯೇ ಊರಿಗೆ ಹೊರಡಲು ತಯಾರಿರಲಿಲ್ಲ. ಯಾವಾಗ ಆದಷ್ಟು ಮನೆಯಿಂದಲೇ ಕೆಲಸ ಮಾಡಿ ಅನ್ನುವ ಆದೇಶ ಬಂತೋ ಆಗ ಕೊಂಚ ಯೋಚಿಸುವ ಹಾಗಾಗಿತ್ತು. ನೋಡು ಹೋಗುವುದಾದರೆ ಎಲ್ಲರೂ ಹೋಗುವ, ಅಬ್ಬಬ್ಬಾ ಅಂದರೆ ಒಂದು ಹದಿನೈದು ದಿನ ಆಗಬಹುದು. ರಜೆಗೆ ಅಪ್ಲೈ ಮಾಡಿ ಬಾ ಇಲ್ಲಾಂದ್ರೆ ಎಲ್ಲರೂ ಒಟ್ಟಿಗೆ ಇಲ್ಲೇ ಇರುವ ಅಂದಿದ್ದೆ. ಅವನಾಗಲೇ ದೇಶ ವಿದೇಶಗಳ ಪರಿಸ್ಥಿತಿ ಅವಲೋಕಿಸುತ್ತಿದ್ದ. ಅಪಾಯದ ಅರಿವು ಕೊಂಚವಿತ್ತು. ಹಾಗಾಗಿ ಊರಿಗೆ ಹೋಗುವ ಎನ್ನುವ ಯೋಚನೆ ಮಾಡಿದ್ದೆವು. ಬಹುಶ ಅವನ ತಲೆಯಲ್ಲಿ ಹೋಗಿ ಬಿಟ್ಟು ಬರುವಾ ಅನ್ನುವ ಯೋಚನೆಯೂ ಇತ್ತೇನೋ. ಹೋಗಿ ಎರಡು ದಿನಕ್ಕೆ ಮೋದಿ ಜನತಾ ಕರ್ಪ್ಯೂ ಅಂದರು. ಮತ್ತೊಂದು ದಿನಕ್ಕೆ ಲಾಕ್ ಡೌನ್. ಊರಿಗೆ ಬರುವಾಗಲೂ ಕೊಂಚ ಆತಂಕವೇ ಇತ್ತು. ದಾರಿಯಲ್ಲಿ ಎಲ್ಲೂ ನಿಲ್ಲಿಸದೆ ಬಂದು ಬಂದ ಕೂಡಲೇ ಬಂದಿರುವ ಮಾಹಿತಿ ಆರೋಗ್ಯ ಇಲಾಖೆಗೆ ತಲುಪಿಸಿ ನೆಮ್ಮದಿಯಾಗಿದ್ದೆವು. ಸದ್ಯ ಬಂದು ಒಳ್ಳೆಯದು ಮಾಡಿದ್ರಿ ಅಂತ ಗೆಳೆಯರು, ಆತ್ಮೀಯರು ಹೇಳುವಾಗ ಆತಂಕ ಕೊಂಚ ಕರಗಿತ್ತು. ಇನ್ನೇನು ಸಹಜಸ್ಥಿತಿಗೆ ಮರಳಬೇಕು ಅನ್ನುವಷ್ಟರ ಹೊತ್ತಿಗೆ ಯುಗಾದಿ ಬಂದು ನಮ್ಮ ಮು.ಮ ಗಳು ಯಾರು ಬೇಕಾದರೂ ಬರಬಹುದು, ಯಾರು ಬೇಕಾದರೂ ಹೋಗಬಹುದು ಎಂದು ಹೇಳಿದರೋ ಆಗ ಊರಿಗೆ ಬಂದ ನೂರಾರು ಜನರನ್ನು ಕ್ವಾರಂ...

ಅಯ್ಯಪ್ಪ. (ಉಭಯಭಾರತೀಯರು)

ಬೆಳಗಿನ ಜಾವದ ಸಿಹಿ ನಿದ್ದೆಯಲ್ಲಿದ್ದವರಿಗೆ ಚಳಿಯ ತಡುವಿಕೆಗೆ ಎಚ್ಚರವಾಗಿ ಹೊದ್ದ ಕಂಬಳಿಯನ್ನು ಇನ್ನಷ್ಟು ಬಿಗಿಯಾಗಿ ಎಳೆದು ಕಿವಿಗೆ ಗಾಳಿ ಹೋಗದಂತೆ ಮಾಡುವ ಪ್ರಯತ್ನದಲ್ಲಿರುವಾಗಲೇ ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನುವ ಕೂಗು ಕೇಳಿಸುತಿತ್ತು. ಅದಾಗಲೇ ನಾಲ್ಕು ಗಂಟೆ ಆಗಿ ಹೋಯಿತಾ ಎಂದು ಇನ್ನಷ್ಟು ಮುದುರಿ ಮಲಗುವಾಗ ಅರೆ ಅವರಿಗೆ ಚಳಿ ಯಾಕಾಗಲ್ಲ ಎನ್ನುವ ಪ್ರಶ್ನೆ ಕಾಡುತಿತ್ತು. ಮಲೆನಾಡಿನ ಅದರಲ್ಲೂ ಧನುರ್ಮಾಸದ ಚಳಿಯ ಪರಿ ಕೇಳುವುದೇ ಬೇಡ. ಅಲ್ಲಿ ಚಳಿಯನ್ನು ಅಳೆಯುತ್ತಿದ್ದದ್ದೆ ಹೊದೆಯಲು ಎಷ್ಟು ಕಂಬಳಿ ಬೇಕು ಎನ್ನುವ ಆಧಾರದ ಮೇಲೆ. ಡಿಸೆಂಬರಿನ ಆ ಕರುಳು ನಡುಗಿಸುವ ಚಳಿಗೆ ಮೂರು ಕಂಬಳಿಯಾದರೂ ಬೇಕಿತ್ತು. ಇಂಥ ಚಳಿಗಾಲದಲ್ಲಿ ಬ್ರಾಹ್ಮಿ ಮಹೂರ್ತ ದಲ್ಲಿ ಎದ್ದು, ತುಂಗೆಯಲ್ಲಿ ಸ್ನಾನ ಮಾಡಿ ಒಂದು ಪಂಚೆ ಉಟ್ಟು , ಶಲ್ಯ ಹೊದ್ದು ಅಯ್ಯಪ್ಪನ ಸ್ಮರಣೆ ಮಾಡುತ್ತಾ ಬರಿಗಾಲಿನಲ್ಲಿ ದೇವಸ್ಥಾನದವರೆಗೂ ಸುಮಾರು ಒಂದು ಮೈಲಿ ಆ ಕತ್ತಲೆಯಲ್ಲಿ ನಡೆದು ಬರುತ್ತಿದ್ದ ಅವರು ಅಚ್ಚರಿ ಹುಟ್ಟಿಸುತ್ತಿದ್ದರು. ಆ ಚಳಿಯನ್ನು ಅವರು ಎದುರಿಸುತ್ತಿದ್ದದ್ದು ಹೇಗೆ? ಇನ್ನಷ್ಟು ಬೆಚ್ಚಗೆ ಮಲಗಬೇಕು ಎನ್ನುವ ಆಸೆ ಕೊಡವಿ ಏಳುವುದು ಸುಲಭವಾ ಎನ್ನುವ ಪ್ರಶ್ನೆಮೂಡುವುದರ ಜೊತೆಜೊತೆಗೆ ಅವರ ಧೀ   ಶಕ್ತಿ ಬೆರಗು ಹುಟ್ಟಿಸುತ್ತಿತ್ತು. ಒಂದು ಹೆಸರು ಅಥವಾ ವ್ರತ ಇಷ್ಟು ಗಟ್ಟಿಗರನ್ನಾಗಿ ಮಾಡಬಹುದಾ.. ಆ ದೇವಾಲಯದ ಆಕರ್ಷಣೆ ಇಷ್ಟು ಸಂಕಲ್ಪ ಶಕ್ತಿ ತುಂಬಬಹುದಾ ಎನ...

ಸಾವರ್ಕರ್.

ಬ್ಯಾರಿಸ್ಟರ್ ಪದವಿ ಪಡೆಯಲು ಹೊರಟ ಸಾವರ್ಕರ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು. ಇಡೀ ಹಡಗಿನಲ್ಲಿ ಇದ್ದದ್ದು ಬೆರಳೆಣಿಕೆಯಷ್ಟು ಮಂದಿ ಭಾರತೀಯರು ಮಾತ್ರ. ಅದರಲ್ಲಿದ್ದ ಬ್ರಿಟಿಷರು ಪಂಚೆ ಉಟ್ಟು ಕಿವಿಗೆ ಕಡಕು ಹಾಕಿಕೊಂಡು ನಿಂತಿದ್ದ ಅವರನ್ನು ನೋಡಿ ಯಾರೋ ಹಳ್ಳಿ ಗಮಾರ ಎಂದು ತಿರಸ್ಕಾರದಿಂದ ಕಾಣುತ್ತಿದ್ದರು. ಮೊತ್ತ ಮೊದಲ ಬಾರಿಗೆ ಶತ್ರುಗಳ ಎದುರಿಗೆ ಒಂಟಿಯಾಗಿ ನಿಂತ ಭಾವ ಕಾಡುವ ಹೊತ್ತಿಗೆ ಒಬ್ಬ ಸಿಖ್ ಹುಡುಗ ಹರನಾಮ ಸಿಂಹ ಎದುರಾಗಿದ್ದ. ನೀವೇನಾ ಸಾವರ್ಕರ್ ಎಂದು ಕೇಳಿದ್ದ. ಹೌದು ಎನ್ನತ್ತಲೇ ಸಧ್ಯ ನನ್ನ ನಾವಿಬ್ಬರೂ ಒಂದೇ ಕೋಣೆ, ಭಾರತೀಯರೇ ಸಿಕ್ಕರಲ್ಲ ಎಷ್ಟು ಖುಷಿಯಾಗುತ್ತಿದೆ ಗೊತ್ತೇ ಅಂದಿದ್ದ. ಅಲ್ಲಿದ್ದ ಎಂಟು ಹತ್ತು ಜನ ಭಾರತೀಯರಲ್ಲಿ ಒಬ್ಬ ಹಿರಿಯ ಪಂಜಾಬಿ ಒಬ್ಬರಿದ್ದರು. ಅವರಾಗಲೇ ಹತ್ತು ಹಲವು ಸಲ ಲಂಡನ್ ಹೋಗಿ ಬಂದಿದ್ದರಿಂದ ಅವರನ್ನೇ ವಿದೇಶಿ ರೀತಿ ನೀತಿ, ರಿವಾಜು ಕಲಿಯುವ ಗುರುಗಳಾಗಿ ಸ್ವೀಕರಿಸಿದರು ಸಾವರ್ಕರ್.ವೇಷ ಭೂಷಣ, ತಿನ್ನುವ ರೀತಿ ಎಲ್ಲವನ್ನೂ ಹೊಸದಾಗಿ ಕಲಿಯಬೇಕಿತ್ತು. ಅಲ್ಲಿನ ಸಮಾಜದಲ್ಲಿ ಬೆರೆತಾಗ ಮಾತ್ರ ಉದ್ದೇಶ ಸಾಧನೆ ಸಾಧ್ಯ ಎಂದು ಅರಿವಿದ್ದ ಸಾವರ್ಕರ್ ಕಲಿಯಲು ತೊಡಗಿದ್ದರು. ಸಂಜೆಯ ಹೊತ್ತು ಎಲ್ಲರೂ ಹಡಗಿನ ಡೆಕ್ ಮೇಲೆ ಓಡಾಡಲು ಹೋಗುತ್ತಿದ್ದರು. ಹರನಾಮ ಸಿಂಹನ ಪೇಟವನ್ನು ನೋಡಿ ಅಲ್ಲಿದ್ದ ಬ್ರಿಟಿಶ್ ಹುಡುಗರು ನಗುತ್ತಿದ್ದರು, ಹತ್ತಿರ ಬಂದು ಇದೇನು ವಿಚಿತ್ರ ವೇಷ ಎಂದು ಅಣಕಿಸುತ್ತಿದ್ದರು. ಅ...

ಧರ್ಮಶ್ರೀ....

ಪುಟ್ಟಿ ಯಾವತ್ತೂ ಇದ್ದಲ್ಲೇ ಎಲ್ಲವನ್ನೂ ಹುಡುಕೋಕೆ ಹೋಗಬಾರದು. ಒಂದು ಹೆಜ್ಜೆ ಹೊರಗೆ ಬಾ ಕಣ್ಣು ತೆರೆದು ನೋಡು, ಮನಸ್ಸು ಸ್ವಲ್ಪ ವಿಶಾಲವಾಗಿಸಿಕೋ. ಪ್ರೀತಿ ಅನ್ನೋದು ಬೆಳಕು ಚೆಲ್ಲಿದಂತೆ ಹರಡಿರೋದು ಕಾಣಿಸುತ್ತೆ. ಯಾಕೆ ನಮ್ಮನ್ನು ನಾವೇ ಒಂದು ಚೌಕಟ್ಟಿನೊಳಗೆ  ಸೀಮಿತ ಮಾಡ್ಕೊಬೇಕು ಹೇಳು? ಯಾಕೆ ತನ್ನವರು ಅಂದುಕೊಂಡವರು ಮಾತ್ರ ಪ್ರೀತಿ ಕೊಡಬೇಕು ಅಂತ ಬಯಸಬೇಕು. ಪ್ರೀತಿ ಎಲ್ಲೆಯನ್ನು ಮೀರಿದ್ದು ಅಂತ ಓದೋ ನೀವುಗಳೇ ಅಲ್ವ ಕೊಟೇಶನ್ ಹೇಳೋದು ಯಾಕೆ ಅದನ್ನು ಅರ್ಥಮಾಡ್ಕೊಂಡು ಅಳವಡಿಸಿಕೊಳ್ಳಬಾರದು. ಅಪ್ಪನ ನೆನಸಿಕೊಂಡು ಅಳುತ್ತಿದ್ದವಳನ್ನು ತಲೆ ಸವರಿ ಎದುರಿಗೆ ಕೂರಿಸಿಕೊಂಡು ಮೆಲುವಾಗಿ ನ.ಕೃಷ್ಣಪ್ಪ ತಾತ ಮಾತನಾಡುತ್ತಿದ್ದರೆ ಅಳು ಯಾವಾಗ ನಿಂತಿತು ಅನ್ನುವ ಅರಿವೂ ಇಲ್ಲದೆ ಕಣ್ಣು ಕಿವಿ ಇಷ್ಟಗಲ ತೆರೆದು ಅವರನ್ನೇ ನೋಡುತ್ತಿದ್ದೆ. ಅದು ಅಸಾಧ್ಯ ಏನೋ ಸಮಾಧಾನಕ್ಕೆ ಹೇಳುತ್ತಿದ್ದಾರೆ ಅಂತ ಕಿಂಚಿತ್ತೂ ಅನ್ನಿಸದೆ ಮನಸ್ಸಿನ ಭಾರ ಇಳಿದು ಹೊಸ ದಾರಿ ತುಸು ತುಸುವೇ ತೆರೆದುಕೊಳ್ಳುತ್ತಿತ್ತು. ಮಾತಿನ ಹಿಂದಿನ ಅನುಭವ, ಪ್ರಾಮಾಣಿಕತೆ ಎಲ್ಲಕ್ಕಿಂತ ಹೆಚ್ಚಾಗಿ ಪುಟ್ಟಿ ಅನ್ನುವ ಪದದಲ್ಲಿದ್ದ ತುಂಬು ಪ್ರೀತಿ ಬದುಕಿಗೆ ಚುಕ್ಕು ತಟ್ಟಿ ಮಲಗಿಸುವ ಅಮ್ಮನ ಹಾಗಿತ್ತು. ಅಂತ ಕೃಷ್ಣಪ್ಪ ತಾತ ಒಂದು ಪಾತ್ರವಾಗಿದ್ದಾರೆ ಎಂದ ಕಾದಂಬರಿ ಓದದೆ ಇರುವುದಾದರೂ ಹೇಗೆ? ಧರ್ಮಶ್ರೀ ಓದಲು ಶುರುಮಾಡಲು ಅದೇ ಪ್ರಬಲ ಕಾರಣ. ಅಲ್ಲಿ ಸತ್ಯ ಅಮ್ಮನನ್ನು ಕಳೆದುಕೊ...

ನಿರಾಕರಣ

ತುಂಬು ಕುಟುಂಬ ಅದು. ಮೊದಲನೆಯ ಮಗ ನೋಡಲು ಆಜಾನುಬಾಹು, ಸುಂದರ. ಬುದ್ಧಿವಂತ ಕೂಡಾ. ಇದ್ದಕ್ಕಿದ್ದ ಹಾಗೆ ಏನಾಯಿತೋ ಏನೋ ಮನೆ ಬಿಟ್ಟು ಹೋದವನು ತಾನು ಸನ್ಯಾಸಿ ಆಗಿದ್ದೇನೆ ಎಂದು ಪತ್ರ ಬರೆದಿದ್ದ. ತಿಳಿ ಹೇಳುವುದರಲ್ಲಿ ಸೋತ ಮನೆಯವರು ಎರಡನೆಯ ಮಗನ ಮದುವೆ ನಿಶ್ಚಯಿಸಿದ್ದರು. ಮದುವೆಯಲ್ಲಿ ಮದುಮಕ್ಕಳಿಗಿಂತ ಮದುವೆಗೆ ಬಂದಿದ್ದ ಕಾವಿ ಉಟ್ಟ, ಗಡ್ದದಾರಿಯಾದ, ಉದ್ದ ಕೂದಲಿನ ವರನ ಅಣ್ಣನ ಮೇಲೆಯೇ ಕಣ್ಣು. ಸನ್ಯಾಸವೆಂದರೆ ಆಕರ್ಷಣೆಯಾ ಸನ್ಯಾಸಿ ಆಕರ್ಷಕನ ಎಂದು ಅರಿವಾಗದ ವಯಸ್ಸು, ಆದರೂ ಯಾವ ಚಿತ್ತಾರವೂ ಇಲ್ಲದ ಆ ಕೇಸರಿ ಸೆಳೆದದ್ದಂತೂ ಹೌದು. ಅದೆಂಥಾ ಸೆಳೆತವಿದ್ದಿರಬಹುದು ಎಂದು ಆಲೋಚಿಸುವಾಗಲೆಲ್ಲ ಬಾಲ ಹನುಮ ನೆನಪಾಗುತ್ತಾನೆ. ಸೂರ್ಯನನ್ನು ನೋಡಿ ಹಣ್ಣು ಎಂದು ಭ್ರಮಿಸಿ ಆಗಸಕ್ಕೆ ನೆಗೆದ ಅವನಿಗೆ ನಿಜವಾಗಲು ಆಕರ್ಷಿಸಿದ್ದು ಹಣ್ಣಾ ಅಥವಾ ಕೇಸರಿಯ ಬಣ್ಣವಾ.... ನಿರಾಕರಣ ಓದುವಾಗ ಕಾಡಿದ್ದು ಇಂಥವೇ ಪ್ರಶ್ನೆಗಳು. ನರಹರಿಯನ್ನು ಬದುಕಿನುದ್ದಕ್ಕೂ ಕಾಡಿದ್ದು ಗೊಂದಲಗಳು. ನಿರಾಕರಿಸುತ್ತಲೇ ಒಪ್ಪಿಕೊಳ್ಳುತ್ತಾ, ಒಪ್ಪಿಕೊಳ್ಳುತ್ತಲೇ ನಿರಾಕರಿಸುತ್ತಾ ಸಾಗುವ ಅವನ ಯಾತ್ರೆಗೆ ಒಂದು ನಿರ್ಧಿಷ್ಟ ಗುರಿಯಿರಲೇ ಇಲ್ಲ. ಹೊಯ್ದಾಡುವ ಯಾವ ದೀಪ ತಾನೇ ಸರಿಯಾಗಿ ಬೆಳಕು ನೀಡಬಲ್ಲದು?  ಬೆಳಕು ಸಿಗಬೇಕಾದರೆ ದೀಪ ಸ್ತಬ್ಧವಾಗಬೇಕು. ಸನ್ಯಾಸ ಒಲಿಯಬೇಕಾದರೆ ಮನಸ್ಸು ಹೆಪ್ಪುಗಟ್ಟಬೇಕು. ಮನದೊಳಗೆ ಕಾವಿದ್ದರೆ ಅಲ್ಲೊಂದು ನದಿ ಹರಿಯುತ್ತಲೇ ಇರುತ್ತದೆ. ಹರಿ...

ವಿಜಯ ಕರ್ನಾಟಕ 19.01.20

ಅಪ್ಪ, ಅಮ್ಮ ಹಾಗೂ ಮೂವರು ಮಕ್ಕಳಿದ್ದ  ಕುಟುಂಬ ಅದು. ಭಾರೀ ಶ್ರೀಮಂತರಲ್ಲದಿದ್ದರೂ ಹೊಟ್ಟೆ ಬಟ್ಟೆಗೆ ಕೊರತೆಯಿರಲಿಲ್ಲ. ಸಂತೃಪ್ತ ಕುಟುಂಬ. ನೆಮ್ಮದಿಯಾಗಿ ಸಾಗುತ್ತಿದ್ದ ಹಡಗಿಗೆ ಬಿರುಗಾಳಿ ಅಪ್ಪಳಿಸಿ ಅಡಿಮೆಲಾಗುವ ಹಾಗೆ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಅಪ್ಪ ಅಸುನೀಗಿದ್ದರು. ಕಾರ್ಯಗಳೆಲ್ಲಾ ಮುಗಿದು ಮುಂದೇನು ಎಂದು ಯೋಚಿಸಬೇಕು ಅನ್ನುವ ಹೊತ್ತಿಗೆ ಹತ್ತಿರದ ನೆಂಟರಿಷ್ಟರು ತುಸು ಗಡಿಬಿಡಿಯಲ್ಲಿಯೇ ಹೊರಟಿದ್ದರು. ಒಂದು ಕ್ಷಣ ಅಲ್ಲಿ ಉಳಿದರೆ ಯಾವ ಜವಾಬ್ದಾರಿ ಬೀಳುವುದೋ ಎಂದು ಹೊರಡಲು ಅವಸರಿಸುತ್ತಿದ್ದ ಅವರನ್ನು ನೋಡಿ ಹಿರಿಯವನು ದಂಗಾಗುವ ಹೊತ್ತಿಗೆ ತೀರಾ ಹಚ್ಚಿಕೊಳ್ಳೋಕೆ ಹೋಗಬೇಡಾ ಯಾವತ್ತಿದ್ದರೂ ಭಾರವೇ, ಅವರವರ ಪಾಡು ಅವರವರು ಏನಾದರೂ ಮಾಡಿಕೊಳ್ಳಲಿ ಎಂದು ತೀರಾ ಹತ್ತಿರದ ಕುಟುಂಬದ ಹಿರಿಯರೊಬ್ಬರು ಆಡುವ ಮಾತು ಕೇಳಿಸಿ ಮೊದಲೇ ಆಘಾತಗೊಂಡ ಮನಸ್ಸು ಇನ್ನಷ್ಟು ಕುಸಿದಿತ್ತು. ಅಸಹಾಯಕತೆಗೆ ಅಳುವೇ ಬಂದಿತ್ತು. ದುಃಖ, ಆಕ್ರೋಶಗಳ ನಡುವೆಯೇ ಮನಸ್ಸು ಉಹೂ ಎಷ್ಟೇ ಕಷ್ಟವಾದರೂ ತೊಂದರೆಯಿಲ್ಲ ನನ್ನ ಕುಟುಂಬವನ್ನು ಕಾಪಾಡಿ ಸಾಧಿಸಿ ತೋರಿಸುತ್ತೇನೆ ಎಂದು ಶಪಥ ಮಾಡಿತ್ತು. ನಂತರ ಛಲದಿಂದ ಅದೊಂದು ವ್ರತವೆಂಬಂತೆ ಎದುರಾದ ಸಂಕಷ್ಟವನ್ನೆಲ್ಲಾ ಎದುರಿಸಿ, ನೆಂಟರಿಷ್ಟರ ಎದುರು ಕಿಂಚಿತ್ತೂ ಸಹಾಯ ಬೇಡದೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಚಿಕ್ಕದೊಂದು ಉದ್ಯೋಗ ಹಿಡಿದು ಶ್ರಮವಹಿಸಿ ದುಡಿದು, ನಂಬಿಕೆ ಗಳಿಸಿ ಹಂತಹಂತವಾಗಿ ಮೇಲಕ್ಕೇರಿ ಮನೆಯ ನ...

ಶಿಶಿರ....

ಶಿವರಾತ್ರಿಗೆ ಶಿವ ಶಿವಾ ಅಂತ ಚಳಿ ಹೋಗೋದು.. ಅಲ್ಲಿಯವರೆಗೆ ಚಳಿ ಕಾಟ ತಪ್ಪಿದ್ದಲ್ಲ ಎದ್ದೇಳಿ  ಎಂದು ಮುದುರಿ ಕುಳಿತಿದ್ದ ನಮ್ಮನ್ನು ನೋಡಿ ಹೇಳಿದ್ದಳು ಅಜ್ಜಿ. ಮುದುರಿ ಕುಳಿತಿದ್ದು ಬರೀ ಚಳಿಗೆ ಮಾತ್ರವಲ್ಲ ಮೈ ಒಡೆದು ಉರಿಯುವುದಕ್ಕೆ ಎಂದು ಹೇಳಲು ಬಾಯಿತೆರೆದವಳ ಕಣ್ಣು ಕೈ ಕಾಲುಗಳ ಮೇಲೆ ಬಿದ್ದು ಮೌನವಾಗಿತ್ತು. ನಮ್ಮ ಮೈ ನಮಗೆ ನೋಡಿಕೊಳ್ಳಲು ರೇಜಿಗೆ ಅನ್ನಿಸುವ ಹಾಗಿತ್ತು. ತಿರುಗಿ ನೋಡಿದರೆ ಅವಳ ಕಾಲಿನ ಹಿಮ್ಮಡಿ ಗದ್ದೆ ಕೊಯ್ಲಿನ ಬಳಿಕ ಬಿರುಕು ಬಿಡುವ ಗದ್ದೆಯ ಹಾಗೆ ಕಾಣಿಸಿ ನಾವೇ ಪರವಾಗಿಲ್ಲ ಪಾಪ ಅನ್ನಿಸಿತು. ಪುಷ್ಯ ಮಾಸದ ಚಳಿಯೇ ಹಾಗೆ ಪತರಗುಟ್ಟಿಸಿ ಬಿಡುತ್ತದೆ. ಇದೇ ಕಾಲದಲ್ಲಿ ಬರುವ ಅಡಿಕೆ ಕೊಯ್ಲು ಅದಕ್ಕಿಷ್ಟು ಆಜ್ಯ ಸುರಿದುಬಿಡುತ್ತದೆ. ಆ ಚಳಿಗೆ ಮುದುರುವ ದೇಹದ ಚರ್ಮವನ್ನು ಅಡಿಕೆಯ ಚೊಗರು ಇನ್ನಷ್ಟು ಮುದುರುವ ಹಾಗೆ ಮಾಡಿ ಒಣಗಿಸಿ ಬಿಡುತ್ತದೆ. ಮೈಗೂ ಔಷಧಿ ಹೊಡೆದ ಕೊನೆಯ ಬಣ್ಣಕ್ಕೂ ಕಿಂಚಿತ್ತೂ ವ್ಯತ್ಯಾಸವಿಲ್ಲದ ಏಕ ಭಾವ. ಸುಲಿಯುವಾಗಿನ ಚೊಗರು ಆ ಬಿರುಕುಗಳಲ್ಲಿ ಇಂಗಿ ಕಪ್ಪಾಗಿ, ಬಿರುಕು ಇನ್ನಷ್ಟು ಅಗಲವಾಗಿ ಮೈಯೆನ್ನುವುದು ಹಾವಿನ ಪೊರೆಯಂತೆ ಕಾಣಿಸುತ್ತಾ ಚಳಿಗೆ ಹಲ್ಲು ಕಟಕಟಿಸುವ ಹಾಗೆ ಚರ್ಮ ಚುರು ಚುರು ಎನ್ನುತ್ತಿರುತ್ತದೆ. ಹಚ್ಚಿದ ಎಳ್ಳೆಣ್ಣೆ ಬೇಸಿಗೆಯ ಅಕಾಲಿಕ ಮಳೆ ಸುರಿದಂತೆ ಹಚ್ಚಿದ ಕುರುಹೂ ಇಲ್ಲದೆ ಆರಿ ಹೋಗುತ್ತದೆ.  ಮೈ ಮುರಿಯುವ ಕೆಲಸ ಉರಿ ಎರಡೂ ಚಳಿಯಷ್ಟೇ ಸಮೃದ್ಧವಾಗಿ ಆವರಿಸಿಕೊಳ...